ಚೇಳೂರು ತಾಲ್ಲೂಕು ಕಸಾಪ ಪ್ರಥಮ ಅಧ್ಯಕ್ಷರಾಗಿ ಜೆ.ಕೆ.ಆನಂದ್

ಬಾಗೇಪಲ್ಲಿ:

     ಚೇಳೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಪ್ರಥಮ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಜೆ.ಕೆ.ಆನಂದ್ ಆಯ್ಕೆಯಾಗಿದ್ದಾರೆ .ಚೇಳೂರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಇಂದು ನಡೆದ ಕಸಾಪ ಸದಸ್ಯರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ ಚೇಳೂರು ತಾಲ್ಲೂಕಿನ ಪದಾಧಿಕಾರಿಗಳ ಆಯ್ಕೆಯನ್ನು ಘೋಷಿಸಿದರು.

   ಈ ಸಂದರ್ಭದಲ್ಲಿ ಮಾತನಾಡಿದ ಅವರು ಕನ್ನಡ ಸಾಹಿತ್ಯ ಪರಿಷತ್ತು ಇಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತದೆ. ಚೇಳೂರು ಆಂದ್ರದ ಗಡಿಗೆ ಹೊಂದಿಕೊಂಡಿದ್ದರೂ ಕನ್ನಡ ಭಾಷೆ, ಸಾಹಿತ್ಯದ ಮೇಲೆ ಅಪಾರವಾದ ಗೌರವವನ್ನು ಹೊಂದಿರುವುದಕ್ಕೆ ಇಲ್ಲಿ ನಡೆದ ಅನೇಕ ಕನ್ನಡ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದಿರುವುದೇ ಸಾಕ್ಷಿಯಾಗಿತ್ತು. ಎಲ್ಲರೂ ಒಗ್ಗಟ್ಟಿನಿಂದ ಕನ್ನಡದ ತೇರನ್ನು ಎಳೆಯುವ ಕಾರ್ಯದಲ್ಲಿ ತೊಡಗಿಸಿಕೊಳ್ಲಬೇಕು ಎಂದು ಮನವಿ ಮಾಡಿದರು. 

   ಚೇಳೂರು ತಾಲ್ಲೂಕಿನ ಕಸಾಪ ನೂತನ ಅಧ್ಯಕ್ಷ ಜೆ.ಕೆ.ಆನಂದ್ ಮಾತನಾಡಿ, ನನಗೆ ಅಧ್ಯಕ್ಷ ಸ್ಥಾನವನ್ನು ನೀಡುವುದರ ಮೂಲಕ ತಾಯಿ ಭುವನೇಶ್ವರಿ ಸೇವೆ ಮಾಡುವ ಒಂದು ದೊಡ್ಡ ಜವಾ ಬ್ದಾರಿಯನ್ನು ಕಸಾಪ ನೀಡಿದ್ದು ಇದೊಂದು ಸೌಭಾಗ್ಯ ಎಂದು ಭಾವಿಸಿ ಎಲ್ಲಾ ಹಿರಿಯರ ಮಾರ್ಗ ದರ್ಶನವನ್ನು ಪಡೆದುಕೊಂಡು ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಳುಸುತ್ತೇನೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಅಮೃತ್ ಕುಮಾರ್, ಕಾರ್ಯದರ್ಶಿ ಎಸ್.ಸತೀಶ್, ಬಾಗೇಪಲ್ಲಿ ಕಸಾಪ ಅಧ್ಯಕ್ಷ ಡಾ.ಚಿನ್ನಕೈವಾರಮಯ್ಯ, ನಿಕಟಪೂರ್ವ ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ, ಶ್ರೀನಿವಾಸ್ ಬಾಣಾಲಪಲ್ಲಿ, ಬಿ.ಎಸ್.ಸುರೇಶ್, ಪಿ.ರಾಧಾಕೃಷ್ಣ, ಜೆ.ವಿ.ಚಲಪತಿ, ಜಿಲಾನ್ ಬಾಷ, ಟಿ.ಪಿ.ಅಶೋಕ್, ಪಿ.ಜಿ. ವೆಂಕಟರಾಮರೆಡ್ಡಿ, ಬಾಲಾಜಿ, ಕೆ.ವಿ.ಪ್ರಶಾಂತ್ ಕುಮಾರ್, ಶಿವಕುಮಾರ್, ಲೋಕೇಶ್, ರಾಮಾನಾಯಕ್,ಸುಬ್ಬಾರಾಯಪ್ಪ, ಆನಂದ್, ಶಿವಣ್ಣ, ಮುತ್ತಪ್ಪ, ವಿಜಯಕುಮಾರ್, ನರೇಶ್, ವೆಂಕಟರವಣ ಮತ್ತಿತರರು ಉಪಸ್ಥಿತ ರಿದ್ದರು.

Recent Articles

spot_img

Related Stories

Share via
Copy link