ಕುಣಿಗಲ್ :
ಪಟ್ಟಣದ ಸರಹದ್ದಿನಲ್ಲಿ ಬರುವ ತಾಲ್ಲೂಕಿನ ಕೊತ್ತಗೆರೆ ಹೋಬಳಿ ಸಿಂಗೋನಹಳ್ಳಿ (ಕಟ್ಟೆಪಾಳ್ಯ) ಗ್ರಾಮದಲ್ಲಿ ಇಟ್ಟಿದ್ದ ಬೋನಿಗೆ ಹೆಣ್ಣು ಚಿತರೆ ಸೆರೆಸಿಕ್ಕಿದೆ ಎಂದು ವಲಯಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.
ಇದೇ ಭಾಗದಲ್ಲಿ ಸಾರ್ವಜನಿಕರಿಗೆ ಭಾರಿ ಭಯಭೀತಿ ಉಂಟುಮಾಡುವ ಮೂಲಕ ಚಿರತೆಯ ಉಪಟಳ ಹೆಚ್ಚಿತ್ತು. ಇದನ್ನು ಗಮನಹರಿಸಿದ ಅರಣ್ಯಾಧಿಕಾರಿಗಳು ಸಿಂಗೋನಹಳ್ಳಿ ಗ್ರಾಮದ ಸರ್ವೆ ನಂಬರ್ 85ರಲ್ಲಿ ಇಟ್ಟಿರುವ ಬೋನಿಗೆ ಬುಧವಾರ ಮುಂಜಾನೆ 6 ಗಂಟೆಯಲ್ಲಿ ಅಂದಾಜು ನಾಲ್ಕು ವರ್ಷದ ಹೆಣ್ಣು ಚಿರತೆ ಬೋನಿನಲ್ಲಿ ಸೆರೆಯಾಗಿದೆ ಎಂದು ಹೇಳಿದರು.
ಮುಂದೆ ಹೆಚ್ಚಿನ ಬೋನುಗಳನ್ನು ಇಟ್ಟು ಚಿರತೆಗಳನ್ನು ಸೆರೆ ಹಿಡಿದು ಕಾಡಿಗೆ ರವಾನಿಸುವುದಾಗಿ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
