ಚೇಳೂರು :
ಗುಬ್ಬಿ ತಾಲ್ಲೂಕು ಚೇಳೂರು ಬಳಿ ಹೂವಿನಕಟ್ಟೆ ಗ್ರಾಮದ ಬಳಿ ಭಾನುವಾರ ಸಂಜೆ ಖಾಸಗಿ ಬಸ್ ಸೇತುವೆಗೆ ಡಿಕ್ಕಿ ಹೊಡೆದು ಉರುಳಿಬಿದ್ದು ಸುಮಾರು 20 ಪ್ರಯಾಣಿಕರು ಗಾಯಗೊಂಡಿದ್ದಾರೆ.
ತುಮಕೂರಿನಿಂದ ಚೇಳೂರು ಮಾರ್ಗವಾಗಿ ಯರಬಳ್ಳಿಗೆ ಹೋಗುತ್ತಿದ್ದ ಎಸ್‍ಎಲ್‍ವಿಟಿ ಬಸ್ ಸಂಜೆ 7 ಗಂಟೆ ಸುಮಾರಿನಲ್ಲಿ ಚಾಲಕನ ಅಜಾಗರೂಕತೆಯಿಂದ ಹೂವಿನಕಟ್ಟೆ ಗ್ರಾಮದ ಬಳಿಯ ಸೇತುವೆಗೆ ಡಿಕ್ಕಿ ಹೊಡೆದು ಉರುಳಿತು. ಘಟನೆಯಿಂದ ಬಸ್ಸಿನಲ್ಲಿದ್ದ 15-20 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಂಬುಲೆನ್ಸ್‍ನಲ್ಲಿ ಚೇಳೂರು ಹಾಗೂ ತುಮಕೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಬಸ್ಸಿನಲ್ಲಿ ಹೋವಿನಕಟ್ಟೆ, ಮಂಚಲದೊರೆ, ಕುಂಟರಾಮನಹಳ್ಳಿ ಸುತ್ತಮುತ್ತಲಿನ ಹಳ್ಳಿಯವರೇ ಹೆಚ್ಚಾಗಿದ್ದರು. ಚೇಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
