ಬೆಂಗಳೂರು :
ಕನ್ನಡ ಕಿರುತೆರೆಯಲ್ಲಿ ಕ್ಯೂಟ್ ಜೋಡಿ ಎನಿಸಿಕೊಂಡಿದ್ದ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ. ವಿಚ್ಛೇದನ ಪಡೆದುಕೊಂಡಿದ್ದಾರೆ. ಪರಸ್ಪರ ಪ್ರೀತಿಸಿ ಮದುವೆಯಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ನಾಲ್ಕು ವರ್ಷಗಳ ಬಳಿಕ ದೂರಾಗಿದ್ದಾರೆ.ಇಬ್ಬರ ಒಪ್ಪಿಗೆಯ ಮೇರೆಗೆ ಚಂದನ್ ಶೆಟ್ಟಿ-ನಿವೇದಿತಾ ಗೌಡ ವಿಚ್ಛೇದನ ಪಡೆದಿದ್ದಾರೆ.
ಕಳೆದ ಒಂದು ವರ್ಷಗಳಿಂದ ಕಾಯ್ದುಕೊಂಡಿದ್ದ ಚಂದನ್ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ ಜೂನ್ 06ರಂದು ವಿಚ್ಛೇದನಕ್ಕಾಗಿ ಶಾಂತಿನಗರದ ಫ್ಯಾಮಿಲಿ ಕೋರ್ಟ್‌ಗೆ ತೆರಳಿ ಮಾರನೇ ದಿನವೇ ಡಿವೋರ್ಸ್ ಪಡೆದಿದ್ದರು. ಡಿವೋರ್ಸ್ ಬಳಿಕ ಚಂದನ್ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ತಿಳಿಸಿದ್ದು, ತಮ್ಮ ಖಾಸಗಿ ಜೀವನ ಗೌರವಿಸುವಂತೆ ಮನವಿ ಮಾಡಿದ್ದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಸಹ ಸ್ಪಷ್ಟನೆ ನೀಡಿದ್ದರು.
ಇದೀಗ ಮತ್ತೆ ಚಂದನ್ ಶೆಟ್ಟಿ ಮದುವೆ ಬಗ್ಗೆ ಮಾತನಾಡಿದ್ದಾರೆ. ರ್ಯಾಪಿಡ್ ರಶ್ಮಿ ಅವರ ಕಾರ್ಯಕ್ರಮದಲ್ಲಿ ಮಾತನಾಡಿದ ಚಂದನ್ ಶೆಟ್ಟಿ, ‘ನಾನು ಸ್ವಲ್ಪ ಖರ್ಚು ಮಾಡುವುದು ಜಾಸ್ತಿ. ಗ್ಯಾಜೆಟ್ಸ್ ಅಂತೆಲ್ಲಾ ತುಂಬಾ ಖರ್ಚು ಮಾಡುತ್ತೇನೆ. ಕೋವಿಡ್ ಆದ ಮೇಲೆನೇ ನಾನು ಸ್ವಲ್ಪ ಪಾಠ ಕಲಿತದ್ದು. ಜಾಸ್ತಿ ಖರ್ಚುಗಳು ಮಾಡಬಾರದು ಅಂತಾ ಅನಿಸಿದ್ದೆ ಆಗ. ಕೋವಿಡ್ ತುಂಬಾ ದೊಡ್ಡ ಪಾಠ ಕಲಿಸಿ ಹೋಯ್ತು. ಅಂತಹ ಸಂದರ್ಭ ಬರದೇ ಇದ್ದರೆ ನಾನು ಇನ್ನು ಹೆಚ್ಚು ಹಣ ಕಳೆದುಕೊಳ್ಳುತ್ತಿದೆ ಅನಿಸುತ್ತಿದೆ.
ನಾನು ಮನಿ ಮ್ಯಾನೇಜ್‍ಮೆಂಟ್ ಕಲಿತ್ತಿದ್ದೇ ಕೋವಿಡ್ ಸಮಯದಲ್ಲಿ. ಆ ಸಮಯದಲ್ಲಿ ನಾನು ಮದುವೆಯಾದೆ. ಮದುವೆಯಾಗಿ ಒಂದು ವಾರಕ್ಕೆ ಲಾಕ್‌ಡೌನ್ ಆಯ್ತು. ಆ ಹಿಂದಿನ ವಾರ ಸುಮಾರು ಐವತ್ತರಿಂದ ಅವರತ್ತು ಲಕ್ಷ ಮದುವೆಗೆ ಖರ್ಚು ಮಾಡಿದ್ದೆ. ಫುಲ್ ಕಾನ್ಫಿಡೆನ್ಸ್ ಇತ್ತು. ಒಂದು ಎರಡು ತಿಂಗಳಲ್ಲಿ ಮತ್ತೆ ಸಂಪಾದಿಸುತ್ತೇನೆ ಎನ್ನುವ ನಂಬಿಕೆ ಇತ್ತು. ಯಾಕೆಂದರೆ ನನಗೆ ಆ ಟೈಮ್ ಅಲ್ಲಿ ಅಷ್ಟು ಶೋ ಬರುತ್ತಿತ್ತು. ಆದರೆ ಆ ಬಳಿಕ ಹೇಗೆ ಆಯ್ತು ಅಂದರೆ ಬೇಕಿತ್ತಾ ನನಗೆ ಇದು ಅನ್ನೋ ತರನು ಅನಿಸಿಬಿಡ್ತು ಎಂದರು.
ಇನ್ನು ವೈಯಕ್ತಿಕ ಕೆಲವು ವಿಚಾರಗಳ ಬಗ್ಗೆ ಮಾತನಾಡಿದ ಚಂದನ್ ಶೆಟ್ಟಿ, ದೇವರನ್ನು ನಾನು ನಂಬುತ್ತೇನೆ. ಎಲ್ಲಾ ದೇವರನ್ನು ನಾನು ನಂಬುತ್ತೇನೆ. ಅದೊಂದು ಶಕ್ತಿ ಅಂತಾ ನಂಬುತ್ತಿರುತ್ತಾರಲ್ಲ ಅದರ ಮೇಲೆ ನಂಬಿಕೆ ಮುಖ್ಯ. ದೇವರು ಎನ್ನುವುದಕ್ಕಿಂದ ನಂಬಿಕೆ ಮುಖ್ಯ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ