ಶ್ರೀ ಶಿವ ಸಿದ್ದೇಶ್ವರ ಸ್ವಾಮೀಜಿ ಸಿದ್ಧ ಗಂಗಾ ಮಠದ ನೂತನ ಉತ್ತರಾಧಿಕಾರಿ

 
ತುಮಕೂರು
      ಸಿದ್ಧ ಗಂಗಾ ಮಠಕ್ಕೆ ಬಸವ ಜಯಂತಿ ಯ ಶುಭ ದಿನದಂದು ನೂತನ ಉತ್ತರಾಧಿಕಾರಿ ನಿಯುಕ್ತಿ ಗೊಳಿಸಿದ್ದು, ನೆಲಮಂಗಲ ತಾಲೂಕು ಮೈಲನಹಳ್ಳಿ ಮೂಲದ ವಟು ಮನೋಜ್ ಕುಮಾರ್ ಅವರಿಗೆ ಶ್ರೀಶಿವಸಿದ್ದೇಶ್ವರ ಸ್ವಾಮೀಜಿ ಯೆಂಬ ಹೊಸ ಅಬಿಧಾನದೊಂದಿಗೆ ನಿರಂಜನ ಪಟ್ಟಾಧಿಕಾರ ನೆರವೇರಿಸಲಾಯಿತು.

      ಇವರೊಂದಿಗೆ ಕಂಚಗಲ್ ಬಂಡೆಮಠಕ್ಕೆ ಕಾಳೇನಹಳ್ಳಿ ಮೂಲದ ಹರ್ಷ ಅವರಿಗೆ ಮಹಾಲಿಂಗ ಸ್ವಾಮೀಜಿ ಎಂಬ ಅಭಿದಾನದೊಂದಿಗೆ ವಿರಕ್ತಾಶ್ರಮ ದೀಕ್ಷೆ ನೀಡಲಾಗಿದ್ದು ದೇವನಹಳ್ಳಿ ಮಠಕ್ಕೂ ಸದಾಶಿವ ಸ್ವಾಮೀಜಿ ಅವರನ್ನು ನೂತನ ಉತ್ತರಾಧಿಕಾರಿಯಾಗಿ ಶಾಸ್ತ್ರೋಕ್ತವಾಗಿ ಪಟ್ಟಕಟ್ಟಲಾಯಿತು.

     ಕಾರ್ಯಕ್ರಮದ ನಿಮಿತ್ತ ಶನಿವಾರ ರಾತ್ರಿ ಯಿಂದಲೇ ಧಾರ್ಮಿಕ ಕಾರ್ಯ ಕ್ರಮಗಳು ನೆರವೇರುದ್ದು ಸಿದ್ಧಗಂಗಾ. ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ಮಠದ ನೂತನ ಉತ್ತರಾಧಿಕಾರಿಗೆ ದೀಕ್ಷಾ ಸಂಸ್ಕಾರಇಷ್ಟಲಿಮಗ ಪೂಜೆ ಮಾಡಿಸಿದರು.

      ಮೂವರು ವಟುಗಳ ನಿರಂಜನ ಪಟ್ಟಾಧಿಕಾರ ಸಮಾರಂಭಕ್ಕೆ ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕನಕಪುರ ದೇಗುಲ ಮಠದ ಶ್ರೀ ಗಳು, ಹಿರೇಮಠ ಶ್ರೀ ಗಳುಸೇರಿ ಹರಗುರುಚರಮೂರ್ತಿಗಳು, ಸಂಸದ ಜಿ. ಎಸ್. ಬಸವರಾಜ್ ಸೇರಿ ಮಾಜಿ ಎಂಎಲ್ಸಿ ಡಾಹುಲಿನಾಯ್ಕರ್, ಮಾಜಿ ಸಚಿವ ಶಿವಣ್ಣ, ಕೆಆರ್ ಐಡಿಎಲ್ ಅಧ್ಯಕ್ಷ ರುದ್ರೇಶ್, ಡಾ. ಎಂ. ಎನ್ ಚನ್ನಬಸಪ್ಪ, ಟಿ. ಕೆ, ನಂಜುಂಡಪ್ಪ, ಎಸ್. ವಿಶ್ವನಾಥಯ್ಯ,ಡಾ.ಎಸ್.ಪರಮೇಶ್, ನಾಗರಾಜ್, ಡಾ. ಶಿವಕುಮಾರಯ್ಯ ಸೇರಿದಂತೆ ಮಠದ ಆಡಳಿತ ಮಂಡಳಿ ಯವರು ರಾಜ್ಯ ದ ಹಲವೆಡೆ ಯ ಭಕ್ತರು ಪಾಲ್ಗೊಂಡರು.

*ಭಾವುಕರಾದ ಸಿದ್ಧ ಲಿಂಗ ಸ್ವಾಮೀಜಿ*

ತಮ್ಮ ಉತ್ತರಾಧಿಕಾರಿ ನಿಯುಕ್ತಿ ಸಮಾರಂಭದಲ್ಲಿ ಭಾವುಕರಾಗಿ ಮಾತನಾಡಿ ದ ಸಿದ್ಧ ಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ನೂತನ ಶಿವ ಸಿದ್ದೇಶ್ವರ ಸ್ವಾಮಿಗಳಾಗಿ ಮಠಕ್ಕೆ ನಿಯುಕ್ತಿ ಗೊಂಡಿರುವ ಮನೋಜ್ ಕುಮಾರ್ ಅವರನ್ನು ಉತ್ತರಾಧಿಕಾರಿ ಯಾಗಿ ಮಾಡಬೇಕೆಂಬುದು ಪೂಜ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ ಇಚ್ಚೆಯಾಗಿತ್ತು. ಅವರು ಬದುಕಿದ್ದಾಗಲೇ ಕಾರ್ಯ ಕ್ರಮ ನೆರವೇರಲು ಬಯಸಿದ್ದರು. ಇಂದು ಶ್ರೀ ಗಳ ಆಶಯ ಸಂಕಲ್ಪದಂತೆಯಂತೆ ಅವರಿಚ್ಚೆಯ ವಟುವಿಗೆ ಪಟ್ಟ ಕಟ್ಟಲಾಗಿದೆ. ನನಗೆ ಅಲ್ಪಾಯುಷ್ಯವೆಂದು ಶ್ರೀ ಗಳು ಗಮನಿಸಿದ್ದಿರಬೇಕು ಎಂದು ಹೇಳಿ ಕೆಲಕಾಲ ವೇದಿಕೆಯಲ್ಲೇ ಮೌನಕ್ಕೆ ಶರಣಾದರು. ಸುತ್ತೂರು ಶ್ರೀ ಗಳು ಸಿದ್ಧಲಿಂಗ ಸ್ವಾಮೀಜಿ ಅವರನ್ನು ಸಂತೈಸಿದರು.

 

Recent Articles

spot_img

Related Stories

Share via
Copy link
Powered by Social Snap