ಸುದೀಪ್‌ ವಿರುದ್ಧ ಅಪಸ್ವರ ತೆಗೆದ ಚೈತ್ರಾ ಕುಂದಾಪುರ….!

ಬೆಂಗಳೂರು :

   ಬಿಗ್ ಬಾಸ್ ಮನೆಯಲ್ಲಿ ಕಳೆದ ವಾರ ಸಾಕಷ್ಟು ಬೆಳವಣಿಗೆಗಳು ನಡೆದವು. ಇದಕ್ಕೆ ಕಾರಣ ಆಗಿದ್ದು ಆ ವಾರ ಪೂರ್ತಿ ನಡೆದ ಮಾತಿನ ಚಕಮಕಿ ಹಾಗೂ ಕೈ ಕೈ ಮಿಲಾಯಿಸಿಕೊಂಡು ಮಾಡಿದ ಜಗಳ. ಎಲ್ಲರೂ ಜಗದೀಶ್​ನ ವಿರುದ್ಧ ಮಾತನಾಡಿದ್ದರಿಂದಲೇ ಅವರು ಪ್ರವೋಕ್ ಆದರು ಎಂಬ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿದೆ. ಇದೇ ವಿಚಾರವನ್ನು ಸುದೀಪ್ ಅವರು ಮಾತನಾಡಿದ್ದಾರೆ. ಇದಕ್ಕೆ ಚೈತ್ರಾ ಕುಂದಾಪುರ ಖಂಡನೆ ವ್ಯಕ್ತಪಡಿಸಿದ್ದಾರೆ.

  ಸುದೀಪ್ ಅವರು ವೀಕೆಂಡ್​ನಲ್ಲಿ ಜಗದೀಶ್ ಅವರ ಪರವಾಗಿ ಮಾತನಾಡಿದರು. ಜಗದೀಶ್ ಹೇಳಿದ್ದು ಸರಿ ಅಲ್ಲ ಎಂದು ಹೇಳಿದ ಸುದೀಪ್​, ಎಲ್ಲರೂ ಅವರನ್ನು ತಡೆಯಬಹುದಿತ್ತು ಎನ್ನುವ ಅಭಿಪ್ರಾಯ ಹೊರಹಾಕಿದ್ದರು. ಈ ಬಗ್ಗೆ ಎಲ್ಲರಿಗೂ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನು ಮನೆ ಮಂದಿ ಖಂಡಿಸಿದ್ದಾರೆ.

   ಈ ಬಗ್ಗೆ ಚೈತ್ರಾ ಮಾತನಾಡಿದ್ದಾರೆ. ‘ನೀನು ನನಗೆ ಕೆಸರು ಎರಚಿದರೆ ನಾನು ಕೂಡ ಕೆಸರನ್ನೇ ಎರಚೋದು. ಆ ವ್ಯಕ್ತಿಗೆ ನಾನು ಗುಲಾಬಿ ಎಸೆಯೋಕಾಗಲ್ಲ. ಆ ವ್ಯಕ್ತಿ ಬಗ್ಗೆ ನನಗೇಕೆ ಅಷ್ಟು ಕ್ಲ್ಯಾರಿಟಿ ಕೊಡ್ತಾರೆ? ಸುದೀಪ್ ಸ್ಪರ್ಧಿಗಳಿಗೆ ಬೈದರು ಅನ್ನೋದನ್ನು ಮಾತ್ರ ಜನರು ನೆನಪಿಟ್ಟುಕೊಳ್ಳುತ್ತಾರೆ. ಮಧ್ಯ ಮಧ್ಯದಲ್ಲಿ ಸೇರಿಸಿದ ಲೈನ್​ನ ಜನರು ನೆನಪಿಟ್ಟುಕೊಳ್ಳಲ್ಲ’ ಎಂದಿದ್ದಾರೆ.

  ‘ಕೈ ಮುಗಿದು ಪೂಜೆ ಮಾಡುವ ಕಲ್ಲಿಗೂ, ಎಲ್ಲೋ ಬಿದ್ದ ಕಲ್ಲಿಗೂ ವ್ಯತ್ಯಾಸ ಇರುತ್ತದೆ. ರೋಡ್​ನಲ್ಲಿರೋ ಕಲ್ಲಿಗೆ ಉಗಿದೆ ಎಂದ ಮಾತ್ರಕ್ಕೆ ನಾನು ತಪ್ಪಿತಸ್ಥೆ ಆಗಲ್ಲ. ನನ್ನ ಮಾತನ್ನು ಕಂಪ್ಲೀಟ್ ಮಾಡೋಕೆ ಬಿಡಬೇಕು. ಇಡೀ ಮನೆಯನ್ನು ವಿಲನ್ ಮಾಡಿದ್ದಾರೆ. ಅವರು ವಿಚಾರದಲ್ಲಿ ನೀವು ಮಾಡಿದ್ದು ತಪ್ಪು ಅಂದಿದ್ದಾರೆ. ಅದು ಸರಿ ಅಲ್ಲ’ ಎಂದಿದ್ದಾರೆ ಚೈತ್ರಾ. 

  ಎಲ್ಲರೂ ಸೇರಿ ಜಗದೀಶ್ ಅವರನ್ನು ಕೆರಳಿಸಿದರು ಎಂಬುದು ನಿಜ. ಅವರು ಕೆಟ್ಟ ಶಬ್ದಗಳನ್ನು ಉದ್ದೇಶ ಪೂರ್ವಕವಾಗಿ ಪ್ರಯೋಗಿಸಿದರೂ ಅನ್ನೋದು ನಿಜವೇ.

Recent Articles

spot_img

Related Stories

Share via
Copy link