ಕಾಂಗ್ರೆಸ್‌ ಪಕ್ಷಕ್ಕೆ ಶಾಕ್‌ ನೀಡಿದ ಕೇಂದ್ರ ಸರ್ಕಾರ….!

ನವದೆಹಲಿ:

    ಚುನಾವಣಾ ಬಾಂಡ್ ವಿಚಾರವಾಗಿ ಸುಪ್ರೀಂ ಕೋರ್ಟ್ ತೀಪ್ರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ದ ಮುಗಿಬಿದ್ದಿದ್ದ ಕಾಂಗ್ರೆಸ್ ಪಕ್ಷಕ್ಕೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದ್ದು, ಪಕ್ಷದ ಎಲ್ಲ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ ಎನ್ನಲಾಗಿದೆ.

   ಈ ಬಗ್ಗೆ ಸ್ವತಃ ಕಾಂಗ್ರೆಸ್ ಪಕ್ಷದ ವಕ್ತಾರ ಹಾಗೂ ಹಿರಿಯ ನಾಯಕ ಅಜಯ್ ಮಕೇನ್ ಮಾಹಿತಿ ನೀಡಿದ್ದು, ಈ ಕುರಿತು ನಡೆದ ಸುದ್ದಿಗೊಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು. ‘ಪಕ್ಷದ ಎಲ್ಲಾ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ವಿದ್ಯುತ್ ಬಿಲ್ ಪಾವತಿ ಮಾಡಲೂ ಹಣವಿಲ್ಲ. ಭಾರತದಲ್ಲಿ ಪ್ರಜಾಪ್ರಭುತ್ವ ಸಂಪೂರ್ಣ ಅಂತ್ಯಗೊಂಡಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಸಂಪೂರ್ಣ ಅಂತ್ಯಗೊಂಡಿದೆ. ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಕಾಂಗ್ರೆಸ್ ಪಕ್ಷದ ಎಲ್ಲಾ ಖಾತೆಗಳನ್ನು ಸ್ಥಗಿತಗೊಳಿಸಿರುವುದು ತಿಳಿದು ಬಂದಿದೆ. ಅಚ್ಚರಿಯ ಸಂಗತಿ ಎಂದರೆ ಚುನಾವಣೆ ಘೋಷಣೆಗೆ ಎರಡು ವಾರ ಬಾಕಿ ಇರುವಾಗ ನಮ್ಮ ಖಾತೆಗಳನ್ನು ಫ್ರೀಜ್ ಮಾಡಿ ಈ ಸರ್ಕಾರ ಏನು ಮಾಡಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

   ‘ನಮ್ಮ ಪಕ್ಷದ ಖಾತೆಯನ್ನು ಫ್ರೀಜ್ ಮಾಡಲು ಕಾರಣ ಹಾಸ್ಯಾಸ್ಪದವಾಗಿದೆ. ನಿನ್ನೆ ಸಂಜೆ ಯುವ ಕಾಂಗ್ರೆಸ್ ಖಾತೆಗಳನ್ನೂ ಸ್ಥಗಿತಗೊಳಿಸಲಾಗಿದ್ದು, ಕಾಂಗ್ರೆಸ್ 210 ಕೋಟಿ ರೂ. ಹಣ ಪಡೆದಿದೆ, ಈ ಹಣ ಯಾವುದೇ ದೊಡ್ಡ ಉದ್ಯಮಿಗೆ ಸೇರಿಲ್ಲ. ನಾವು ಸಂಗ್ರಹಿಸಿದ ಆನ್‌ಲೈನ್ ದೇಣಿಗೆಗೆ ಸೇರಿದೆ. ದೇಶದ ಜನರು ಯುಪಿಐ ಮೂಲಕ ನಮಗೆ ಹಣ ನೀಡಿದ್ದಾರೆ. ಆ ಹಣವನ್ನು ಆದಾಯ ತೆರಿಗೆ ಇಲಾಖೆ ಸ್ಥಗಿತಗೊಳಿಸಿದೆ. ನಮ್ಮ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಇನ್ನೊಂದೆಡೆ ಬಿಜೆಪಿ ಚುನಾವಣಾ ಬಾಂಡ್ ಹಣವನ್ನು ಖರ್ಚು ಮಾಡುತ್ತಿದೆ, ಅದನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ನಮ್ಮ ಪ್ರಜಾಪ್ರಭುತ್ವದಲ್ಲಿ ಒಂದೇ ಪಕ್ಷ ಇರುವುದಾ, ಉಳಿದವರೆಲ್ಲರ ಖಾತೆಗಳು ಸ್ಥಗಿತಗೊಳ್ಳುತ್ತವೆಯೇ, ಉಳಿದ ಪಕ್ಷಗಳಿಗೆ ಅಸ್ತಿತ್ವದಲ್ಲಿರಲು ಹಕ್ಕಿಲ್ಲವೇ ಎಂದು ಕಿಡಿಕಾರಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap