ಲಕ್ಷ್ಮೀನಾರಾಯಣರಿಗೆ ರಾಜ್ಯಮಟ್ಟದ ಛಾಯಾಭೂಷಣ” ಪ್ರಶಸ್ತಿ….!

ಶಿರಸಿ:

    ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ವತಿಯಿಂದ 186 ನೇ ವರ್ಷದ ವಿಶ್ವ ಛಾಯಾಗ್ರಹಣ ದಿನಾಚರಣೆ – 2025 ಸಂದರ್ಭದಲ್ಲಿ ಛಾಯಾಗ್ರಹಣ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ಸಾಧಕರಿಗೆ ಕೆಪಿಎ ಕೊಡಮಾಡುವ ಛಾಯಾಭೂಷಣ ರಾಜ್ಯಮಟ್ಟದ ಪ್ರಶಸ್ತಿಗೆ ಶಿರಸಿಯ ಹರ್ಷ ಸ್ಟುಡೀಯೊದ ಲಕ್ಷೀನಾರಾಯಣ್ ಭಟ್ ರವರು ಆಯ್ಕೆಯಾಗಿದ್ದಾರೆ.ತಾಲ್ಲೂಕು ಮಟ್ಟದಿಂದ ಹಿಡಿದು, ಜಿಲ್ಲಾ ಮತ್ತು ರಾಜ್ಯ ಮಟ್ಟದ ವರೆವಿಗೂ ಸಂಘಟನೆಗಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದಾರೆ, ಉತ್ತರ ಕರ್ನಾಟಕದಲ್ಲಿ ಛಾಯಾಗ್ರಾಹಕರ ಒಗ್ಗಟ್ಟಿಗಾಗಿ ಶ್ರಮಿಸಿದ್ದಾರೆ, ಇವರ ಸಂಘಟನಾ ಸೇವೆ ಅನನ್ಯವಾಗಿದೆ.

   1981ರಲ್ಲಿ ಎಸ್ ಎಸ್ ಎಲ್ ಸಿ ವ್ಯಾಸಂಗ ಮುಗಿಸಿ ಆಮೇಲೆ ಫೈನ್ ಆರ್ಟ್ ನಲ್ಲಿ ಮೂರು ವರ್ಷ ವ್ಯಾಸಂಗ, ಧಾರವಾಡ ಹಾಗೂ ಉಡುಪಿಯಲ್ಲಿ 1985ರಲ್ಲಿ ಬೆಂಗಳೂರಿನ ಅವೆನ್ಯೂ ರೋಡ ನ ಶಕ್ತಿ ವಿಸಿವೆಲ್ಸ್ ನಲ್ಲಿ ಒಂದು ವರ್ಷದ ಛಾಯಾಗ್ರಹಣದ ಪ್ರಾಥಮಿಕ ತರಬೇತಿಯನ್ನು ಪಡೆದು ಶಿರಸಿಯಲ್ಲಿ ಒಂದು ವರ್ಷ ಛಾಯಾಗ್ರಹಣ ತರಬೇತಿ ಪಡೆದು 1988ರಲ್ಲಿ ಶಿರಸಿಯಲ್ಲಿ ಶ್ರೀ ಹರ್ಷ
ಎನ್ನುವ ಹೆಸರಿನ ಸ್ಟುಡಿಯೋ ಪ್ರಾರಂಭಿಸಿದರು.

   ೩೭ ವರ್ಷಗಳ ಸುದೀರ್ಘ ಛಾಯಾಗ್ರಹಣದ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ಲಕ್ಷ್ಮೀ ನಾರಾಯಣ ಭಟ್ ಅವರಿಗೆ ಈ ಗೌರವ ನೀಡುತ್ತಿರುವ ಬಗ್ಗೆ ಜಿಲ್ಲಾ ಛಾಯಾಗ್ರಾಹಕ ಸಂಘದ ಅಧ್ಯಕ್ಷ ಸುರೇಶ ಹೊನ್ನಾವರ, ಉಪಾಧ್ಯಕ್ಷ ರಾಜು ಕಾನಸೂರು ಹಾಗೂ ಆಡಳಿತ ಕಮಿಟಿಯವರು ತೀವ್ರ ಹರ್ಷ ವ್ಯಕ್ತ ಪಡಿಸಿದ್ದಾರೆ.

Recent Articles

spot_img

Related Stories

Share via
Copy link