ಕಾಂಗ್ರೆಸ್‌ ಗೆ ಸೋಮಣ್ಣ ಸವಾಲ್‌…..!

ಚಾಮರಾಜನಗರ

      ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರ ಕಚ್ಚಾಟವಂತೂ ಜಾಸ್ತಿ ಆಗುತ್ತಲೇ ಇದೆ. ಹಾಗೆಯೆ ವರುಣ ಮತ್ತು ಚಾಮರಾಜನಗರದಲ್ಲಿ ಕಣಕ್ಕಿಳಿದಿರುವ ವಿ.ಸೋಮಣ್ಣನ ಅವರು ಕೂಡ ಇಷ್ಟೆಲ್ಲಾ ಮಾತನಾಡುವ ಕಾಂಗ್ರೆಸ್ ವೀರಶೈವ ಲಿಂಗಾಯತರೇ ಸಿಎಂ ಎಂದು ಘೋಷಿಸಲಿ ಎಂದು ಸವಾಲ್ ಹಾಕಿದರು.

    ಚಾಮರಾಜನಗರದ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಲಿಂಗಾಯತ ವಿರೋಧಿಗಳು ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ, ವೀರೇಂದ್ರ ಪಾಟೀಲರನ್ನು ತೆಗೆದಿದ್ದು ಯಾರು? ರಾಜಶೇಖರ್‌ ಮೂರ್ತಿ ಅವರನ್ನು ಓಡಿಸಿದ್ದು ಯಾರು? ನಿಜಲಿಂಗಪ್ಪ ಅವರನ್ನು ದೇಶಬಿಟ್ಟು ಕಳುಹಿಸಿದ್ದು ಯಾರು? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
     ಇನ್ನು ಜಗದೀಶ್ ಶೆಟ್ಟರ್, ಸವದಿ ಏನು ಹೇಳುತ್ತಾ ಇದಾರೆ, ಲಿಂಗಾಯತ ಸಿಎಂ ಮಾಡಲಿ, ಇವೆಲ್ಲಾ ಕಣ್ಣೊರೆಸುವ ತಂತ್ರ ಆಗಿವೆ. ಲಿಂಗಾಯತರು ದಡ್ಡರಲ್ಲ, ಅವರನ್ನು ಮತ ಬ್ಯಾಂಕ್‌ ಆಗಿ ಇಟ್ಟುಕೊಂಡಿದೆ. ಆದರೆ ಅವರಿಗೆ ಕಾಂಗ್ರೆಸ್ ಏನು ಮಾಡಿಲ್ಲ. ಜನರು ಬದಲಾವಣೆ ಬಯಸುತ್ತಿದ್ದಾರೆ ಎಂದರು.     ಲಿಂಗಾಯತರನ್ನು ಬ್ಲಾಕ್ ಮೇಲ್ ಮಾಡಿ ಏನೋ ಮಾಡುತ್ತೇವೆ ಎಂದು ಆಸೆ ಇಟ್ಟುಕೊಂಡಿದ್ದರೇ ಅವರಿಗೇ ನಿರಾಸೆ ಆಗಲಿದೆ. ಅವರಲ್ಲಿ ಅಷ್ಟು ದೊಡ್ಡ ವಿಷನ್ ಇದ್ದರೇ ಲಿಂಗಾಯತರನ್ನು ಸಿಎಂ ಮಾಡುತ್ತೇವೆ ಎಂದು ಹೇಳಲಿ. ಯೂಸ್ ಅಂಡ್ ಥ್ರೋ ಮಾತುಗಳು ಬೇಡ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap