ಚೆಕ್ ಡ್ಯಾಂ ನಿರ್ಮಿಸಿದ್ದು ಸಾರ್ಥಕವಾಯ್ತು..!

ಮಧುಗಿರಿ:

ಭರ್ತಿಯಾದ ಚೆಕ್ ಡ್ಯಾಂಗೆ ಭೇಟಿ ಕೊಟ್ಟ ಕೆಎನ್‍ಆರ್ ನುಡಿ

    ಗಡಿಭಾಗದ ರೈತರು ಬಹಳಷ್ಟು ಶ್ರಮ ಜೀವಿಗಳಾಗಿದ್ದು ಮಳೆಯನ್ನೇ ನಂಬಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಅವರಿಗೆ ನೀರು ಕೊಡಲೆ ಬೇಕು ಎಂಬ ಉದ್ದೇಶದಿಂದ ನನ್ನ ಅವಧಿಯಲ್ಲಿ ಅಂದಾಜು 20 ಕೋಟಿ ರೂ. ಗಳ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಿರುವುದು ಸಾರ್ಥಕವಾಗಿದೆ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ತಿಳಿಸಿದರು.

ಅವರು ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ವೀರನಾಗೇನಹಳ್ಳಿ ಹಾಗೂ ಇಮ್ಮಡಗೊಂಡನಹಳ್ಳಿ ಗ್ರಾಮಗಳ ನಡುವೆ ಜಯಮಂಗಲಿ ನದಿಗೆ ಅಡ್ಡಲಾಗಿ 6 ಕೋಟಿ 75 ಲಕ್ಷ ರೂ. ಗಳ ವೆಚ್ಚದಲ್ಲಿ 2014 ರಲ್ಲಿ ನಿರ್ಮಿಸಿದ್ದ ಚೆಕ್ ಡ್ಯಾಂ ತುಂಬಿ ಹರಿಯುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದಾಗ ಮಾಧ್ಯಮದವರೊಂದಿಗೆ ಮಾತನಾಡಿದರು. ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆ ಜನರ ವಿಶ್ವಾಸ ಹೆಚ್ಚಿಸಿದ್ದು, ಮುಂದಿನ ಕೃಷಿ ಚಟುವಟಿಕೆಗಳು ಗರಿಗೆದಲಿವೆ. ನನ್ನ ಅವಧಿಯಲ್ಲಿ ತಾಲ್ಲೂಕಿನ ಜಯಮಂಗಲಿ ನದಿಗೆ ಅಡ್ಡಲಾಗಿ 3 ಚೆಕ್ ಡ್ಯಾಂ ಹಾಗೂ ಬೃಹತ್ ಸೇತುವೆ ನಿರ್ಮಿಸಿದ ಫಲವಾಗಿ ಇಂದು ಚೆಕ್ ಡ್ಯಾಂಗಳು ಭರ್ತಿಯಾಗಿ ತುಂಬಿ ಹರಿಯುತ್ತಿವೆ.

1932 ರಲ್ಲಿಯೇ ಮೈಸೂರು ಹಾಗೂ ನೆರೆಯ ಆಂಧ್ರಪ್ರದೇಶದ ಸರಕಾರಗಳೊಂದಿಗೆ ಆಂಧ್ರಪ್ರದೇಶ ಹಾಗೂ ಜಿಲ್ಲೆಯ ಕೊರಟಗೆರೆ ಕ್ಷೇತ್ರದ ಅಕ್ಕಿರಾಂಪುರದವರೆಗೆ 18 ಕಿ.ಮೀ. ವರೆಗೆ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆಯೆ ಒಡಂಬಡಿಕೆಯಾಗಿತ್ತು. ಜಯಮಂಗಲಿ ನದಿಯ ನೀರಿಗೆ ಯಾವುದೇ ರೀತಿಯ ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಂತಿರಲಿಲ್ಲ. ಆದರೆ ರಿಪೇರಿಗಳಿಗೆ ಆದ್ಯತೆ ಇರುವುದನ್ನು ಮನಗಂಡು ತಾಲ್ಲೂಕಿನ ಎರಡು ರಾಜ್ಯಗಳ ಜನರ ಹಿತದೃಷ್ಟಿಯಿಂದ ಅಂದಿನ ಅಧಿಕಾರಿಗಳ ಪರಿಶ್ರಮದ ಮೂಲಕ ಜಯಮಂಗಲಿಗೆ ವೀರನಾಗೇನಹಳ್ಳಿ ಮತ್ತು ಕಾಳೇನಹಳ್ಳಿಯ ಸಮೀಪ 1 ಕೋಟಿ 41 ಲಕ್ಷ ರೂ. ಗಳ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಯಿತು.

ಜೊತೆಗೆ ಈ ಭಾಗದಲ್ಲಿನ ಹಳ್ಳದ ಸಮೀಪದ ಗ್ರಾಮಸ್ಥರು ನೀರಿಗಾಗಿ ಆಗಾಗ ಜಗಳವಾಡುವುದನ್ನು ಮನಗಂಡು ಜಯಮಂಗಲಿ ನದಿಗೆ ಸಬ್ ಚೆಕ್ ಡ್ಯಾಂ ಗಳನ್ನು ಸಹ ನಿರ್ಮಿಸಲಾಗಿದೆ ಎಂದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ಪುರಸಭೆಯ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಎನ್. ಗಂಗಣ್ಣ, ಮುಖಂಡರುಗಳಾದ ಆದಿನಾರಾಯಣರೆಡ್ಡಿ, ಪಿ.ಸಿ.ಕೃಷ್ಣ್ಣಾರೆಡ್ಡಿ, ತಿಮ್ಮಾರೆಡ್ಡಿ, ವಿ.ಆರ್.ಭಾಸ್ಕರ್. ಜೆ.ಡಿ.ವೆಂಕಟೇಶ್, ಎಸ್‍ಡಿಕೆ ವೆಂಕಟೇಶ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ರಾಮಕೃಷ್ಣ, ನರಸಿಂಹಮೂರ್ತಿ, ಸೀತಾರಾಂ, ಸಂತೋಷ್, ಗ್ರಾಪಂ ಅಧ್ಯಕ್ಷ ಸೀನಪ್ಪ, ಪಂಚಾಕ್ಷರಯ್ಯ, ಪ್ರಸಾದ್ ರೆಡ್ಡಿ, ಕಾಂತರಾಜು, ನಾಗರಾಜು, ಪುನೀತ್ ಹಾಗೂ ಇತರರು ಇದ್ದರು.

ತಮ್ಮ ಅವಧಿಯಲ್ಲಿ ನಿರ್ಮಿಸಿದ ಚೆಕ್ ಡ್ಯಾಂನಲ್ಲಿ ನೀರು ಹರಿಯುತ್ತಿದ್ದುದನ್ನು ಕಂಡು ಜಯಮಂಗಲಿ ನದಿಯ ನೀರನ್ನು ಸ್ಮರ್ಶಿಸಿ ಕಣ್ಣಿಗೆ ಒತ್ತುಕೊಂಡು ನಮಸ್ಕರಿಸಿ, ಪ್ರೋಕ್ಷಣೆ  ಮಾಡಿಕೊಂಡು ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳು ಸುಗುಮವಾಗಿ ನಡೆಯಲಿ ಎಂದು ಜನತೆಗೆ ಶುಭಹಾರೈಸಿದರು.

ನಮ್ಮ ಮನೆಯ ಯಜಮಾನರು ದೂರದಲ್ಲಿರುವ ಡ್ಯಾಂಗಳನ್ನು ನೋಡಲಂತೂ ಕರೆದುಕೊಂಡು ಹೋಗುವುದಿಲ್ಲ. ನಮ್ಮ ಸಾಹೇಬರು ಇಲ್ಲಿಯೇ ನಿರ್ಮಿಸಿರುವ ಡ್ಯಾಂನಲ್ಲಿ ಹರಿಯುತ್ತಿರುವ ನೀರನ್ನು ನೋಡಿ ಖುಷಿ ಪಡುತ್ತೇನೆ.

-ಲಕ್ಷ್ಮ್ಷಮ್ಮ, ವೀರನಾಗೇನಹಳ್ಳಿ ಗ್ರಾಮಸ್ಥೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap