ಬೆಂಗಳೂರು : ಕೆಲವು ಕಾಲೇಜುಗಳಿಗೆ ಬಾಂಬ್ ಬೆದರಿಕೆ ಇ-ಮೇಲ್

ಬೆಂಗಳೂರು

     ಬೆಂಗಳೂರಿನ ಕೆಲವು ಕಾಲೇಜುಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಎಂಎಸ್​​ ಕಾಲೇಜು, ವಿ.ವಿ.ಪುರಂನಲ್ಲಿರುವ ಬಿಐಟಿ​ ಕಾಲೇಜು ಸೇರಿದಂತೆ ಕೆಲವು ಕಾಲೇಜುಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಪತ್ರ ಬಂದಿದೆ. ಕೂಡಲೇ ಸ್ಥಳಕ್ಕೆ ಪೊಲೀಸರು, ಬಾಂಬ್ ನಿಷ್ಕಿಯ ಸಿಬ್ಬಂದಿ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಇನ್ನು ಮುಂಜಾಗೃತ ಕ್ರಮವಾಗಿ ಪೊಲೀಸರು ಮೂರು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಹೊರಕ್ಕೆ ಕಳುಹಿಸಿದ್ದಾರೆ. ಸದ್ಯ ಪರಿಶೀಲನೆ ಮುಂದುವರೆದಿದೆ.

   ಇಂತಹ ಘಟನೆಗಳು ಇದೇ ಮೊದಲಲ್ಲ, ಹಲವಾರು ಬಾರಿ ನಡೆದಿವೆ. ಆದರೆ, ಇನ್ನೂವರೆಗೂ ಕಿಡಿಗೇಡಿಗಳು ಮಾತ್ರ ಪತ್ತೆಯಾಗಿಲ್ಲ. ಕಳೆದ ಆರು ದಿನಗಳ ಹಿಂದೆಯಷ್ಟೇ ತಾಜ್ ವೆಸ್ಟ್ ಎಂಡ್ ​ಹೋಟೆಲ್​ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಹೋಟೆಲ್ ಒಟೆರಾಗೆ ಇದೇ ರೀತಿಯ ಬಾಂಬ್​ ಬೆದರಿಕೆ ಇ-ಮೇಲ್​ ಬಂದಿತ್ತು. ಅಷ್ಟೇ ಅಲ್ಲ, ಇತ್ತೀಚೆಗೆ ಬೆಂಗಳೂರಿನ ಅಶೋಕ್ ನಗರದಲ್ಲಿರುವ ಸೈನಿಕ ಶಾಲೆಗೂ ಇಂತಹುದೇ ಹುಸಿ ಬಾಂಬ್ ಬೆದರಿಕೆ ಕರೆ ಬಂದಿತ್ತು. ಶಾಲೆಗೆ ಬಾಂಬ್ ಇಟ್ಟು ಸ್ಪೋಟಿಸುವುದಾಗಿ ಇ-ಮೇಲ್ ಮೂಲಕ ಸಂದೇಶ ರವಾನಿಸಲಾಗಿತ್ತು. ಇಂತಹ ಬೆದರಿಕೆ ಇ-ಮೇಲ್​ಗಳು ಬರುತ್ತಲೇ ಇದೆ. ಆದರೆ, ಈವರೆಗೂ ಆರೋಪಿಗಳು ಮಾತ್ರ ಸಿಗದೆ ಇರುವುದು ದರುಂತವೇ ಸರಿ.

Recent Articles

spot_img

Related Stories

Share via
Copy link