ಬಿಗ್‌ ಬಾಸ್‌ ಗೆ ಬರ್ತಾರಾ ಚಾಹಲ್‌ ಮಾಜಿ ಪತ್ನಿ …!

ಮುಂಬೈ : 

    ಕಿರುತೆರೆ ಜಗತ್ತಿನ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಹಿಂದಿತನ್ನ 19 ನೇ ಸೀಸನ್‌ನೊಂದಿಗೆ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ. ಸಲ್ಮಾನ್ ಖಾನ್ ನಿರೂಪಕರಾಗಿರುವ ಈ ಕಾರ್ಯಕ್ರಮವು ವಿವಾದಗಳಿಂದ ಕೂಡ ಸುದ್ದಿ ಆಗಿದ್ದಿದೆ. ಈಗ ಬಿಗ್ ಬಾಸ್ 19 ರ ಆರಂಭ ಹತ್ತಿರವಾಗುತ್ತಿದ್ದಂತೆ, ಸಂಭಾವ್ಯ ಸ್ಪರ್ಧಿಗಳ ಹೆಸರುಗಳು ಒಂದರ ನಂತರ ಒಂದರಂತೆ ಹೊರಬರುತ್ತಿವೆ. ಇತ್ತೀಚಿನ ವರದಿಗಳ ಪ್ರಕಾರ, ಬಿಗ್ ಬಾಸ್ 19 ರ ನಿರ್ಮಾಪಕರು ಈ ಬಾರಿ ವಿಶೇಷ ವ್ಯಕ್ತಿಗಳನ್ನು ಆಯ್ಕೆ ಮಾಡುತ್ತಿದ್ದಾರಂತೆ.

   ಇದರಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರು ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಅವರ ಮಾಜಿ ಪತ್ನಿ ಧನಶ್ರೀ ವರ್ಮಾ. ಮೂಲಗಳ ಪ್ರಕಾರ, ಈ ಕಾರ್ಯಕ್ರಮಕ್ಕಾಗಿ ಧನಶ್ರೀ ಅವರನ್ನು ಸಂಪರ್ಕಿಸಲಾಗಿದೆ ಮತ್ತು ಮಾತುಕತೆ ನಡೆಯುತ್ತಿದೆಯಂತೆ. ಕಳೆದ ವರ್ಷ 2024 ರಲ್ಲಿ, ಧನಶ್ರೀ ಮತ್ತು ಚಹಲ್ ವಿಚ್ಛೇದನ ಪಡೆದಿದ್ದರು, ಈ ಸಂದರ್ಭ ಇವರಿಬ್ಬರ ವೈಯಕ್ತಿಕ ಜೀವನವು ದೊಡ್ಡ ಸುದ್ದಿಯಾಗಿತ್ತು.

   ವಿಚ್ಛೇದನದ ನಂತರ, ಇಬ್ಬರೂ ಸಾಮಾಜಿಕ ಮಾಧ್ಯಮ ಮತ್ತು ಸಾರ್ವಜನಿಕವಾಗಿ ಪರಸ್ಪರ ದೂರವಾಗಿದ್ದಾರೆ. ಅಂದಹಾಗೆ ಧನಶ್ರೀ ಪ್ರಸಿದ್ಧ ಯೂಟ್ಯೂಬರ್, ನೃತ್ಯ ಸಂಯೋಜಕಿ ಮತ್ತು ಸೋಷಿಯಲ್ ಮೀಡಿಯಾ ಇನ್​ಫ್ಯುಲೆನ್ಸರ್ ಆಗಿದ್ದಾರೆ. ಇವರಿಗೆ ಅಪಾರ ಅಭಿಮಾನಿ ಬಳಗವಿದೆ. ಇವರು ಬಿಗ್ ಬಾಸ್ ಮನೆಗೆ ಕಾಲಿಟ್ಟರೆ, ಕಾರ್ಯಕ್ರಮಕ್ಕೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆಯಬಹುದು.

   ಏತನ್ಮಧ್ಯೆ, ಯುಜ್ವೇಂದ್ರ ಚಹಲ್ ಈಗ ರೇಡಿಯೋ ಜಾಕಿ (ಆರ್‌ಜೆ) ಮಹ್ವೇಶ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳಿವೆ. ಇಬ್ಬರೂ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ, ಆದರೆ ಇನ್ನೂ ಸಾರ್ವಜನಿಕವಾಗಿ ಇವರಿಬ್ಬರು ಸಂಬಂಧವನ್ನು ಒಪ್ಪಿಕೊಂಡಿಲ್ಲ. ಧನಶ್ರೀ ಬಿಗ್ ಬಾಸ್ ಮನೆಗೆ ಪ್ರವೇಶಿಸಿದರೆ, ಅವರು ತಮ್ಮ ಸಂಬಂಧ ಮುರಿದ ಬಗ್ಗೆ ಮತ್ತು ವಿಚ್ಛೇದನದ ಬಗ್ಗೆ ಬಹಿರಂಗವಾಗಿ ಮಾತನಾಡುವ ಸಾಧ್ಯತೆಯಿದೆ. ಹೀಗಾದಲ್ಲಿ ಕಾರ್ಯಕ್ರಮದ ಟಿಆರ್‌ಪಿ ಹೆಚ್ಚಾಗುವುದು ಖಚಿತ. 

   ಮಾಧ್ಯಮ ವರದಿಗಳ ಪ್ರಕಾರ, ಬಿಗ್ ಬಾಸ್ 19 ಆಗಸ್ಟ್ 2025 ರ ಕೊನೆಯ ವಾರದಲ್ಲಿ ಶುರುವಾಗಲಿದೆ. ಈ ಬಾರಿ ಕಾರ್ಯಕ್ರಮವು ಡಿಜಿಟಲ್ ಪ್ಲಾಟ್‌ಫಾರ್ಮ್ ಜಿಯೋಸಿನಿಮಾ ಮತ್ತು ಕಲರ್ಸ್ ಟಿವಿಯಲ್ಲಿ ಪ್ರಸಾರ ಕಾಣಲಿದೆ ಎಂದು ಹೇಳಲಾಗಿದೆ. ಆದರೆ, ವೀಕ್ಷಕರು ಎಪಿಸೋಡ್​ಗಳನ್ನು ಟಿವಿಗೂ ಮೊದಲು ಜಿಯೋಸಿನಿಮಾದಲ್ಲಿ ನೋಡಬಹುದಂತೆ. ಲೈವ್ ಆದ 90 ನಿಮಿಷಗಳ ನಂತರ ಟಿವಿಯಲ್ಲಿ ಪ್ರಸಾರವಾಗುತ್ತವೆ ಎಂದು ಹೇಳಲಾಗುತ್ತಿದೆ.

   ಈ ಬಾರಿಯೂ ಸಲ್ಮಾನ್ ಖಾನ್ ಕಾರ್ಯಕ್ರಮದ ನಿರೂಪಕರಾಗಿರುತ್ತಾರೆ, ಆದರೆ ಮೂರು ತಿಂಗಳ ನಂತರ ಸಲ್ಮಾನ್ ಕಾರ್ಯಕ್ರಮದಿಂದ ವಿರಾಮ ತೆಗೆದುಕೊಳ್ಳುತ್ತಾರೆ. ಈ ಸಂದರ್ಭ ಅವರ ಸ್ಥಾನದಲ್ಲಿ ಫರಾ ಖಾನ್, ಕರಣ್ ಜೋಹರ್ ಮತ್ತು ಅನಿಲ್ ಕಪೂರ್ ಅವರಂತಹ ಕೆಲ ಅತಿಥಿ ನಿರೂಪಕರನ್ನು ಕಾಣಬಹುದು ಎಂಬ ಸುದ್ದಿ ಇದೆ.

Recent Articles

spot_img

Related Stories

Share via
Copy link