ಮೃತದೇಹದ ಮೂಗನ್ನು ಕಚ್ಚಿ ತಿಂದ ಇಲಿ!!

ಚೆನ್ನೈ :

      ಶವಾಗಾರದ ಹಾನಿಗೀಡಾದ ಶೈತ್ಯಾಗಾರದಲ್ಲಿರಿಸಲಾಗಿದ್ದ ಮೃತದೇಹವೊಂದರ ಮೂಗನ್ನು ಇಲಿಯೊಂದು ಕಚ್ಚಿ ತಿಂದ ಘಟನೆ ವರದಿಯಾಗಿದೆ.

      ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದ ಚಿದಂಬರಂ ಸಮೀಪದ ತಂಡೇಶ್ವರನಲ್ಲೂರು ಗ್ರಾಮದ 22 ವರ್ಷದ ವೈಥೀಶ್ವರನ್ ಎಂಬ ಯುವಕನ ಮೃತದೇಹವನ್ನು ಪೋಸ್ಟ್ ಮಾರ್ಟಂ ನಂತರ ರಾತ್ರಿ ಚಿದಂಬರಂ ನಗರದ ಕಾಮರಾಜ್ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಿಲಾಗಿತ್ತು. ಬುಧವಾರ ಬೆಳಗ್ಗೆ ಆತನ ಸ್ನೇಹಿತರು ಆತನ ಕಳೇಬರದಲ್ಲಿ ಮೂಗು ನಾಪತ್ತೆಯಾಗಿರುವುದನ್ನು ಕಂಡು ದಂಗಾಗಿದ್ದರು.

     ”ಮೃತದೇಹ ಇರಿಸಲಾಗಿದ್ದ ಶೈತ್ಯಾಗಾರದಲ್ಲಿ ಒಂದು ಸಣ್ಣ ತೂತು ಇದ್ದುದರಿಂದ ಅದರೊಳಗೆ ಇಲಿ ಪ್ರವೇಶಿಸಿರಬಹುದು” ಎಂದರು. ”ಮುಂದೆ ಇಂತಹ ಘಟನೆಗಳು ನಡೆಯದಂತೆ ಅದನ್ನು ದುರಸ್ತಿಗೊಳಿಸಲು ಗುತ್ತಿಗೆದಾರರ ಬಳಿ ಹೇಳಲಾಗಿದೆ” ಇಂತಹ ಗ್ರಾಮೀಣ ಪ್ರದೇಶದಲ್ಲಿ ಇಷ್ಟೊಂದು ದೊಡ್ಡ ಆಸ್ಪತ್ರೆಯನ್ನು ಇದಕ್ಕಿಂತ ಹೆಚ್ಚು ನಿರ್ವಹಣೆ ಮಾಡಲು ಸಾಧ್ಯವಿಲ್ಲ’  ಎಂದೂ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ತಮಿಳರಸನ್ ಪ್ರತಿಕ್ರಿಯಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap