ತುರುವೇಕೆರೆ : ಚಿ.ಉದಯಶಂಕರ್ ಪುತ್ಥಳಿ ನಿರ್ಮಾಣಕ್ಕೆ ಚಾಲನೆ

 ತುರುವೇಕೆರೆ :

      ಸಾಹಿತಿ ದಿ.ಚಿ.ಉದಯಶಂಕರ್‍ರವರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಮಹಾನ್ ದಿಗ್ಗಜರು ಎಂದು ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ್ ಗೌಡ ತಿಳಿಸಿದರು.

     ತುರುವೇಕೆರೆ ವಿಧಾನಸಭಾ ಕ್ಷೇತ್ರದ ಸಿ.ಎಸ್.ಪುರ ಗ್ರಾಮದಲ್ಲಿ ಸಾಹಿತ್ಯ ರತ್ನ ಚಿ.ಉದಯ್ ಶಂಕರ್ ಅವರ 87ನೇ ಜನ್ಮದಿನದ ಅಂಗವಾಗಿ ಅವರ ಪುತ್ಥಳಿ ನಿರ್ಮಾಣದ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಸಾಹಿತಿ ಚಿ.ಉದಯ್‍ಶಂಕರ್ ಈ ಗ್ರಾಮದಲ್ಲಿ ಹುಟ್ಟಿ ದೇಶ ವಿದೇಶಗಳಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ತಾನು ನೀಡಿದ ಕೊಡುಗೆ ಅಜರಾಮರವಾದುದು. ಅವರಲ್ಲಿದ್ದ ಧಾರ್ಮಿಕ ಚಿಂತನೆ ನಮಗೆ ಇಂದಿಗೂ ಸ್ಪೂರ್ತಿದಾಯಕ. ಡಾ.ರಾಜ್ ಕುಮಾರ್ ಅವರ ಪ್ರಖ್ಯಾತಿಗೆ ಇವರೂ ಸಹಾ ಕಾರಣೀ ಭೂತರು ಎಂದರೂ ತಪ್ಪಾಗಲಾರದು.

     ಅವರ ಸಾಹಿತ್ಯದಿಂದಾಗಿ ಎಷ್ಟೋ ಸಿನಿಮಾಗಳು ಶತದಿನೋತ್ಸವ ಆಚರಿಸಿವೆ. ಅಂತಹ ಮಹಾನ್ ಸಾಹಿತ್ಯ ರತ್ನ ಚಿಟ್ಟಳ್ಳಿ ಚಿ.ಉದಯ್ ಶಂಕರ್ ಅವರ ಪ್ರತಿಮೆಯನ್ನು ಗ್ರಾಮದಲ್ಲಿ ಅನಾವರಣ ಮಾಡಲು ಗ್ರಾಮದ ಜನತೆ ದಿಟ್ಟನಿರ್ಧಾರ ಕೈಗೊಂಡಿರುವುದಕ್ಕೆ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. ಪ್ರತಿಮೆ ಅನಾವರಣಕ್ಕೆ ನನ್ನ ಸಹಕಾರವೂ ದೊರೆಯಲಿದ್ದು ಆದಷ್ಟು ಬೇಗ ಪ್ರತಿಮೆ ಅನಾವರಣಗೊಳಿಸುವ ಮೂಲಕ ಅವರ ನೆನಪು ಎಲ್ಲೆಡೆ ಚಿರಾಯುವಾಗುವಂತಾಗಲಿ ಎಂದು ಆಶಿಸಿದರು.

      ಈ ಸಂಧರ್ಬದಲ್ಲಿ ಶಿವಮೊಗ್ಗ ಮೇಯರ್ ಶ್ರೀಮತಿ ಸುವರ್ಣಶಂಕರ್, ರಾಜ್ಯ ಉಪಾಧ್ಯಕ್ಷ ಪುಟ್ಟೇಗೌಡ, ಗ್ರಾ.ಪಂ.ಅಧÀ್ಯಕ್ಷ ಕೆಂಪರಾಜು, ತುರುವೇಕೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಂಜನ್ ಕುಮಾರ್, ಮುಖಂಡರುಗಳಾದ ದೊಡ್ಡಾಘಟ್ಟ ಚಂದ್ರೇಶ್, ಗುಡ್ಡೇನಹಳ್ಳಿ ಮಂಜುನಾಥ್, ಧರ್ಮೆಗೌಡ, ನಂಜೇಗೌಡ್ರು, ಭಾನುಪ್ರಕಾಶ್, ನರಸೇಗೌಡ, ಈಶ್ವರ್ ಗೌಡ, ಹರೀಶ್, ಕೃಷ್ಣೇಗೌಡ, ಪ್ರಕಾಶ್, ಚನ್ನಿಗಪ್ಪ, ಶಿವಾನಂದ್, ಗಿರೀಶ್, ಉಪೇಂದ್ರ ಸೇರಿದಂತೆ ಕ.ರ.ವೇ. ಕಾರ್ಯಕರ್ತರು ಹಾಗೂ ಇತರರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ    

Recent Articles

spot_img

Related Stories

Share via
Copy link
Powered by Social Snap