ನಾಯಕನಹಟ್ಟಿ :
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ದಲಿತರಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ದಲಿತರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ಯಾಯ ಎಸಗಿದೆ ಎಂದು ಬಿಜೆಪಿ ನಾಯಕನಹಟ್ಟಿ ಮಂಡಲ ಅಧ್ಯಕ್ಷ ಚನ್ನಗನಹಳ್ಳಿ ಮಲ್ಲೇಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿದ್ದು ಈ ಕ್ಷೇತ್ರಕ್ಕೆ ಒಂದು ಚರಂಡಿಯನ್ನು ಮಾಡಲಿಕ್ಕೆ ಅನುದಾನ ಸಿಗುತ್ತಿಲ್ಲ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಈ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಬೇಕೆಂದು ಕಾಂಗ್ರೆಸ್ ಶಾಸಕರ ಪರವಾಗಿ ಬಿಜೆಪಿ ಪಕ್ಷದ ಮುಖಂಡರು ಎಲ್ಲರೂ ಸೇರಿ ಮೊಳಕಾಲ್ಮೂರು ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದೇವೆ. ಆದರೆ ನಿಮ್ಮ ಪಕ್ಷದವರೇ ಮಾಡಲಿಲ್ಲ ನಾವು ಮಾಡಿದ್ದೇವೆ ಎಂದು ಖಡಕ್ಕಾಗಿ ಹೇಳಿದರು.
ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ, ಅಭಿವೃದ್ಧಿಯಲ್ಲಿ ಮೊಳಕಾಲ್ಮೂರು ಕ್ಷೇತ್ರ ಮರೀಚಿಕೆಯಾಗಿದೆ. ಹಣ ಪಡೆದು ಮನೆ ಹಂಚಿಕೆಯ ಆರೋಪ ಎದುರಿಸುತ್ತಿರುವ ವಸತಿ ಸಚಿವ ಬಿ ಜಡ್ ಜಮೀರ್ ಅಹಮದ್ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.ಮಾಜಿ ಸಚಿವ ಬಿ ಶ್ರೀರಾಮುಲು ಹಾಗೂ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ 10 ವರ್ಷಗಳಲ್ಲಿ ಈ ಕ್ಷೇತ್ರಕ್ಕೆ ಅನುದಾನವನ್ನು ತಂದು ಅಭಿವೃದ್ಧಿ ಪಡಿಸಿದ್ದಾರೆ.
ಬಿಜೆಪಿ ಮಾಜಿ ಮಂಡಲ ಅಧ್ಯಕ್ಷ ಈ ರಾಮರೆಡ್ಡಿ ಮಾತನಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ ಅವರೇ ನಮ್ಮ ಬಿಜೆಪಿ ಪಕ್ಷದ ಸಿದ್ಧಾಂತ ನಮಗೆ ಗೊತ್ತಿದೆ, ನೀವು ನನಗೆ ಪಾಠ ಕಲಿಸಿಕೊಡು ಅವಶ್ಯಕತೆ ಇಲ್ಲ. ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಎಲ್ಲಾ ಪಕ್ಷದವರು ಒಂದು ಮನೆಯ ಸದಸ್ಯರಂತೆ ಇದ್ದೇವೆ. ಈ ಕ್ಷೇತ್ರದ ಅಭಿವೃದ್ಧಿಗೆ ಗಮನ ಹರಿಸಿ ಎಂದು ಟಾಂಗ್ ನೀಡಿದರು.
ಮೊಳಕಾಲ್ಮೂರು ಶಾಸಕ ಎನ್ ವೈ ಗೋಪಾಲಕೃಷ್ಣ ರವರ ಮೇಲೆ ನಮಗೆ ದ್ವೇಷವಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಪ್ರೋತ್ಸಾಹ ಯಾವಾಗಲೂ ಇರುತ್ತೆದೆ. ಈ ಪಟ್ಟಣದಲ್ಲಿ ಸುಸಜ್ಜಿತವಾದ ಸರ್ಕಾರಿ ಶಾಲಾ, ಕಾಲೇಜುಗಳು ಇಲ್ಲ. ವಸತಿ ನಿಲಯಗಳು ಇಲ್ಲ. ಯಾವುದೇ ಪಕ್ಷ ಆಗಲಿ ಮೊದಲು ಅಭಿವೃದ್ಧಿಪಡಿಸಲು ಮುಂದಾಗಬೇಕು. ನಮ್ಮ ಪಕ್ಷ ಸಿಸ್ತು ಮತ್ತು ತತ್ವ ಸಿದ್ಧಾಂತಗಳನ್ನು ಕಲಿಸಿದೆ. ನಿಮ್ಮ ಪಕ್ಷದ ಮುಖಂಡರಿಗೆ ನಿಮ್ಮ ಪಕ್ಷದ ತತ್ವ ಸಿದ್ಧಾಂತಗಳನ್ನು ಕಲಿಸಿ ಎಂದು ಹೇಳಿದರು.
ನಂತರ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಬೋರ ಸ್ವಾಮಿ ಮಾತನಾಡಿ ಸತತ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಾಸಕರು ಏನು ಕೆಲಸ ಮಾಡಿದ್ದಾರೆ? ಅವರಿಗೆ ನಾವೇನು ಸಹಾಯ ಮಾಡಿದ್ದೇವೆ? ಮನುಷ್ಯ ಆದ್ಮೇಲೆ ಒಬ್ಬರಿಗೊಬ್ಬರು ಸಹಕಾರ ನೀಡುವುದು ಅತ್ಯವಶ್ಯಕ. ಯಾವುದೇ ಒಬ್ಬ ಶಾಸಕರು ತನ್ನ ಒಬ್ಬರ ಮಾತದಾನದಿಂದ ಆಯ್ಕೆಯಾಗುವುದಿಲ್ಲ. ಅನೇಕ ಕಾರ್ಯಕರ್ತರ ಶ್ರಮ ಮತ್ತು ಕ್ಷೇತ್ರದ ಎಲ್ಲ ಮುಖಂಡರುಗಳ ಪ್ರತಿಫಲದಿಂದ ಶಾಸಕರಾಗಿ ಆಯ್ಕೆಯಾಗುತ್ತಾರೆ. ನಮ್ಮ ಕ್ಷೇತ್ರದ ಮಾಜಿ ಶಾಸಕರ ಬಗ್ಗೆ ಇಡೀ ಕ್ಷೇತ್ರದ ಜನತೆಗೆ ಗೊತ್ತಿದೆ. ಅವರ ಬಗ್ಗೆ ಇವರು ಹೇಳಲು ಏನು ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಈ ಕ್ಷೇತ್ರದಲ್ಲಿ ಶಾಸಕರು ನಡೆದುಕೊಂಡಿರುವ ಬಗ್ಗೆ ಕ್ಷೇತ್ರದ ಮುಖಂಡರಿಗೆ ಮಾಹಿತಿ ಇಲ್ಲ. ಸ್ವ ಪಕ್ಷದ ನಿಗಮ ಮಂಡಳಿ ಅಧ್ಯಕ್ಷ ಡಾ. ಯೋಗೇಶ್ ಬಾಬುರವರು ಚಿಕ್ಕೆಕೆರೆ ಬಾಗಿನ ಅರ್ಪಿಸುವ ಸಂದರ್ಭದಲ್ಲಿ ನಿಮ್ಮ ಕಾಂಗ್ರೆಸ್ ಪಕ್ಷದವರೇ ತೊಂದರೆ ನೀಡಿದ್ದರು. ಸುಮಾರು 8 ತಿಂಗಳಲ್ಲಿ ಪಟ್ಟಣ ಪಂಚಾಯಿತಿಯಲ್ಲಿನ ಆಗುಹೋಗುಗಳ ಬಗ್ಗೆ ಮಾಹಿತಿ ಇಲ್ಲ, ಇ-ಸ್ವತ್ತಿನಲ್ಲಿ ಅನೇಕ ಭ್ರಷ್ಟಾಚಾರಗಳು ನಡೆದಿವೆ. ಪ ಪಂ ಉಪಾಧ್ಯಕ್ಷರು ಇದರಲ್ಲಿ ದೊಡ್ಡ ಹಗರಣ ಮಾಡಿದ್ದಾರೆ. ಎಪಿಎಂಸಿ ಮಾರ್ಕೆಟ್ ನ ಹಳೆ ಸೀಟು ಮತ್ತು ತಗಡುಗಳನ್ನು ಸಹ ಮಾರಾಟ ಮಾಡಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಮಾಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಓ ಮಂಜುನಾಥ್, ಮಾಜಿ ತಾಲ್ಲೂಕ್ ಪಂಚಾಯತಿ ಸದಸ್ಯ ಮೈಸೂರು ಪಾಲಣ್ಣ, ಪಟ್ಟಣ ಪಂಚಾಯತಿ ಸದಸ್ಯ ಮಾಂತಣ್ಣ, ಎಚ್. ವಿ. ಪ್ರಕಾಶ್ ರೆಡ್ಡಿ, ಚೌಳಕೆರೆ ನಾಗರಾಜ್, ಬಿ. ಓ. ಆರ್. ಓಬಣ್ಣ, ದರ್ಶನ್, ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಪಟೇಲ್ ಕೆ ಬಿ ಕೃಷ್ಣೇಗೌಡ, ಮಂಡಲ ಪ್ರಧಾನ ಕಾರ್ಯದರ್ಶಿ ಬೆಂಕಿ ಗೋವಿಂದಪ್ಪ, ಅಬ್ಬೇನಹಳ್ಳಿ ನಾಗರಾಜ್, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ನಾಗರಾಜ್, ಎನ್ ತಿಪ್ಪೇಸ್ವಾಮಿ ಗುಂತಕೋಲಮ್ಮನಹಳ್ಳಿ, ಪ್ರಕಾಶ್, ಬೋರಯ್ಯ, ಶಿವಾನಂದ ಸ್ವಾಮಿ ಎನ್ ಗೌರಿಪುರ, ಕೊಂಡ್ಲಹಳ್ಳಿ ರೇವಣ್ಣ ಹಾಗೂ ಬಿಜೆಪಿ ಪಕ್ಷದ ಮುಖಂಡರುಗಳು ಇದ್ದರು.








