ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ವಿರುದ್ದ ಬಿಜೆಪಿ ಆಕ್ರೋಶ

ಚಳ್ಳಕೆರೆ

     ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ಕಡಿಮೆ ಸ್ಥಾನಗಳನ್ನು ಗಳಿಸಿದ ಜೆಡಿಎಸ್ ಪಕ್ಷ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷದ ಹೊಂದಾಣಿಕೆಯಿಂದ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ಧಾರೆ.

     ರಾಜಕೀಯ ಕ್ಷೇತ್ರದಲ್ಲಿ ಯಾವುದೇ ಪಕ್ಷ ಅಧಿಕಾರ ಪಡೆಯಲು ಯತ್ನ ನಡೆಸುವುದು ಸ್ವಾಭಾವಿಕ. ಆದರೆ, ತಮಗೆ ಬೆಂಬಲ ನೀಡಿದ ಕಾಂಗ್ರೆಸ್ ಪಕ್ಷದ ಶಾಸಕರು ಅವರ ವಿರುದ್ದವೇ ಅಸಮದಾನ ವ್ಯಕ್ತ ಪಡಿಸಿದ್ದು, ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಮುಖ್ಯಮಂತ್ರಿಗಳು ಬಿಜೆಪಿ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಿದ್ಧಾರೆ. ರಾಜ್ಯದ ಜನತೆ ಬಿಜೆಪಿ ವಿರುದ್ದ ದಂಗೆ ಹೇಳುವಂತೆ ಕರೆ ನೀಡುವ ಮೂಲಕ ಮುಖ್ಯಮಂತ್ರಿ ಸ್ಥಾನಕ್ಕೆ ಅಗೌರವ ತೋರಿಸಿದ್ದು, ಇದು ಖಂಡನೀಯವೆಂದು ಬಿಜೆಪಿ ಯುವ ಮುಖಂಡ ಹಾಗೂ ಮಾಜಿ ನಗರಸಭಾ ಸದಸ್ಯ ಎಂ.ಶಿವಮೂರ್ತಿ ತಿಳಿಸಿದರು.

     ಅವರು, ಶುಕ್ರವಾರ ಇಲ್ಲಿನ ನೆಹರೂ ಸರ್ಕಲ್‍ನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ದ ದಂಗೆ ಎಳುವಂತೆ ಕರೆಕೊಟ್ಟ ಹಿನ್ನೆಲೆಯಲ್ಲಿ ಪಕ್ಷ ಹಮ್ಮಿಕೊಟ್ಟಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡಿದರು. ಕಳೆದ 2007-08ರಲ್ಲಿ ಭಾರತೀಯ ಜನತಾ ಪಕ್ಷದ ಕೃಪೆಯಿಂದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಎಚ್.ಡಿ.ಕುಮಾರಸ್ವಾಮಿಯವರಿಗೆ ಈಗ ಬಿಜೆಪಿ ಪಕ್ಷದ ಬಗ್ಗೆ ಆಕ್ರೋಶ ವ್ಯಕ್ತ ಪಡಿಸುವ ಸ್ಥಿತಿ ತಲುಪಿದ್ದಾರೆ. ಜೆಡಿಎಸ್ ಪಕ್ಷ ಒಮ್ಮೆ ಬಿಜೆಪಿ ಮತ್ತೊಮ್ಮೆ ಕಾಂಗ್ರೆಸ್ ಸಹಕಾರದಿಂದ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದೆ. ಬೇರೆ ಪಕ್ಷಗಳ ಸಹಕಾರದಿಂದಲೇ ಮುಖ್ಯಮಂತ್ರಿ ಪಟ್ಟಕ್ಕೆ ಹೇರುವ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ದ ವಿಶೇಷವಾಗಿ ಬಿ.ಎಸ್.ಯಡಿಯೂರಪ್ಪನವರ ವಿರುದ್ದ ಆಕ್ರೋಶದ ಮಾತುಗಳನ್ನು ಕೈಬಿಡಬೇಕು. ಇಲ್ಲವಾದಲ್ಲಿ ಇವರ ವಿರುದ್ದ ಇನ್ನಷ್ಟು ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದು ಎಂದರು.

     ಬಿಜೆಪಿ ಮಂಡ ಬೂತ್‍ಕಮಿಟಿ ಅಧ್ಯಕ್ಷ ಜೆ.ಕೆ.ವೀರಣ್ಣ ಮಾತನಾಡಿ, ರಾಜ್ಯದ ಜನತೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಆಡಳಿತ ನಡೆಸಬೇಕು ಎಂಬ ವಿಶ್ವಾಸ ಹಿನ್ನೆಲೆಯಲ್ಲಿ ಮತ ಚಲಾಯಿಸಿದ್ದರು. ಆದರೆ, ರಾಜಕೀಯ ಪರಿಸ್ಥಿತಿಯ ಲಾಭಪಡೆದ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರ ಪಡೆದ ನಂತರ ಬಿಜೆಪಿ ವಿರುದ್ದ ಇಲ್ಲಸಲ್ಲದ ಆರೋಪಗಳನ್ನು ಮಾಡುವಲ್ಲಿ ನಿರತರಾಗಿದ್ಧಾರೆ. ರಾಜಕೀಯ ಕ್ಷೇತ್ರದಲ್ಲಿ ಯಾವುದೇ ಸಮಯದಲ್ಲಿ ಯಾವುದೇ ಬದಲಾವಣೆಗಳು ಅನೇಕ ಕಾರಣಗಳಿಂದಾಗಿ ಆಗುತ್ತವೆ. ಆದರೆ, ಅಧಿಕಾರ ಕೈತಪ್ಪುವ ಭಯದಿಂದ ಬಿಜೆಪಿಯ ವಿರುದ್ದ ದಂಗೆ ಹೇಳುವಂತೆ ಸಾರ್ವಜನಿಕ ಕರೆ ನೀಡುವ ಅವರ ಕ್ರಮ ಪ್ರಜಾತಂತ್ರಕ್ಕೆ ಮಾರಕವೆಂದರು.

     ನಗರಸಭಾ ಸದಸ್ಯರಾದ ಎಸ್.ಜಯಣ್ಣ, ಕೆ.ಶಿವಕುಮಾರ್, ಕೃಷಿಕ ಸಮಾಜದ ನಿರ್ದೇಶಕ ಮೀರಸಾಬಿಹಳ್ಳಿ ಕೃಷ್ಣಮೂರ್ತಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಬಿ.ಎಸ್.ಶಿವಪುತ್ರಪ್ಪ, ರಾಮದಾಸ್, ಕರೀಕೆರೆ ತಿಪ್ಪೇಸ್ವಾಮಿ, ಹೊಟ್ಟೆಪ್ಪನಹಳ್ಳಿ ಮಂಜುನಾಥ, ದಿನೇಶ್‍ರೆಡ್ಡಿ, ಜಿಲ್ಲಾ ಯುವ ಮೋರ್ಚಾ ಘಟಕದ ಅಧ್ಯಕ್ಷ ಟಿ.ಮಂಜುನಾಥ, ಜೆ.ಎಂಸಿ ವೀರೇಶ್, ಮಾತೃಶ್ರೀಎನ್.ಮಂಜುನಾಥ, ಹಟ್ಟಿರುದ್ರಪ್ಪ, ನಿವೃತ್ತ ಪ್ರೊ.ದೇವೇಂದ್ರಪ್ಪ, ಆದಿಬಾಸ್ಕರಶೆಟ್ಟಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

                   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link