ಚಳ್ಳಕೆರೆ ಮದ್ಯದಂಗಡಿ ಪ್ರಾರಂಭಕ್ಕೆ ವಿರೋಧ

ಚಳ್ಳಕೆರೆ

ತಾಲ್ಲೂಕಿನ ತಳಕು ಹೋಬಳಿಯ ರೇಣುಕಾಪುರ ಗ್ರಾಮದಲ್ಲಿ ಸರ್ಕಾರ ಸೌಮ್ಯದ ಎಂಎಸ್‍ಐಎಲ್ ಮದ್ಯದ ಅಂಗಡಿಯನ್ನು ಪ್ರಾರಂಭಿಸುವ ಕುರಿತು ಈಗಾಗಲೇ ಸಿದ್ದತೆಗಳು ಭರದಿಂದ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಗ್ರಾಮದಲ್ಲಿ ಮದ್ಯದಂಗಡಿ ಪ್ರಾರಂಭಿಸಬಾರದು ಎಂದು ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್‍ಗೆ ಮನವಿ ನೀಡಿ ಆಗ್ರಹ ಪಡಿಸಿದ್ದಾರೆ.

ಅವರು, ಶುಕ್ರವಾರ ಇಲ್ಲಿನ ತಾಲ್ಲೂಕು ಕಚೇರಿಗೆ ಆಗಮಿಸಿ ತಹಶೀಲ್ದಾರ್‍ಗೆ ಮನವಿ ಪತ್ರ ನೀಡಿ, ಗ್ರಾಮದ ಸರ್ಕಾರಿ ಶಾಲಾ, ಕಾಲೇಜು, ಸಾರ್ವಜನಿಕರು, ಮಕ್ಕಳು ಮತ್ತು ವೃದ್ದರು ಓಡಾಡುವ ಪ್ರಮುಖ ರಸ್ತೆಯಲ್ಲೇ ಮದ್ಯದಂಗಡಿ ಆರಂಭಕ್ಕೆ ಸರ್ಕಾರ ಅನುಮತಿ ನೀಡಿರುವುದು ಸರಿಯಲ್ಲ. ಈ ಕೂಡಲೇ ಅನುಮತಿಯನ್ನು ರದ್ದು ಪಡಿಸಬೇಕು, ಯಾವುದೇ ಕಾರಣದಿಂದಲೂ ಗ್ರಾಮದಲ್ಲಿ ಮದ್ಯದಂಗಡಿ ಕಾರ್ಯನಿರ್ವಹಿಸದಂತೆ ತಾಲ್ಲೂಕು ಆಡಳಿತ ತಡೆಯೊಡ್ಡಬೇಕೆಂದು ಗ್ರಾಮದ ಯುವಕರು ಆಗ್ರಹಿಸಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಮಕ್ಕ, ಉಪಾಧ್ಯಕ್ಷೆ ಪಾರ್ವತಮ್ಮ, ಯುವ ಮುಖಂಡ ಬಸವರಾಜು ಮುಂತಾದವರು ಮಾಹಿತಿ ನೀಡಿ, ಮದ್ಯದ ಅಂಗಡಿ ತೆರೆಯಲು ಗ್ರಾಮ ಪಂಚಾಯಿತಿಯಿಂದ ಸೂಚನೆ ನೀಡಿಲ್ಲ. ಸದರಿ ಕಟ್ಟಡದ ಮಾಲೀಕರಿಂದಲೂ ಸಹ ಅನುಮತಿ ಪಡೆದಿಲ್ಲ. ನ್ಯಾಯಬೆಲೆ ಅಂಗಡಿ ಪಕ್ಕದಲ್ಲೇ ಪ್ರಾರಂಭಕ್ಕೆ ಸಿದ್ದತೆ ನಡೆದಿದೆ. ವಿಶೇಷವಾಗಿ ಈ ಬಗ್ಗೆ ಗ್ರಾಮದಲ್ಲಿ ಯಾವುದೇ ಮಾಹತಿ ನೀಡದೆ ಏಕಾಏಕಿ ಮಧ್ಯದ ಅಂಗಡಿ ಪ್ರಾರಂಭಕ್ಕೆ ಯತ್ನಿಸಿರುವುದು ಖಂಡನಾರ್ಹವೆಂದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ಎನ್.ರಘುಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾರ್ವಜನಿಕರಿಂದ ಮಾಹಿತಿ ಪಡೆದು ಜಿಲ್ಲಾಧಿಕಾರಿಗಳಿಗೆ ವರದಿ ಕಳುಹಿಸುವ ಭರವಸೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link