ಚಿಕ್ಕಬಳ್ಳಾಪುರ
ಕಳೆದ ಒಂದು ತಿಂಗಳಿನಿಂದಲ್ಲೂ ಕ್ಷೇತ್ರ ದಾದ್ಯಂತ ನಿತ್ಯ ಪ್ರತ್ಯಕ್ಷಗೊಳ್ಳುತ್ತಿದ್ದ ರಾಜಕೀಯ ಮುಖಂಡರು, ಕಾರ್ಯಕರ್ತರು ಇದೀಗ ಫುಲ್ ರೆಸ್ಟ್ ಮೂಡ್‌ನಲ್ಲಿದ್ದಾರೆ.
ಮಾಜಿ ಅರೋಗ್ಯ ಸಚಿವ ಡಾ. ಕೆ. ಸುಧಾಕರ್ ಹಾಗೂ ಕೆಪಿಸಿಸಿ ಯುವ ಘಟಕದ ರಾಜ್ಯಾಧ್ಯಕ್ಷರಾದ ರಕ್ಷಾ ರಾಮಯ್ಯ ನವರ ಸ್ಪರ್ಧೆಯಿಂದ ಇಡೀ ರಾಜ್ಯದ ಗಮನ ಕೇಂದ್ರೀಕರಿಸಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮುಗಿದ ನಂತರ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ವಿಶ್ರಾಂತಿಗೆ ಮೊರೆ ಹೋಗಿದ್ದು ಕ್ಷೇತ್ರದ ಎಲ್ಲೆಡೆ ಅಕ್ಷರಶ ಸ್ಥಬ್ದ ಗೊಂಡ ಅನುಭವವಾಗುತ್ತಿದೆ.
ಹೌದು, ಪರಸ್ಪರ ವಾಗ್ದಾಳಿಗಳಿಂದಲೇ ಸಾಕಷ್ಟು ಕೂತುಹಲ ಮೂಡಿಸಿದ್ದ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಅಖಾಡವು ಖುದ್ದು ಮಾಜಿ ಸಚಿವ ಡಾ. ಕೆ. ಸುಧಾಕರ್ ಹಾಗೂ ಶಾಸಕ ಪ್ರದೀಪ್ ಈಶ್ವರ್ ಅವರ ಪ್ರತಿಷ್ಠೆಯ ಕಣವಾಗಿಯೂ ಮಾರ್ಪಟ್ಟಿತ್ತು. ಈಗ ಏಕಾಏಕೀ ಕ್ಷೇತ್ರವೆಲ್ಲ ಸ್ತಬ್ದಗೊಂಡಿದ್ದು, ವೋಟಿಂಗ್ ಲೆಕ್ಕಾಚಾರ ಗಳ ಪ್ರಕ್ರಿಯೆಯಲ್ಲಿ ಮುಖಂಡರು ಕಾಲ ಕಳೆಯುತ್ತಿದ್ದಾರೆ.
ಸಾಕಷ್ಟು ಉತ್ಸಾಹದಲ್ಲಿ ದುಡಿದಿದ್ದ ಅಭ್ಯರ್ಥಿಗಳನ್ನು ಕಾಯಕರ್ತರು ಇದೀಗ ಹುಡುಕುವಂತಾ ಗಿದೆ. ನಿನ್ನೆವರೆಗೂ ಕೈಗೆ ಸಿಗುತ್ತಿದ್ದ ಅಭ್ಯ ರ್ಥಿಗಳು ಚುನಾವಣೆ ಬಳಿಕ ರಿಲ್ಯಾಕ್ಸ್ ಮೂಡ್ ಗೆ ಹೋಗಿದ್ದು, ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬ ಹುಡು ಕಾಟದಲ್ಲಿ ಕ್ಷೇತ್ರದ ಕಾರ್ಯಕರ್ತರು ಇದ್ದಾರೆ. ನಿತ್ಯ ಮತದಾರರ ಮುಂದೆ ಮೈಕ್ ಹಿಡಿದು, ಕೈ ಮುಗಿದು ನಿಲ್ಲುತ್ತಿದ್ದ ನಾಯಕರು, ಮತ್ತೊಮ್ಮೆ ನಮ್ಮೂರಿಗೆ ನಾಯಕರು ಬರುವುದಕ್ಕೆ ಇನ್ನೆಷ್ಟು ವರ್ಷಗಳು ಬೇಕಾಗಬಹುದು ಎಂಬ ವ್ಯಂಗ್ಯವು ಸಹ ನಡೆಯುತ್ತಿದೆ.
ಕಾಲಿಗೆ ಚಕ್ರಕಟ್ಟಿಕೊಂಡವರಂತೆ 8 ಕ್ಷೇತ್ರಗಳನ್ನುಸುತ್ತಾಡಿದ್ದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಈಗ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದು ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಕುಟುಂಬದ ಸದಸ್ಯರೊಟ್ಟಿಗೆ ಸಮಯ ಕಳೆಯುತ್ತ ಪತ್ರಿಕೆ, ಪುಸ್ತಕಗಳನ್ನು ಓದಿಕೊಂಡು ಸಮಯ ಕಳೆಯುತ್ತಿದ್ದಾರೆ. ಇವರ ಜೊತೆ ಹೆಗಲು ಕೊಟ್ಟು ಓಡಾಡಿದ 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಯಕರು ಸಹ ಮನೆಯಲ್ಲಿಯೇ ವಿರಮಿಸುತ್ತ ಸೋಲು ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಎಂ. ಎಸ್. ರಕ್ಷರಾಮಯ್ಯ, ಶಾಸಕ ಪ್ರದೀಪ್ ಈಶ್ವರ್, ಸಚಿವ ಎಂ. ಸಿ. ಸುಧಾಕರ್ ಸಹ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ . ಹಿರಿಯ ಘಟಾನುಘಟಿ ನಾಯಕರು ರಾಜ್ಯದಲ್ಲಿನ 2ನೇ ಹಂತದ ಚುನಾವಣೆಗೆ ಪ್ರಚಾರ ನಡೆಸಲು ಸೋಮವಾರದಿಂದ ತೆರಳುವ ಸಾಧ್ಯತೆಗಳಿವೆ. ಹೀಗಾಗಿ ಕಳೆದ 2 ದಿನಗಳಿಂದ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.
ಪ್ರಚಾರದ ಸಮಯದಲ್ಲಿ ಬಿರು ಬಿಸಿಲನ್ನು ಲೆಕ್ಕಿಸದೇ ಪ್ರಚಾರ ಕಣದಲ್ಲಿದ್ದ ಕಾಠ್ಯಕರ್ತರು ಇದೀಗ ಮನೆಯಿಂದ ಹೊರಬರುವುದಿರಲಿ. ಯಾವೊಂದು ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿಲ್ಲ, ನಿತ್ಯ ಪ್ರಚಾರ ಕಣದಲ್ಲಿ ದುಡಿಯುತ್ತಿದ್ದವರು ಇದೀಗ ವಿಶ್ರಾಂತಿ ಕೇಳುತ್ತಿದ್ದಾರೆ. ಗ್ರಾಮಗಳಲ್ಲಿ ಅರಳೀಕಟ್ಟೆ ರಾಜಕೀಯ ಮಾಡುತ್ತಿದ್ದವರು ಇದೀಗ ಸಾಕಪ್ಪ ಸಾಕು ಈ ರಾಜಕೀಯ ಎನ್ನುತ್ತಿದ್ದಾರೆ.
ಮೈತ್ರಿ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾಯಕರ್ತರು ಒಟ್ಟಿಗೆ ಈ ಚುನಾವಣೆ ಯಲ್ಲಿ ಶ್ರಮಿಸಿದ್ದರು. ಕಾಂಗ್ರೆಸ್ ಮಾತ್ರವೇ ನೇರ ಹಣಾಹಣಿ ನಡೆಸಿತ್ತು. ಹೀಗಾಗಿ ಎಲ್ಲ ಕಾರ್ಯಕರ್ತರು, ಮುಖಂಡರು ಶನಿವಾರ ಬೆಳಗ್ಗೆ 11 ಗಂಟೆವರೆಗೂ ನಿದ್ರೆಗೆ ಜಾರಿದ್ದರು. ಭಾನುವಾರವು ಸಹ ಮುಖಂಡರು ಹೊರ ಬಂದಿಲ್ಲ, ಒಟ್ಟಿನಲ್ಲಿ ಶಾಂತಿಯುತವಾಗಿ ಮತದಾನ ಸಂಪೂರ್ಣಗೊಂಡ ಬಳಿಕ ಇಡೀ ಜಿಲ್ಲೆಯೇ ಸ್ತಬ್ದಗೊಂಡಿರುವುದು ವಿಶೇಷ.
ಕಳೆದ 1 ತಿಂಗಳಿನಿಂದ ಸದಾ ಕೇಳುತ್ತಿದ್ದ ಚುನಾವಣೆ ಪದ ಇದೀಗ ಏಕಾಏಕೀ ಇಳಿಕೆಯಾಗಿದೆ. ಈಗೇನಿದ್ದರೂ, ಯಾರು-ಎಷ್ಟು ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ, ಯಾರು ಯಾರಿಗೆ ಒಳ ಏಟು ಕೊಟ್ಟಿದ್ದಾರೆ, ಯಾವ ಸಮುದಾಯ ಯಾರ ಕೈ ಹಿಡಿದಿದೆ, ಯಾರು ಕೈ ಕೊಟ್ಟಿದ್ದಾರೆ ಎಂಬುದೊಂದೇ ಚರ್ಚೆ ವಿಷಯವಾಗಿದ್ದು, ಮನೆ ಬಿಟ್ಟು ಹೊರ ಬಾರದ ಅಭ್ಯರ್ಥಿಗಳು -ಮುಖಂಡರುಗಳು ಮತದಾನದ ಶೇಕಡವಾರು ಲೆಕ್ಕಹಾಕಿಕೊಂಡು, ಯಾವ ಕ್ಷೇತ್ರಗಳಲ್ಲಿ ಎಷ್ಟು ಮತಗಳನ್ನು ಪಡೆದಯಲಾಗಿದೆ ಎಂಬ ಮತಗಳ
ತಿಂಗಳಿನಿಂದ ರಜೆ ಇಲ್ಲದೇ ದುಡಿದಿದ್ದ ಪೊಲೀಸರು, ಚುನಾವಣಾಧಿಕಾರಿಗಳು ಸಹ 4ನೇ ಶನಿವಾರವಾಗಿರುವ ಕಾರಣಕ್ಕೆ ಫೋನ್ ಗಳನ್ನು ಸ್ವಿಚ್ ಆಫ್ ಮಾಡಿ ರೆಸ್ಟ್ ಮೂಡ್ ನಲ್ಲಿದ್ದರು. ಭಾನುವಾರ ಕೆಲವರು ಕಾಣಿಸುತ್ತಿದ್ದರು. ಇನ್ನು ಕೆಲವರು ಮುಂದಿನ ವಾರದಲ್ಲಿ ರಜೆ ಹಾಕಿ ಪ್ರವಾಸ ಹೊರಡುವ ಬಗ್ಗೆ ಪ್ಲಾನ್ ನಡೆಸಿದ್ದಾರೆ. 2ನೇ ಹಂತದ ಚುನಾವಣೆ ನಡೆಯುವಷ್ಟರಲ್ಲಿ ಪ್ರವಾಸ ಮುಗಿಸುವ ಉತ್ಸಾಹದಲ್ಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ