ನವದೆಹಲಿ:
ಪಾರ್ಶ್ವನಾಥ ಡೆವಲಪರ್ಸ್ ನ ಸಿಇಒ ಸಂಜೀವ್ ಜೈನ್ ಅವರನ್ನು ದೆಹಲಿ ಪೊಲೀಸರು 60 ಕಿ.ಮೀ ಬೆನ್ನಟ್ಟಿ ಬಂಧಿಸಿದ್ದಾರೆ.ಗುರುಗ್ರಾಮದ ಡಿಎಲ್ಎಫ್-2 ನೇ ಹಂತದ ನಿವಾಸಿಯಾಗಿರುವ ಜೈನ್ ದೆಹಲಿ ಏರ್ ಪೋರ್ಟ್ ನಿಂದ ಬರುತ್ತಿದ್ದಾಗ ಬೆನ್ನಟ್ಟಿ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಎದುರು ಹಾಜರಾಗಲು ವಿಫಲರಾಗಿದ್ದಕ್ಕೆ ಜೈನ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಲಾಗಿತ್ತು. ವಾರೆಂಟ್ ಜಾರಿ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ ಇಲಾಖೆಯ ವಿಶೇಷ ಟಾಸ್ಕ್ ಫೋರ್ಸ್ ಜೈನ್ ಅವರನ್ನು ಬಂಧಿಸಿದೆ ಎಂದು ಡಿಸಿಪಿ ಸುರೇಂದ್ರ ಚೌಧರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.ರಜತ್ ಬಬ್ಬರ್ ಎಂಬಾತ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈನ್ ವಿರುದ್ಧ ವಾರಂಟ್ ಹೊರಡಿಸಲಾಗಿತ್ತು.
“ಜಾಮೀನು ರಹಿತ ನಾಲ್ಕು ವಾರಂಟ್‌ಗಳು ಮತ್ತು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಿಂದ ಒಂದು ಜಾಮೀನು ನೀಡಬಹುದಾದ ವಾರಂಟ್ ಜೈನ್ ವಿರುದ್ಧ ಶಹದಾರ ಪೊಲೀಸ್ ಠಾಣೆಯಲ್ಲಿ ಬಾಕಿ ಉಳಿದಿವೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.