ಕೊರೋನಾ ಹೆಚ್ಚಳಕ್ಕೆ ಕಾರಣವಾದ ಜಾತ್ರೆ : ಗ್ರಾಮಕ್ಕೆ ಅಧಿಕಾರಿಗಳ ಭೇಟಿ

 ಚೇಳೂರು :

     ಹೋಬಳಿಯ ಇರಕಸಂದ್ರ ಗ್ರಾ.ಪಂ. ವ್ಯಾಪ್ತಿಯ ಚಿಂದಗೆರೆಯಲ್ಲಿ ಏ.18 ರಂದು ನಡೆದ ಜಾತ್ರೆಯ ಕಾರಣದಿಂದಾಗಿ ಕೊವೀಡ್ ಸೋಂಕುಗಳು ಹೆಚ್ಚಾಗಿದ್ದು ಅದರಿಂದ ಸಾವುಗಳು ಸಂಭವಿಸಿವೆ ಎಂಬ ಮಾಹಿತಿ ಮೇರೆಗೆ ಮೇ.25 ರಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಭೇಟಿ ನೀಡಿ ಪರಿಶೀಲಿಸಿದರು.

      ಪಿಡಿಒ ಮಂಜುಳಾ, ವೈದ್ಯಾಧಿಕಾರಿ ಸುಷ್ಮಾ ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡುತ್ತಾ ಇಲ್ಲಿ ಕೊವೀಡ್‍ನಿಂದ ಸಾವು ಸಂಭವಿಸಿಲ್ಲ. ಸೋಂಕಿನ ಪ್ರಕರಣಗಳು ಸಹ ಕಮ್ಮಿ ಇವೆ. ಈ ಗ್ರಾ.ಪಂ ವ್ಯಾಪ್ತಿಯಲ್ಲಿ ನಾಲ್ಕು ಜನ ಮಾತ್ರ ಮೃತ ಪಟ್ಟಿದ್ದಾರೆ. ಮೃತ ಪಟ್ಟವರು ಈ ಗ್ರಾ.ಪಂ ವ್ಯಾಪ್ತಿಯವರೂ ಅಲ್ಲ. ಸೋಂಕಿತರು ಗುಣಮುಖರಾಗುತ್ತಿದ್ದಾರೆ ಎಂಬ ಸಮಜಾಯಿಷಿ ನೀಡಿದರು. ಆಗ ಜಿಲ್ಲಾಧಿಕಾರಿಗಳು ಇದರ ಬಗ್ಗೆ ಮಾಹಿತಿಗಳನ್ನು ಪಡೆದು ಪರಿಶೀಲನೆ ಮಾಡಿ, ನಮಗೆ ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದಿದ್ದೇವೆ. ಮುಂದೆ ಎಲ್ಲರು ಕೋವಿಡ್ ಹರಡದಂತೆ ಜಾಗೃತಿ ವಹಿಸಬೇಕಾಗಿದೆ ಎಂದು ತಿಳಿಸಿದರು.

      ಜಿಲ್ಲಾಧಿಕಾರಿಗಳ ಜೊತೆ ಎಸ್‍ಪಿ ಡಾ.ವಂಶಿಕೃಷ್ಣ, ಉಪವಿಬಾಗಧಿಕಾರಿ ಅಜಯ್, ಗುಬ್ಬಿ ತಹಶೀಲ್ದಾರ್ ಡಾ.ಪ್ರದೀಪ್‍ಕುಮಾರ್ ಹಿರೇಮಠ್, ಉಪತಹಶೀಲ್ದಾರ್ ವೆಂಕಟರಂಗನ್, ಕಂದಾಯಾಧಿಕಾರಿ ನಟರಾಜ್, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾಕಾರ್ಯಕರ್ತೆಯರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link