ಕೊರಟಗೆರೆ:-
ಭಾರತೀಯ ಗುರು ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕ ಹಾಗೂ ರಾಷ್ಟ್ರೀಯ ಗಿಡಮೂಲಿಕ ಪ್ರಾಧಿಕಾರ ಕೇರಳ ಏನ್ ಎಂ ಪಿ ಬಿ ವತಿಯಿಂದ ತೋವಿನಕೆರೆಯ ಲೋಕೇಶ್ ಟಿ ವಿ ಅವರಿಗೆ ಅಜೀವ ಸದಸ್ಯತ್ವ ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ.
ಕೊರಟಗೆರೆ ತಾಲ್ಲೂಕಿನ ಸಿ ಎನ್ ದುರ್ಗ ಹೋಬಳಿಯ ತೋವಿನಕೆರೆ ಗ್ರಾಮದ ಲೋಕೇಶ್ ಟಿವಿ ಎನ್ನುವವರಿಗೆ ವೈದ್ಯ ಪರಿಷತ್ ವತಿಯಿಂದ ಹಾಗೂ ರಾಷ್ಟ್ರೀಯ ಗಿಡಮೂಲಿಕ ಪ್ರಾಧಿಕಾರದಿಂದ ವೈದ್ಯ ಪರಿಷತ್ ಅಧ್ಯಕ್ಷ ಡಿ.ಜಿ.ರವಿಕುಮಾರ್, ಗೌರವಾಧ್ಯಕ್ಷ ಶ್ರೀ ಯೋಗಿ ಚಂದ್ರಶೇಖರ್ ಗುರೂಜಿ, ಕಾರ್ಯದರ್ಶಿ ಪಂಡಿತ್ ಚಂದ್ರಶೇಖರ್ ಅವರು ಜೊತೆಗೂಡಿ ಲೋಕೇಶ್ ಟಿಬಿ ಅವರಿಗೆ ಅಜೀವ ಸದಸ್ಯತ್ವ ನೀಡಿ ಗೌರವಿಸಲಾಗಿದೆ.
ಲೋಕೇಶ್ ಟಿವಿ ರವರು 1998ನೇ ಇಸವಿಯಿಂದ ಔಷಧೋಪಚಾರಗಳನ್ನ ಪ್ರಾರಂಭಿಸಿ ಸ್ಥಳವಾಗಿ ಬಹಳಷ್ಟು ಹೆಸರುಗಳಿಸಿರುವುದಲ್ಲದೆ, ಲೋಕೇಶ್ ಬಳಿಗೆ ಹೋದರೆ ವಾಸಿಯಾಗದ ಕಾಯಿಲೆಗಳಿಲ್ಲ ಎಂಬುವ ಭಾವನೆ ರೋಗಿಗಳಲ್ಲಿ ಮೂಡಿದ್ದು, ರೋಗಿಗಳು ಪಡೆದ ಔಷಧಿಯಿಂದ ಬಹಳಷ್ಟು ಮಂದಿ, ಗುಣಮುಖರಾಗಿರುವುದೇ ಪ್ರತ್ಯಕ್ಷ ಸಾಕ್ಷಿಯಾಗಿರುತ್ತದೆ , ಪ್ರಶಸ್ತಿ ಅಜೀವ ಸದಸ್ಯತ್ವದ ಪತ್ರವನ್ನು ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಕಲ್ಕಕೆರೆ ಅಲ್ಲಮ ಪ್ರಭು ಸಂಸ್ಥಾನ ಮಠದಲ್ಲಿ ಜಿಲ್ಲೆಯಲ್ಲಿನ 16 ಮಂದಿಗೆ ನೀಡಿದ್ದು, ತೋವಿನಕೆರೆಯ ಲೋಕೇಶ್ ಟಿವಿ ರವರು ಒಬ್ಬರಾಗಿರುತ್ತಾರೆ. (ಆಯುಷ್ ವೈದ್ಯ) ಸದರಿಯವರ ಪ್ರಾಮಾಣಿಕ ಮತ್ತು ನಿಸ್ವಾರ್ಥ ಸೇವೆಯಿಂದ ಗುರು ಪಾರಂಪರಿಕೆ ವೈದ್ಯ ಪರಿಷತ್ ವೈದ್ಯ ಪದ್ಧತಿ ಪುನರುಜ್ಜಿವನಗೊಳ್ಳುವಂತೆ ಹಾರೈಸಿರುತ್ತಾರೆ.
ಲೋಕೇಶ್ ಟಿ ವಿ ರವರು ಜಾಂಡೀಸ್, ಚರ್ಮದ ಕಾಯಿಲೆ, ಥೈರಾಯ್ಡ್, ಪೈಲ್ಸ್, ಅಸ್ತಮಾ, ಕಿಡ್ನಿ ಸ್ಟೋನ್, ಡಸ್ಟ್ ಅಲರ್ಜಿ, ಮಧುಮೇಹ, ಸಂಧಿವಾತ ಕಾಯಿಲೆಗಳಿಗೆ ಔಷಧಿಗಳನ್ನು ನೀಡುತ್ತಿರುತ್ತಾರೆ.








