ನವದೆಹಲಿ:
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯಲ್ಲಿ ಬಿಪೊರ್ ಜೋಯ್’ ಚಂಡಮಾರುತದ ಸಿದ್ಧತೆಯನ್ನು ಪರಿಶೀಲಿಸಲು ಇಂದು ಮಂಗಳವಾರ ಅಪರಾಹ್ನ ಸಭೆ ನಡೆಸುತ್ತಿದ್ದಾರೆ.
ಚಂಡಮಾರುತಗಳು ಗುಜರಾತ್ ಕರಾವಳಿಯತ್ತ ಸಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಚಂಡಮಾರುತ ಪೀಡಿತ ಎಂಟು ಜಿಲ್ಲೆಗಳ ಸಂಸದರೊಂದಿಗೆ ಸಭೆ ನಡೆಸಿ ಮುಂಜಾಗ್ರತೆ ಕ್ರಮಗಳು, ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಬಿಪೊರ್‌ಜೋಯ್ ಚಂಡಮಾರುತದ ಪರಿಣಾಮ ಬೀರುವ ಸಾಧ್ಯತೆಯಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಪತ್ತು ನಿರ್ವಹಣಾ ಸಚಿವರು ಸಹ ಸಭೆಯಲ್ಲಿ ಉಪಸ್ಥಿತರಿರುತ್ತಾರೆ. ದ್ವಾರಕಾದಲ್ಲಿ ಸಮುದ್ರದ ಪ್ರಕ್ಷುಬ್ಧ ಪರಿಸ್ಥಿತಿಗಳು ಮತ್ತು ಬಲವಾದ ಗಾಳಿಗೆ ಸಾಕ್ಷಿಯಾದ ಕಾರಣ ಮುಂಬರುವ ಬಿಪೊರ್ ಜೋಯ್ ಚಂಡಮಾರುತದ ಪ್ರಭಾವವನ್ನು ಎದುರಿಸಲು ಗುಜರಾತ್ ಸಿದ್ಧಪಡಿಸಿಕೊಳ್ಳುತ್ತಿದೆ.
ಬಿಪೋರ್‌ಜೋಯ್ ಚಂಡಮಾರುತವು ಭಾರತೀಯ ಕಾಲಮಾನ 2.30ಕ್ಕೆ ಈಶಾನ್ಯ ಮತ್ತು ಪಕ್ಕದ ಪೂರ್ವ ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಪೋರಬಂದರ್‌ನ ನೈಋತ್ಯಕ್ಕೆ 290 ಕಿಮೀ ಮತ್ತು ಜಖೌ ಬಂದರಿನ 360 ಕಿಮೀ ದಕ್ಷಿಣ-ನೈಋತ್ಯದಲ್ಲಿ ಸಂಜೆಯ ವೇಳೆಗೆ ಜಖೌ ಬಂದರಿನ ಬಳಿ ಸೌರಾಷ್ಟ್ರ ಮತ್ತು ಕಚ್ ಅನ್ನು ಜೂನ್ 15ಕ್ಕೆ ದಾಟಲು ಸಜ್ಜಾಗಿದೆ.
ಆರೆಂಜ್ ಅಲರ್ಟ್: ಬಿಪೋರ್‌ಜೋಯ್ ಚಂಡಮಾರುತವು ಜೂನ್ 15 ರ ಸಂಜೆಯ ವೇಳೆಗೆ ಗುಜರಾತ್‌ನ ಜಖೌ ಬಂದರನ್ನು ಅತಿ ತೀವ್ರ ಚಂಡಮಾರುತವಾಗಿ ದಾಟಲು ಸಿದ್ಧವಾಗಿರುವ ಕಾರಣ ಭಾರತೀಯ ಹವಾಮಾನ ಇಲಾಖೆ (IMD) ಇಂದು ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್ ಕರಾವಳಿಗೆ ಆರೆಂಜ್ ಅಲರ್ಟ್ ನೀಡಿದೆ. ಇದರ ಪರಿಣಾಮ ಗುಜರಾತ್‌ನ ಕಚ್ಛ್ ಜಿಲ್ಲೆಯ ನಲಿಯಾ ಪಟ್ಟಣದಲ್ಲಿ ಲಘು ಮಳೆಯಾಗಿದೆ.
ಜನರು ಸಮುದ್ರಕ್ಕೆ ಇಳಿಯುವುದನ್ನು ತಡೆಯಲು ಗುಜರಾತ್‌ನ ನವಸಾರಿ ಕರಾವಳಿಯ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ.
ಇಂದು ಬೆಳಗ್ಗೆ ಗುಜರಾತ್‌ನ ಓಖಾ ಬಳಿಯ ದ್ವಾರಕಾ ಕರಾವಳಿಯಿಂದ ಸುಮಾರು 50 ಭಾರತೀಯ ಕೋಸ್ಟ್ ಗಾರ್ಡ್ ಸೈನಿಕರನ್ನು ಎಎಲ್‌ಹೆಚ್ ಧ್ರುವ ಹೆಲಿಕಾಪ್ಟರ್‌ಗಳ ಮೂಲಕ ಸ್ಥಳಾಂತರಿಸಲಾಯಿತು.
“ಭಾರತೀಯ ಕೋಸ್ಟ್ ಗಾರ್ಡ್ ಎಎಲ್ ಎಚ್ ಧ್ರುವ್ ಹೆಲಿಕಾಪ್ಟರ್‌ಗಳ ಮೂಲಕ ಗುಜರಾತ್‌ನ ಓಖಾ ಬಳಿಯ ದ್ವಾರಕಾ ಕರಾವಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಾಕ್-ಅಪ್ ರಿಗ್ ‘ಕೀ ಸಿಂಗಾಪುರ’ದಿಂದ ಇಂದು ಬೆಳಿಗ್ಗೆ 50 ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ” ಎಂದು ಐಸಿಜಿ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ರೈಲು ಸೇವೆಗಳು ರದ್ದು: ಜೂನ್ 16 ರಂದು ನೈಋತ್ಯ ರಾಜಸ್ಥಾನಕ್ಕೆ ಚಂಡಮಾರುತ ‘ಬಿಪೋರ್ ಜೋಯ್’ ಪ್ರವೇಶಿಸುವ ಸಾಧ್ಯತೆಯಿರುವುದರಿಂದ ವಾಯುವ್ಯ ರೈಲ್ವೆ (NWR) ಕೆಲವು ರೈಲು ಸೇವೆಗಳನ್ನು ರದ್ದುಗೊಳಿಸಿದೆ.
ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಬಿಪ್ರಜೋಯ್ ಚಂಡಮಾರುತದ ದೃಷ್ಟಿಯಿಂದ ಸುರಕ್ಷತೆ ಮತ್ತು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೇ ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ” ಎಂದು ಎನ್ ಡಬ್ಲ್ಯುಆರ್ ಹೇಳಿಕೆಯಲ್ಲಿ ತಿಳಿಸಿದೆ.ಬಿಪೋರ್ ಜೋಯ್ ಚಂಡಮಾರುತವು ದುರ್ಬಲಗೊಂಡು ಜೂನ್ 16 ರಂದು ನೈಋತ್ಯ ರಾಜಸ್ಥಾನವನ್ನು ವಾಯುಭಾರವಾಗಿ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಜೈಪುರ ಹವಾಮಾನ ಕೇಂದ್ರದ ಉಸ್ತುವಾರಿ ರಾಧೇಶ್ಯಾಮ್ ಶರ್ಮಾ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
