ಮಧ್ಯಪ್ರದೇಶದ ಜಬಲ್‌ಪುರ : ವಿಮಾನ ನಿಲ್ದಾಣದ ಛಾವಣಿ ಕುಸಿತ

ಭೋಪಾಲ್:

    ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಗುರುವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ದುಮ್ನಾ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡದ ಮುಂಭಾಗದ ಫ್ಯಾಬ್ರಿಕ್ ಮೇಲ್ಛಾವಣಿಯ ಭಾಗವೊಂದು ಕುಸಿದಿದೆ. ಮೂರು ತಿಂಗಳ ಹಿಂದೆ ಮಾರ್ಚ್ 10 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಕಟ್ಟಡದ ನಿರ್ಮಾಣ ಕಾಮಗಾರಿಯ ಗುಣಮಟ್ಟವನ್ನು ಕಾಂಗ್ರೆಸ್ ಪ್ರಶ್ನಿಸಿದ್ದು, ಭ್ರಷ್ಟಾಚಾರದ ಆರೋಪ ಮಾಡಿದೆ.

    ಹೆಚ್ಚಿನ ಪ್ರಮಾಣದ ನೀರಿನ ಸಂಗ್ರಹಣೆಯಿಂದ ಉಂಟಾದ ಈ ದುರ್ಘಟನೆಯಿಂದಾಗಿ ಮೇಲ್ಫಾವಣಿಯ ಅಡಿಯಲ್ಲಿ ನಿಲ್ಲಿಸಲಾದ ಸರ್ಕಾರಿ ಅಧಿಕಾರಿಯ ಕಾರು ಜಖಂಗೊಂಡಿದೆ. ಆದಾಗ್ಯೂ, ಅದೃಷ್ಟವಶಾತ್, ಸರ್ಕಾರಿ ಅಧಿಕಾರಿ ಮತ್ತು ಚಾಲಕ ಘಟನೆಗೂ ಮುನ್ನಾ ಕಾರಿನಿಂದ ಇಳಿದಿದ್ದು, ಯಾವುದೇ ಪ್ರಾಣಪಾಯವಿಲ್ಲದೆ ಪಾರಾಗಿದ್ದಾರೆ. ಸರ್ಕಾರಿ ಅಧಿಕಾರಿ (ಬಹುಶಃ ಆದಾಯ ತೆರಿಗೆ ಇಲಾಖೆಯ ಅಧಿಕಾರಿ) ವಿಮಾನ ನಿಲ್ದಾಣದ ಒಳಗೆ ಹೋಗಲು ಕಾರಿನಿಂದ ಹೊರಬಂದ ನಂತರ ಬೆಳಿಗ್ಗೆ 11.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. 

    ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡದ ಮುಂಭಾಗದಲ್ಲಿ ಅಲಂಕಾರಿಕ ಉದ್ದೇಶಗಳಿಗಾಗಿ ಫ್ಯಾಬ್ರಿಕ್ ಮೇಲ್ಛಾವಣಿ ನಿರ್ಮಿಸಲಾಗಿದೆ. ಭಾರೀ ಮಳೆಯಿಂದಾಗಿ ಅದರ ಒಂದು ಭಾಗದಲ್ಲಿ ಮಳೆ ನೀರು ಸ್ಥಳೀಯವಾಗಿ ಶೇಖರಣೆಯಾಗಿ ಕುಸಿತ ಉಂಟಾಗಿದೆ. ಇದು ಕಾರಿನ ಛಾವಣಿ ಮತ್ತು ಕಿಟಕಿಗಳಿಗೆ ಹಾನಿಯನ್ನುಂಟುಮಾಡಿದೆ. ಘಟನೆಯ ಹಿಂದಿನ ಕಾರಣಗಳನ್ನು ಕಂಡುಹಿಡಿಯಲು ಈ ವಿಷಯದಲ್ಲಿ ತಾಂತ್ರಿಕ ತನಿಖೆಗೆ ತಕ್ಷಣ ಆದೇಶಿಸಲಾಗಿದೆ ಎಂದು ಜಬಲ್‌ಪುರ ವಿಮಾನ ನಿಲ್ದಾಣದ ನಿರ್ದೇಶಕ ರಾಜೀವ್ ರತನ್ ಪಾಂಡೆ ತಿಳಿಸಿದ್ದಾರೆ.

    ಈ ಮಧ್ಯೆ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ. ಮಧ್ಯ ಪ್ರದೇಶ ಭ್ರಷ್ಟಾಚಾರದ ಭದ್ರಕೋಟೆಯಾಗಿ ಮಾರ್ಪಟ್ಟಿದೆ. ಮುಖ್ಯಮಂತ್ರಿ ಯಾದವ್ , ಬಿಜೆಪಿ ಭ್ರಷ್ಟಾಚಾರ ಮಾಡದ ಯಾವುದೇ ಸ್ಥಳ ಉಳಿದಿದೆಯೇ? ಎಂದು ಪ್ರಶ್ನಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap