ಲೋಕ ಸಮರ : ಹೈವೋಲ್ಟೇಜ್‌ ಕ್ಷೇತ್ರವಾದ ಚಿಕ್ಕಬಳ್ಳಾಪುರ ….!

ಚಿಕ್ಕಬಳ್ಳಾಪುರ: 

    2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಮತ್ತು ಒಕ್ಕಲಿಗರ ಬೆಂಬಲದೊಂದಿಗೆ ಬಿಜೆಪಿ ಪ್ರಥಮ ಬಾರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದೀಗ ಬಿಜೆಪಿಯ ಡಾ.ಕೆ.ಸುಧಾಕರ್‌ಗೆ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ ತೀವ್ರ ಪೈಪೋಟಿ ನೀಡುತ್ತಿದ್ದಾರೆ.

    ರಕ್ಷಾ ರಾಮಯ್ಯ ಚುನಾವಣಾ ರಾಜಕೀಯಕ್ಕೆ ಹೊಸದಾಗಿ ಪ್ರವೇಶಿಸಿದ್ದರೂ, ಶ್ರೀಮಂತ ಮತ್ತು ಪ್ರಭಾವಿ ರಾಜಕೀಯ ಕುಟುಂಬ. ಎಂ. ಎಸ್ ರಾಮಯ್ಯ ಮನೆತನದಿಂದ ಬಂದವರು. ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಕ್ಕಬಳ್ಳಾಪುರ, ದೇವನಹಳ್ಳಿ ಮತ್ತು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಇದು ಸಾಕಷ್ಟು ಪ್ರಭಾವವನ್ನು ಹೊಂದಿದೆ. ಒಟ್ಟಿನಲ್ಲಿ ಜನರ ಅಭಿಮಾನಕ್ಕೆ ಪಾತ್ರವಾಗಿದೆ.

    ಕಳೆದ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರದೀಪ್ ಈಶ್ವರ್ ಅವರ ಕೈಯಲ್ಲಿ ಸೋತ ನಂತರ, ಒಕ್ಕಲಿಗರಾದ ಸುಧಾಕರ್ ಅವರು ತಮ್ಮ ಸಮುದಾಯವನ್ನು ಅವರ ಹಿಂದೆ ಕ್ರೋಢೀಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೆಡಿಎಸ್ ಮತಗಳು ಬಂದರೆ ತಾವು ಸುಲಭವಾಗಿ ಗೆಲ್ಲಬಹುದು ಅಂದುಕೊಂಡಿದ್ದಾರೆ. ರಕ್ಷಾ ಸೇರಿರುವ ಬಲಿಜ ಸಮುದಾಯದ ಸದಸ್ಯರು ಬಿಜೆಪಿಯ ಕಟ್ಟಾ ಬೆಂಬಲಿಗರು ಎಂದು ಪರಿಗಣಿಸಲಾಗಿದೆ. ಆದರೆ ಈ ಬಾರಿ ಅವರು ತಮ್ಮ ಬೆಂಬಲವನ್ನು ರಕ್ಷಾ ರಾಮಯ್ಯ ಅವರಿಗೆ ನೀಡುವ ಸಾಧ್ಯತೆಯಿದೆ.

    ಕ್ಷೇತ್ರವು ಮುಸ್ಲಿಮರು, SC/ST ಗಳು ಮತ್ತು ಇತರ ಸೂಕ್ಷ್ಮ ಸಮುದಾಯಗಳ ಗಣನೀಯ ಜನಸಂಖ್ಯೆಯನ್ನು ಹೊಂದಿದೆ. ಗ್ರಾಮೀಣ ಮತದಾರರು ಕಾಂಗ್ರೆಸ್‌ನತ್ತ ಒಲವು ತೋರುತ್ತಿದ್ದರೆ, ಯಲಹಂಕ ಮತ್ತು ದೊಡ್ಡಬಳ್ಳಾಪುರದಂತಹ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮೋದಿ ಬಿಜೆಪಿಗೆ ಪ್ರಮುಖ ಮತ ಸೆಳೆಯುವವರಾಗಿದ್ದಾರೆ. ಹಲವರು ಸುಧಾಕರ್ ಹೆಸರು ಹೇಳದಿದ್ದರೂ ಮೋದಿಗೆ ಮತ ಹಾಕುವುದಾಗಿ ಹೇಳುತ್ತಿದ್ದಾರೆ. ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಕ್ಕಬಳ್ಳಾಪುರದಲ್ಲಿ ಸರಣಿ ರೋಡ್ ಶೋ ನಡೆಸಿ ಸುಧಾಕರ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದರು. ಕುರುಬ ಸಮುದಾಯದ ಸದಸ್ಯರು ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಲಿ ಎಂಬ ಆಶಯದೊಂದಿಗೆ ಕಾಂಗ್ರೆಸ್ ಗೆ ಮತ ನೀಡುವುದು ಗ್ಯಾರಂಟಿ.

    ಮತ್ತೊಂದೆಡೆ ಸುಧಾಕರ್ ಅವರು ಬೆಂಗಳೂರಿನ ಮಾಜಿ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಮತ್ತು ತುಮಕೂರು ಮಾಜಿ ಜಿಲ್ಲಾಧಿಕಾರಿ ಡಾ.ಸೋಮಶೇಖರ್ ಅವರ ಸಹಾಯದಿಂದ ಲಿಂಗಾಯತ ಸಮುದಾಯವನ್ನು ಒಲಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ಗೆ ಸವಾಲುಗಳು ದೊಡ್ಡದಾಗಿದೆ. ಆದರೆ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಜಿಲ್ಲೆಯ ರಾಜಕೀಯದೊಂದಿಗೆ ರಾಮಯ್ಯ ಕುಟುಂಬದ ಒಡನಾಟವು ಅದನ್ನು ಮೀರಿಸಲು ಸಹಾಯ ಮಾಡಬಹುದು.

   “ಇಷ್ಟು ವರ್ಷ ನಮ್ಮ ಸಮುದಾಯದವರು ರಾಮಯ್ಯನವರ ಮನೆಗೆ ಸಹಾಯ ಕೋರಿ ಹೋಗುತ್ತಿದ್ದರು. ಇದೇ ಮೊದಲ ಬಾರಿಗೆ ಮತ ಕೇಳಲು ನಮ್ಮ ಮನೆಗೆ ಬಂದಿದ್ದಾರೆ. ನಾವು ಅವರನ್ನು ಬರಿಗೈಯಲ್ಲಿ ಕಳುಹಿಸುವುದು ಹೇಗೆ? ಇದನ್ನು ನಮ್ಮ ಸಮುದಾಯದವರು ನಮಗೆ ಹೇಳುತ್ತಿದ್ದಾರೆ. ಹಾಗಾಗಿ ಬಲಿಜ ಮತಗಳನ್ನು ಬಿಜೆಪಿ ಪರವಾಗಿ ಕ್ರೋಢೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap