ಚೀನಾದಿಂದ ಪಾಕ್‌ ಗೆ ಕೆಮಿಕಲ್‌ ರವಾನೆ : ವಶ ಪಡಿಸಿಕೊಂಡ ಭಾರತ

ಮಿಳುನಾಡು:

    ಅಶ್ರುವಾಯು ಅಥವಾ ಗಲಭೆ-ನಿಯಂತ್ರಣ ಬಳಸುವ ಗ್ಯಾಸ್ ಉತ್ಪಾದಿಸಲು ಬಳಸಬಹುದಾದ ಆರ್ಥೋ-ಕ್ಲೋರೊ ಬೆಂಜೈಲಿಡೀನ್ ಮ್ಯಾಲೋನೊನೈಟ್ರೈಲ್ (ಸಿಎಸ್) ರಾಸಾಯನಿಕವನ್ನು ತಮಿಳುನಾಡಿನ ಬಂದರಿನಲ್ಲಿ ಚೀನಾದ ಹಡಗಿನಿಂದ ಭದ್ರತಾ ಏಜೆನ್ಸಿಗಳು ವಶಪಡಿಸಿಕೊಂಡಿವೆ.

     ತಲಾ 25 ಕೆಜಿಯಂತೆ 103 ಡ್ರಮ್‌ಗಳಲ್ಲಿ ಸುಮಾರು 2560 ಕೆಮಿಕಲ್ ಹೊತ್ತು ಏಪ್ರಿಲ್ 18 ರಂದು ಚೀನಾದ ಶಾಂಘೈ ಬಂದರಿನಲ್ಲಿ ಈ ಹಡಗು ಹೊರಟಿದ್ದ ಈ ಹಡಗನ್ನು ತಪಾಸಣೆಯ ಸಮಯದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಡೆದಾಗ ಈ ವಿಚಾರ ಬೆಳಕಿಗೆ ಬಂದಿದೆ.

    ಈ ಕೆಮಿಕಲ್ ಅನ್ನು ಚೆಂಗ್ಡು ಶಿಚೆನ್ ಟ್ರೇಡಿಂಗ್ ಕಂ ಲಿಮಿಟೆಡ್ ಚೀನಾದ ಸಂಸ್ಥೆಯೂ ​ರಾವಲ್ಪಿಂಡಿ ಮೂಲದ ರಕ್ಷಣಾ ಪೂರೈಕೆದಾರ, ರೋಹೈಲ್ ಎಂಟರ್‌ಪ್ರೈಸಸ್‌ ಸಂಸ್ಥೆಗೆ ರವಾನಿಸಿತ್ತು.

   ಅಧಿಕಾರಿಗಳ ಪ್ರಕಾರ, ಪಾಕಿಸ್ತಾನವು ತನ್ನ ಸ್ನೇಹಿತ ಚೀನಾದ ಸಹಾಯದಿಂದ ಭಾರತದ ವಿರುದ್ದ ಆಕ್ರಮಣಕಾರಿ ರಾಸಾಯನಿಕ ಮತ್ತು ಜೈವಿಕ ಯುದ್ಧ ಯೋಜನೆ ರೂಪಿಸುತ್ತಿದೆ ಎಂದು ಆರೋಪಿಸಿದ್ದಾರೆ. ಚೀನಾ-ಪಾಕಿಸ್ತಾನ ರಕ್ಷಣಾ ಸಹಯೋಗದಲ್ಲಿ ಭಾರತದ ನಾಗರಿಕರ ವಿರುದ್ಧ ಇಂತಹ ರಾಸಾಯನಿಕಗಳನ್ನು ಬಳಸುವ ಸಾಧ್ಯತೆಯ ಬಗ್ಗೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap