ಡಿ.ಬಿ.ಚಂದ್ರೇಗೌಡ ಬುದ್ದಿವಂತ ರಾಜಕಾರಣಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು

     ಹಿರಿಯ ರಾಜಕಾರಣಿ ಡಿ.ಬಿ.ಚಂದ್ರೇಗೌಡ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಅವರು ಇಂದು ಗೃಹಕಚೇರಿ ಕೃಷ್ಣಾದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದರು.

     ಚಂದ್ರೇಗೌಡ ಅವರು ರಾಜಕಾರಣದಲ್ಲಿ ಬಹಳ ದೀರ್ಘಕಾಲ ಇದ್ದವರು. ಕಾಂಗ್ರೆಸ್ ಬಿಟ್ಟು ಜನತಾ ಪಕ್ಷ ಸೇರಿದ್ದರು. ವಿಧಾನಸಭಾಧ್ಯಕ್ಷರಾಗಿದ್ದರು,ವಿವಿಧಪಕ್ಷದ ನಾಯಕರಾಗಿದ್ದರು. ಮತ್ತೆ ಕಾಂಗ್ರೆಸ್ ಸೇರಿ ಕಾನೂನು ಸಚಿವ ರಾಗಿದ್ದರು. ಬಿಜೆಪಿಗೆ ಸೇರಿ ಸಂಸದರಾಗಿದ್ದರು. ವಿವಿಧ ಹಂತಗಳಲ್ಲಿ ಕೆಲಸ ಮಾಡಿದವರು. ಅತ್ಯಂತ ಹಿರಿಯ ಹಾಗೂ ಬುದ್ದಿವಂತ ರಾಜಕಾರಣಿಯಾಗಿದ್ದ ಅವರು ಸಾಹಿತ್ಯದ ಬಗ್ಗೆಯೂ ಅಪಾರವಾಗಿ ಓದಿ ತಿಳಿದುಕೊಂಡಿದ್ದರು. ಅವರು ನಿಧನರಾಗಿರುವುದು ಕರ್ನಾಟಕದ ರಾಜಕಾರಣಕ್ಕೆ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥನೆ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

     ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬರ ಅಧ್ಯಯನಕ್ಕೆ ಹಾಸನಕ್ಕೆ ತೆರಳಿರುವ ಕುರಿತು ಮಾತನಾಡಿ ಬರ ಅಧ್ಯಯನವನ್ನು ಕೇಂದ್ರದ ತಂಡ ನಡೆಸಿ ಹೋಗಿದ್ದಾರೆ. ಕೇಂದ್ರ ಸರ್ಕಾರಕ್ಕೆಅವರಿನ್ನೂ ವರದಿ ನೀಡಿಲ್ಲ. ಬಿಜೆಪಿ ಯವರು ರಾಜಕಾರಣ ಮಾಡಲು ಅಧ್ಯಯನ ಮಾಡುತ್ತೇವೆ ಎನ್ನುತ್ತಿದ್ದಾರೆ. ಕೇಂದ್ರ ಸರ್ಕಾರದ ಬಳಿ ಕೇಳಿ ನಮಗೆ ಪರಿಹಾರ ಕೊಡಿಸಲಿ. ಅದನ್ನು ಬಿಟ್ಟು ಅಧ್ಯಯನ ಮಾಡುತ್ತೇವೆ ಎನ್ನುತ್ತಾರೆ. ಮಾಡಲಿ, ನಮ್ಮ ತಕರಾರು ಇಲ್ಲ ಎಂದರು.

     ಕೇಂದ್ರ ಸರ್ಕಾರಕ್ಕೆ 17900 ಕೋಟಿ ರೂ ಗಳ ಪರಿಹಾರ ಕೊರಲಾಗಿದೆ. ರಾಜ್ಯದಲ್ಲಿ ಸುಮಾರು 33, 700 ಕೋಟಿ ನಷ್ಟವಾಗಿದೆ. ರೈತರು ಹಾಗೂ ಕರ್ನಾಟಕದ ಬಗ್ಗೆ ಕಾಳಜಿ ಇದ್ದರೆ ಬಿಜೆಪಿ ಪರಿಹಾರ ಕೊಡಿಸಲಿ ಎಂದರು. 25 ಬಿಜೆಪಿ ಸಂಸದರು ಪರಿಹಾರ ಕೊಡಿಸುವುದನ್ನು ಮೊದಲು ಮಾಡಲಿ. ನಮ್ಮ ಮಂತ್ರಿಗಳಿಗೆ ಸಂಬಂಧ ಪಟ್ಟ ಸಚಿವರು ಬಿಜೆಪಿಗೆ ಸಮಯವನ್ನೇ ನೀಡಿಲ್ಲ. ಇವರಿಗೆ ಕರ್ನಾಟಕದ ಬಗ್ಗೆ ಯಾವ ಕಾಳಜಿ ಇದೆ ಎಂದರು.

      ಅವೈಜ್ಞಾನಿಕ ಸಮೀಕ್ಷೆ- ಕುಮಾರಸ್ವಾಮಿ ಹೇಳಿಕೆ : ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಬರೆಯಬೇಕು
ಬರದ ಕುರಿತು ವೈಜ್ಞಾನಿಕ ಸಮೀಕ್ಷೆಯಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿರುವ ಬಗ್ಗೆ ಮಾತನಾಡಿ ಸಮೀಕ್ಷೆ ಮಾಡಿದವರು ಕೇಂದ್ರ ಸರ್ಕಾರದ ತಂಡ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಬರೆಯಬೇಕು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap