ಮಾಧ್ಯಮಗಳು ಜವಾಬ್ದಾರಿಯುತ್ತ ಕಾರ್ಯ ನಿರ್ವಹಿಸಬೇಕು

ಚಳ್ಳಕೆರೆ

     ಮಾಧ್ಯಮಗಳು ಸಮಾಜದಲ್ಲಿನ ಹಲವಾರು ಸಮಸ್ಯೆಗಳನ್ನು ಸರಿಪಡಿಸುವಂತಹ ಅಸ್ತ್ರವಾಗಿದ್ದು, ಅದರ ಜವಾಬ್ದಾರಿಯುತ್ತ ಕಾರ್ಯವನ್ನು ಶ್ರದ್ದೆ, ನಿಷ್ಠೆಯಿಂದ ನಿರ್ವಹಿಸಬೇಕು ಎಂದು ತಾಲ್ಲೂಕು ಮಡಿವಾಳ ಯುವ ಘಟಕದ ಅಧ್ಯಕ್ಷ ಕರೀಕೆರೆ ನಾಗರಾಜು ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಈಚೆಗೆ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘದಿಂದ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಎನ್.ವೀರೇಶ್‍ರವರನ್ನು ಸನ್ಮಾನಿಸುವ ಸರಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು 

     ಪತ್ರಕರ್ತರು ಸಮಾಜದಲ್ಲಿ ನೂರಾರು ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹರಿಸುವತ್ತ ಹೆಜ್ಜೆ ಹಾಕುತ್ತಾರೆ, ಸಮಾಜದಲ್ಲಿ ತೀರ ಹಿಂದುಳಿದ ಸಮುದಾಯದಲ್ಲಿ ಜನಿಸಿ, ಬಡತನ ಕುಟುಂಬದಲ್ಲಿ ಜೀವನ ನಡೆಸುತ್ತಿರುವ ವೀರೇಶ್ ವರದಿಗಾರರಾಗಿ ಉತ್ತಮ ಸೇವೆ ಮಾಡಿದ ಹಿನ್ನೆಲೆಯಲ್ಲಿ ಅವರಿಗೆ ಈ ಪ್ರಶಸ್ತಿ ಲಭಿಸಿರುವುದು ನಮ್ಮ ಸಮಾಜಕ್ಕೆ ಸಂದ ಗೌರವವಾಗಿದೆ. ಪತ್ರಿಕೆಗಳು ನೂರಾರು ಜನರ ಸಮಸ್ಯೆಗಳನ್ನು ಬಗೆಹರಿಸುವ ಶಕ್ತಿ ಹೊಂದಿದ್ದರೂ ಪತ್ರಕರ್ತರ ಸಮಸ್ಯೆಗಳು ಈಗಲು ನೂರಾರು ಇವೆ. ಇಂತಹ ಸಮಸ್ಯೆಗಳ ನಡುವೆಯೂ ಸಾಧನೆ ಮಾಡುತ್ತಿರುವ ನೂರಾರು ಪತ್ರಕರ್ತರಲ್ಲಿ ವೀರೇಶ್ ಸಹ ಒಬ್ಬರಾಗಿದ್ಧಾರೆ ಎಂದರು.

       ಸಂಘದ ಕಾರ್ಯದರ್ಶಿ ಯನ್ನಪ್ಪ(ಹಾಲಿನಬಾಬು) ಮಾತನಾಡಿ, ಸಮಾಜದಲ್ಲಿ ಮಾಧ್ಯಮಗಳ ಅವಶ್ಯಕತೆ ಹೆಚ್ಚಿದೆ. ಅದರನ್ನು ಪರಿಪೂರ್ಣವಾಗಿ ನಿರ್ವಹಿಸುವವರೂ ಹೆಚ್ಚಿದ್ದಾರೆ. ನಿಸ್ವಾರ್ಥ ಸೇವೆ, ದಕ್ಷತೆ, ನಿಷ್ಠೆ ಇರುವ ಏಕೈಕ ಕ್ಷೇತ್ರ ಪತ್ರಿಕಾ ಕ್ಷೇತ್ರ ಇಂತಹ ಕ್ಷೇತ್ರದಲ್ಲಿ ಪ್ರತಿನಿತ್ಯವೂ ಸಾಧನೆ ಮಾಡುವವರು ಬಹಳಷ್ಟು ಇದ್ಧಾರೆ ಅವರನ್ನು ಗುರುತಿಸಿ ಸೂಕ್ತ ಸ್ಥಾನಮಾನಗಳನ್ನು ನೀಡಿದಲ್ಲಿ ಇನ್ನುಷ್ಟು ಸ್ಪೂರ್ತಿದಾಯಕ ಕೆಲಸ ನಿರ್ವಹಿಸಲು ಪ್ರೇರಣೆಯಾಗುತ್ತದೆ.

      ಬರುವ ಅಲ್ಪ ಸೌಲಭ್ಯದಲ್ಲೇ ಹಲವಾರು ಸಾಧನೆ ಮಾಡುತ್ತಿರುವ ನಗರ, ಗ್ರಾಮೀಣ ಪ್ರದೇಶದಲ್ಲಿ ಪತ್ರಕರ್ತರು ಇನ್ನೂ ಕೆಳಸ್ತರದ ಜೀವನ ಸಾಗಿಸುತ್ತಿರುವುದು ಸೋಚನೀಯ ಸಂಗತಿಯಾಗಿದೆ. ಸರ್ಕಾರಗಳು ಸಹ ಎಲ್ಲಾ ಪತ್ರಕರ್ತರಿಗೆ ಸೂಕ್ತವಾದ ಸೌಲಭ್ಯಗಳನ್ನು ನೀಡುವತ್ತ ಮುಂದಾಗಬೇಕಿದೆ. ಮಾದ್ಯಮ ಸಂವಿಧಾನದ ಒಂದು ಭಾಗವವಾಗಿ ಕಾರ್ಯನಿರ್ವಹಿಸುತ್ತಿದೆ. ಪತ್ರಕರ್ತರೂ ಸಹ ಅವರ ನಿಷ್ಠಾವಂತ ಸೈನಿಕರಂತೆ ಇದ್ದಾರೆ ಅವರ ಕಾರ್ಯಕ್ಕೆ ಸಾರ್ವಜನಿಕರು, ರಾಜಕೀಯ ವ್ಯಕ್ತಿಗಳು, ಜನಪ್ರತಿನಿಧಿಗಳು ಸೂಕ್ತ ಸಹಕಾರ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

      ಈ ಸಂದರ್ಭದಲ್ಲಿ ಶಿಕ್ಷಕ ಎಚ್.ಎಂ.ರಂಗಸ್ವಾಮಿ, ಎನ್.ತಿಪ್ಪೇಸ್ವಾಮಿ, ಎನ್.ವಿಶ್ವನಾಥ, ರಮೇಶ್, ನಾಗೇಶ್, ಜಗದೀಶ್, ಮಹಲಿಂಗಪ್ಪ ಮುಂತಾದರು ಉಪಸ್ಥಿತರಿದ್ದರು.

                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap