ಚೇಳೂರು: ಸಂಕಷ್ಟದಲ್ಲಿರುವ ವೃದ್ದ ದಂಪತಿ ಭೇಟಿಯಾದ ತಹಸೀಲ್ದಾರ್

 ಚೇಳೂರು:

      ಕೊರೋನಾದಿಂದಾಗಿ ಸಂಕಷ್ಟದಲ್ಲಿ ಇರುವ ವೃದ್ದ ದಂಪತಿಯ ವಿಡಿಯೊ ವೈರಲ್ ಆದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಗುಬ್ಬಿ ತಹಸೀಲ್ದಾರ್ ಡಾ. ಪ್ರದೀಪ್‍ಕುಮಾರ್ ಹಿರೇಮಠ ಹಾಗೂ ತಂಡ ಭೇಟಿ ನೀಡಿದ ಘಟನೆ ಚೇಳೂರಿನ ಗ್ರಾಮದಲ್ಲಿ ನಡೆದಿದೆ.

      ಗ್ರಾಮದಲ್ಲಿ ವಾಸವಾಗಿರುವ ನಾರಾಯಣಪ್ಪ-ತಿಮ್ಮಕ್ಕ ವೃದ್ದ ದಂಪತಿಗೆ ಮಕ್ಕಳು, ಸಂಬಂಧಿಕರು ಯಾರೂ ಜೊತೆಯಲ್ಲಿ ಇಲ್ಲ. ಇವರಿಗೆ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ಮಾತ್ರ ಸಿಗುತ್ತಿದೆ. ಸುಮಾರು ಎರಡು ಮೂರು ತಿಂಗಳಿಂದ ಪಿಂಚಣಿ ಹಣವು ಸಹ ಬರುತ್ತಿಲ್ಲ. ಇವರು ಜೀವನ ಮಾಡಲು ಯಾವ ರೀತಿಯ ಅನುಕೂಲವು ಸಹ ಇಲ್ಲ. ಜೊತೆಗೆ ಮನೆಯಲ್ಲಿ ಅಡಿಗೆ ಮಾಡಿಕೊಳ್ಳಲು ಬೇರೆ ಪದಾರ್ಥಗಳು ಸಹ ಇಲ್ಲ. ಇದರ ಬಗ್ಗೆ ಅಲ್ಲಿಯ ಪಕ್ಕದ ಮಹಿಳೆಯೊಬ್ಬರು ಸಾಮಾಜಿಕ ಜಾಲ ತಾಣದ ಮುಖಾಂತರ ವಿಡಿಯೋ ಮಾಡಿ ಹಾಕಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಹಾಗೂ ಕಂದಾಯ ಇಲಾಖೆಯವರು ದಂಪತಿ ಮನೆಗೆ ಭೇಟಿ ನೀಡಿ ಧವಸ ಧಾನ್ಯ, ಸಾಂಬಾರು ಪದಾರ್ಥ ಹಾಗು ಇನ್ನಿತರ ಸಾಮಗ್ರಿಗಳನ್ನು ನೀಡಿದರು.

      ತಹಸೀಲ್ದಾರ್ ಪ್ರದೀಪ್‍ಕುಮಾರ್ ಮಾತನಾಡಿ, ತಾಲ್ಲೂಕಿನಲ್ಲಿ 12 ಸಾವಿರದಷ್ಟು ಪಿಂಚಣಿದಾರರಿಗೆ ಕೊರೊನಾದಿಂದ ಹಣ ಸಿಗುತ್ತಿರಲಿಲ್ಲ. ಅದರಲ್ಲಿ 8 ಸಾವಿರದಷ್ಟು ಜನರಿಗೆ ಈಗ ಅನುಕೂಲವಾಗುತ್ತಿದೆ. ಮಿಕ್ಕ 4 ಸಾವಿರ ಪಿಂಚಣಿದಾರರಿಗೆ ಆದಷ್ಟು ಬೇಗ ಹಣದ ಸಹಾಯವಾಗುತ್ತದೆ. ಬ್ಯಾಂಕ್‍ಗಳಲ್ಲಿ ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯಗಳು ಪಡೆಯವುದಕ್ಕೆ ಸಹಕಾರ ನೀಡುವುದರ ಬಗ್ಗೆ ಬ್ಯಾಂಕ್ ಮ್ಯಾನೇಜರ್‍ಗಳ ಸಭೆಯನ್ನು ಕರೆಯಲಾಗುತ್ತದೆ. ಅರ್ಹ ಪಲಾನುಭವಿಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯದಿಂದ ವಂಚಿತವಾದರೆ ಅದರ ಬಗ್ಗೆ ನನ್ನ ಗಮನಕ್ಕೆ ತಂದರೆ ಅವರಿಗೆ ಅನುಕೂಲ ಮಾಡಲು ಸಹಾಯವಾಗುತ್ತದೆ ಎಂದರು.

      ಸ್ಥಳಕ್ಕೆ ಕಂದಾಯಧಿಕಾರಿ ನಟರಾಜ್, ಗ್ರಾಪಂ ಅಧ್ಯಕ್ಷೆ ಗಂಗಮ್ಮ, ಪ್ರಾ.ಕೃ.ಪ. ಸಹಕಾರ ಸಂಘದ ಅಧ್ಯಕ್ಷ ಪರಮೇಶ, ಉಪಾಧ್ಯಕ್ಷ ಗಂಗಾಧರಪ್ಪ, ಕಾರ್ಯದರ್ಶೀ ವಸಂತಕುಮಾರ್ ಹಾಗೂ ಇತರರು ಭೇಟಿ ನೀಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap