ಮೋದಿ ವಿರುದ್ದ ಹಕ್ಕು ಚ್ಯುತಿ ಮಂಡಿಸಿದ ಚರಣ್ ಜಿತ್ ಸಿಂಗ್ ಚನ್ನಿ

ನವದೆಹಲಿ:

    ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯ ಜಾತಿ ಕುರಿತು ಬಿಜೆಪಿ ಸಂಸದ ಅನುರಾಗ್ ಠಾಕೂರ್ ವಿವಾದಾತ್ಮಕ ಹೇಳಿಕೆ ಮಾಡಿದ ಒಂದು ದಿನದ ನಂತರ ಕಡತದಿಂದ ತೆಗೆದ ಹೇಳಿಕೆಯನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಕ್ಕು ಚ್ಯುತಿ ಮಂಡನೆ ಮಾಡಿದೆ.

   ಪಂಜಾಬಿನ ಮಾಜಿ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಪ್ರಧಾನಿ ಮೋದಿ ವಿರುದ್ಧ ಹಕ್ಕು ಚ್ಯುತಿ ನಿರ್ಣಯವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

    ಮಂಗಳವಾರ ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್, ರಾಹುಲ್ ಗಾಂಧಿ ಜಾತಿ ಕುರಿತ ಹೇಳಿಕೆ ಲೋಕಸಭೆಯಲ್ಲಿ ವಾಗ್ವಾದಕ್ಕೆ ಕಾರಣವಾಗಿತ್ತು. ಸೋಮವಾರ ಭಾಷಣ ಮಾಡಿದ್ದ ರಾಹುಲ್ ಗಾಂಧಿ, ಇಂಡಿಯಾ ಮೈತ್ರಿಕೂಟ ಸದನದಲ್ಲಿ ಜಾತಿ ಗಣತಿಗೆ ಅನುಮೋದನೆ ನೀಡಲಿದೆ ಎಂದು ಹೇಳಿದ್ದರು.

    ಸಭಾಧ್ಯಕ್ಷರಿಂದ ಕಡತದಿಂದ ತೆಗೆದ ಹೇಳಿಕೆಯನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿದ ಪ್ರಧಾನಿ ವಿರುದ್ಧ ಲೋಕಸಭೆ ಕಲಾಪದ ನಿಯಮ 222 ಅಡಿಯಲ್ಲಿ ಹಕ್ಯುಚ್ಯುತಿ ನಿರ್ಣಯ ಮಂಡಿಸಲು ನೋಟಿಸ್ ನೀಡುತ್ತಿರುವುದಾಗಿ ಚನ್ನಿ ಹೇಳಿದ್ದಾರೆ.

    ಜುಲೈ 30 ರಂದು ಅನೂರಾಗ್ ಸಿಂಗ್ ಠಾಕೂರ್ ಅವರ ಆಕ್ಷೇಪಾರ್ಹ ಹೇಳಿಕೆಯನ್ನು ಸಭಾಧ್ಯಕ್ಷರು ಕಡತದಿಂದ ತೆಗೆದಿದ್ದರೂ ಪ್ರಧಾನಿ ನರೇಂದ್ರ ಮೋದಿ ಇಡೀ ಭಾಷಣದ ವಿಡಿಯೋದೊಂದಿಗೆ ಕಡತದಿಂದ ತೆಗೆದ ಹೇಳಿಕೆಯನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವುದು ಆಘಾತಕಾರಿಯಾಗಿದೆ ಇದರ ಜೊತೆಗೆ ಭಾಷಣದಲ್ಲಿನ ಇತರ ಆಕ್ಷೇಪಾರ್ಹ ಪದಗಳನ್ನು ಸಹ ಟ್ವೀಟ್ ಮಾಡಲಾಗಿದೆ ಎಂದು ನೋಟಿಸ್ ನಲ್ಲಿ ಹೇಳಲಾಗಿದೆ.
    ಲೋಕಸಭೆಯ ಕಡತದಿಂದ ತೆಗೆದ ಟೀಕೆಗಳನ್ನು ಪ್ರಧಾನಿ ಟ್ವೀಟ್ ಮಾಡುವುದು ಸದನದ ಹಕ್ಕುಚ್ಯುತಿ ಉಲ್ಲಂಘನೆಗೆ ಸಮಾನವಾಗಿದೆ. ಆದ್ದರಿಂದ, ನಾನು ಪ್ರಧಾನಮಂತ್ರಿಯವರ ವಿರುದ್ಧ ಹಕ್ಕು ಚ್ಯುತಿ ನಿರ್ಣಯ ಮಂಡಿಸುತ್ತಿದ್ದೇನೆ.
   ದಯವಿಟ್ಟು ನನ್ನ ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವಂತೆ ಮತ್ತು ಅದನ್ನು ಮಂಡಿಸಲು ಅನುಮತಿ ನೀಡುವಂತೆ ಚನ್ನಿ ಮನವಿ ಮಾಡಿದ್ದಾರೆ. ಬಜೆಟ್‌ನಲ್ಲಿ ಠಾಕೂರ್ ಅವರ ಭಾಷಣವನ್ನು “ಅತ್ಯಂತ ನಿಂದನೀಯ ಮತ್ತು ಅಸಂವಿಧಾನಿಕ ದಬ್ಬಾಳಿಕೆಯಾಗಿದೆ. ಇದನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳುವ ಮೂಲಕ ಪ್ರಧಾನಿ ಮೋದಿಯಿಂದ ಗಂಭೀರ ಹಕ್ಕುಚ್ಯುತಿಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

Recent Articles

spot_img

Related Stories

Share via
Copy link
Powered by Social Snap