ನವದೆಹಲಿ:
ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನಗಳಿಗಾಗಿ ಲಾಕ್ಡೌನ್ ಸಮಯದಲ್ಲಿ ಕಾಯ್ದಿರಿಸಿದ್ದ ಜನರಿಗೆ ಸಂಪೂರ್ಣ ಮರುಪಾವತಿ ನೀಡಲಾಗುವುದು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಭಾನುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಕೇಂದ್ರವು ರೂಪಿಸಿರುವ ಯೋಜನೆ ಪ್ರಕಾರ, ಯಾವುದೇ ವಿಮಾನಯಾನ ಸಂಸ್ಥೆಯು ತಕ್ಷಣ ಮರುಪಾವತಿಸುವ ಆರ್ಥಿಕ ಸ್ಥಿತಿಯಲ್ಲಿಲ್ಲದಿದ್ದರೆ, 2020ರ ಮಾರ್ಚ್ 31ಕ್ಕೂ ಮುನ್ನ ಪ್ರಯಾಣಿಕರು ಅದೇ ಮಾರ್ಗದಲ್ಲಿ ಪ್ರಯಾಣಿಸುವ ಅಥವಾ ಬೇರೆ ಯಾವುದೇ ಮಾರ್ಗದಲ್ಲಿ ಪ್ರಯಾಣಿಸುವಾಗ ನೆರವಾಗುವಂತೆ ಮರುಪಾವತಿ ಮೊತ್ತವನ್ನು ಕ್ರೆಡಿಟ್ ಶೆಲ್‌ನಲ್ಲಿ ಇಡಬೇಕಾಗುತ್ತದೆ. ಈ ಆಯ್ಕೆಯು ವಿದೇಶಿ ವಿಮಾನಯಾನ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ. ಹೀಗಾಗಿ ಅವರು 15 ದಿನಗಳಲ್ಲಿಯೇ ಮರುಪಾವತಿ ಮಾಡಬೇಕು ಎಂದು ತಿಳಿಸಿದೆ.
ಒಂದು ವೇಳೆ ಪ್ರಯಾಣಿಕರು ಪ್ರಯಾಣಿಸಲು ಬಯಸದಿದ್ದರೆ, ಕ್ರೆಡಿಟ್ ಶೆಲ್ ಅನ್ನು ಯಾವುದೇ ವ್ಯಕ್ತಿಗಾದರೂ ವರ್ಗಾಯಿಸಬಹುದು. ಮರುಪಾವತಿ ಮೊತ್ತವನ್ನು ಬಳಸದೆ ಇದ್ದಲ್ಲಿ, ಈ ಮೊತ್ತದ ಮೇಲೆ ಪ್ರತಿ ತಿಂಗಳು ಬಡ್ಡಿ ಸೇರಿಕೊಳ್ಳುತ್ತದೆ ಮತ್ತು 2021, ಮಾರ್ಚ್ 31ರ ನಂತರ ಅದನ್ನು ಪೂರ್ಣವಾಗಿ ಮರುಪಾವತಿಸಲಾಗುತ್ತದೆ.
ಮಾರ್ಚ್ 25 ರಿಂದ ಮೇ 3ರ ನಡುವೆ ದೇಶೀಯ ಅಥವಾ ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ ಕಾಯ್ದಿರಿಸಿದ ಟಿಕೆಟ್‌ಗಳಿಗೆ ತಕ್ಷಣವೇ ಸಂಪೂರ್ಣ ಮರುಪಾವತಿಯನ್ನು ಒದಗಿಸಲಾಗುವುದು. ಉಳಿದ ಪ್ರಯಾಣಿಕರಿಂದ ಸಂಗ್ರಹಿಸಿದ ಮೊತ್ತವನ್ನು 15 ದಿನಗಳಲ್ಲಿ ಮರುಪಾವತಿಸಲು ವಿಮಾನಯಾನ ಸಂಸ್ಥೆಗಳು ಪ್ರಯತ್ನಿಸುತ್ತವೆ ಅಂತ ನಾಗರಿಕ ವಿಮಾನಯಾನ ಮಹಾನಿರ್ದೇಶಕರು ತಿಳಿಸಿದ್ದಾರೆ.
ವಿಮಾನ ಟಿಕೆಟ್‌ಗಳಿಗೆ ಮರುಪಾವತಿ ಕೋರಿ ಮನವಿ ಸಲ್ಲಿಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ