ಬಾಡಿಗೆ ಮನೆಯಲ್ಲಿ ಇದ್ದ ದಂಪತಿ ಶವವಾಗಿ ಪತ್ತೆ

ಚಿಕ್ಕಬಳ್ಳಾಪುರ: 

    ಜಿಲ್ಲೆಯ ಗುಡಿಬಂಡೆ ತಾಲೂಕಿನ ಜಂಗಾಲಹಳ್ಳಿ ಮೂಲದ ಅಶ್ವತ್ತಪ್ಪ (65) ಹಾಗೂ ಅವರ ಪತ್ನಿ ಹನುಮಕ್ಕ (55) ಅವರು, ಪೂಲಂಪಲ್ಲಿ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ದಂಪತಿಗಳಿಬ್ಬರು ಕಳೆದ ಒಂದು ವರ್ಷದಿಂದ ಪೂಲಂಪಲ್ಲಿ ಗ್ರಾಮ ದಲ್ಲಿ ಬಾಡಿಗೆ ಮನೆ ಮಾಡಿ ಕೊಂಡು ಜೀವನ ಮಾಡುತ್ತಿದ್ದರು.

    ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಸಹ ಇದರು ಏನ್ ಆಯಿತೋ ಏನು ಕಳೆದ 2 ದಿನಗಳಿಂದ ಮನೆಯ ಬಾಗಿಲು ತೆಗೆಯದಿರುವುದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು, ಅನುಮಾನ ಗೊಂಡು ಕಿಟಕಿ ಬಾಗಿಲು ತೆರೆದು ನೋಡಿ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಪರಿಣಾಮವಾಗಿ, ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದೆ. ದಂಪತಿ ಮನೆಯ ಬಾಗಿಲು ಹಾಕಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    ಸ್ಥಳಕ್ಕೆ ಗುಡಿಬಂಡೆ ಠಾಣೆಯ ಪೊಲೀಸ್  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವಿಗೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಹೊರಬರಬೇಕಿದೆ.ಇದು ಆರ್ಥಿಕ ಸಂಕಷ್ಟವೋ ಅಥವಾ ಕೌಟುಂಬಿಕ/ವೈಯಕ್ತಿಕ ಕಾರಣಗಳೋ ಎಂಬಯದರ ಕುರಿತು ಪೊಲೀಸ್ ಇಲಾಖೆ ತನಿಖೆಯನ್ನು ಮುಂದುವರೆಸಿದೆ.

Recent Articles

spot_img

Related Stories

Share via
Copy link