‘ಸರ್ಕಾರ ಹೊಸ ಗಣಿ ನೀತಿಯನ್ನು ಜಾರಿಗೆ ತರಲಿದೆ’ – ಸಚಿವ ಮುರುಗೇಶ ನಿರಾಣಿ

ಚಿಕ್ಕಬಳ್ಳಾಪುರ:

      ರಾಜ್ಯದಲ್ಲಿ ಅಕ್ರಮ‌ ಗಣಿಗಾರಿಕೆಯನ್ನು ತಡೆಯುವ ಮತ್ತು ಗಣಿಗಾರಿಕೆಯಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ತರುವ‌ ನಿಟ್ಟಿನಲ್ಲಿ ಹಾಗೂ ಕಟ್ಟಕಡೆಯ ವ್ಯಕ್ತಿಗೂ ಸುಲಭವಾಗಿ ಮರಳು ಮತ್ತು ಜಲ್ಲಿ ಸಿಗುವಂತೆ ಮಾಡಲು ಸರ್ಕಾರ ಹೊಸ ಗಣಿ ನೀತಿಯನ್ನು ಜಾರಿಗೆ ತರಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

     ಅವರು ಮಂಗಳವಾರ ತಡ ರಾತ್ರಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿ ನಂತರ ವಿಮಾನನಿಲ್ದಾಣದಿಂದ ನೇರವಾಗಿ ಜಿಲೆಟಿನ್ ಸ್ಪೋಟ ನಡೆದ ಚಿಕ್ಕಬಳ್ಳಾಪುರ ತಾಲೂಕಿನ‌ ಹಿರೇನಾಗವಲ್ಲಿ ಗ್ರಾಮದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾಧ್ಯಮಗಳೊಂದಿಗೆ ಮಾತನಾಡಿದರು.

      ಈವರೆಗೆ ರಾಜ್ಯದಲ್ಲಿ ಗಣಿಗೆ ಹೊಸದೊಂದು ನೀತಿ ಇರಲಿಲ್ಲ. ಅಕ್ರಮ‌ ಗಣಿಗಾರಿಕೆಯಿಂದ ಆಗುವ ಅನಾಹುತಗಳನ್ನು ತಪ್ಪಿಸಲು ಮತ್ತು ಸರ್ಕಾರಕ್ಕೆ ಆಗುತ್ತಿರುವ ನಷ್ಟವನ್ನು ತಡೆಯಲು ರಾಜ್ಯ ಸರ್ಕಾರ ಹೊಸ ಗಣಿ ನೀತಿಯನ್ನು ತರಲು ಮುಂದಾಗಿದೆ. ರಾಜ್ಯದ ಬೊಕ್ಕಸಕ್ಕೆ ಗಣಿಗಾರಿಕೆಯಿಂದ ಹೆಚ್ಚಿನ ಆದಾಯವನ್ನು ನಿರೀಕ್ಣಿಸಲು ಸಹಕಾರಿಯಾಗಲಿದೆ. ಜೊತೆಗೆ ಜನಸಾಮಾನ್ಯರಿಗೆ ಸುಲಭವಾಗಿ ಮರಳು ಮತ್ತು ಜಲ್ಲಿ ದೊರೆಯಲು ಅನುಕೂಲವಾಗಲಿದೆ. ಅಕ್ರಮ ಗಣಿಗಾರಿಕೆ ತಡೆಗೂ ಹಾಗೂ ಅದರಿಂದಾಗುವ ಅನಾಹುತಗಳನ್ನು ತಪ್ಪಿಸಲು ಹೊಸ ಗಣಿ ನೀತಿ ಪೂರಕವಾಗಲಿದೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap