ಚಿಕ್ಕಬಳ್ಳಾಪುರ : ಸಂಬಳ ಸಿಗದೇ ನೊಂದ ಶಿಕ್ಷಕ ಆತ್ಮಹತ್ಯೆಗೆ ಶರಣು!!

ಚಿಕ್ಕಬಳ್ಳಾಪುರ : 

    ಕೊರೊನಾದಿಂದಾಗಿ ವೇತನವಿಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿ ಡೆತ್​ನೋಟ್​ ಬರೆದು ಶಿಕ್ಷಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

      ಗೌರಿಬಿದನೂರು ತಾಲ್ಲೂಕಿನ ಕನಗಾನಕೊಪ್ಪ ಗ್ರಾಮದ ಚಂದ್ರಶೇಖರ್(39) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ. ಚಂದ್ರಶೇಖರ್​ ಮಂಚೇನಹಳ್ಳಿಯ ಅನುದಾನಿತ ಆಚಾರ್ಯ ಪ್ರೌಢಶಾಲೆಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಜೊತೆಗೆ ಟ್ಯುಟೋರಿಯಲ್ ನಡೆಸುತ್ತ ಜೀವನಕ್ಕೆ ಆಸರೆಯಾಗಿ ಮಾಡಿಕೊಂಡು ನೆಮ್ಮದಿ ಬದುಕು ಸಾಗಿಸುತ್ತಿದ್ದರು.

      ಈ ನಡುವೆ ಕೊರೊನಾ ಹೊಡೆತ ನೀಡಿದೆ. ಕೆಲಸ ನಿರ್ವಹಿಸುತ್ತಿದ್ದ ಶಿಕ್ಷಣ ಸಂಸ್ಥೆ ಬಾಗಿಲು ಮುಚ್ಚಿದ್ದು, ಮತ್ತೊಂದೆಡೆ ಟ್ಯುಟೋರಿಯಲ್ ಸಹ ನಡೆಯುತ್ತಿರಲಿಲ್ಲ. ಇದರಿಂದ ಭಾರೀ ಹೊಡೆತ ಬಿದ್ದು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರು.

      ಹಲವು ವರ್ಷಗಳಿಂದ ಕಾರ್ಯನಿರ್ವಹಿಸಿದರೂ ಶಾಲಾ ಆಡಳಿತ ಮಂಡಳಿ ಅನುದಾನಿತ ಶಿಕ್ಷಕನಾಗಿ ಅನುಮೋದನೆ ಮಾಡದ ಹಿನ್ನೆಲೆಯಲ್ಲಿ ಬೇಸತ್ತು ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಂದ್ರಶೇಖರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

     ಆತ್ಮಹತ್ಯೆಗೂ ಮುನ್ನ ತನ್ನ ಆತ್ಮಹತ್ಯೆಗೆ ಆಚಾರ್ಯ ಪ್ರೌಢಶಾಲೆ ಆಡಳಿತ ಮಂಡಳಿ ಕಾರಣ ಎಂದು ಕಪ್ಪು ಹಲಗೆಯ ಮೇಲೆ ಡೆತ್​ನೋಟ್​ ಬರೆದಿದ್ದಾರೆ.  ಅಲ್ಲದೆ, ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಅವರು ಬರೆದಿರುವ ಬರಹ ಎಂತಹವರ ಮನ ಕಲಕುವಂತಿದೆ.

      ಘಟನಾ ಸ್ಥಳಕ್ಕೆ ಮಂಚೇನಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap