ಶೇ.70ರಷ್ಟು ನೇಕಾರರು ಸರ್ಕಾರಿ ಸೌಲಭ್ಯಗಳಿಂದ ವಂಚಿತ!!

ಚಿಕ್ಕನಾಯಕನಹಳ್ಳಿ :

      ಲಾಕ್‍ಡೌನ್‍ನಿಂದ ದುಡಿಮೆ ಇಲ್ಲದ ನೇಕಾರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ ಸರ್ಕಾರಿ ಸೌಲಭ್ಯಗಳು ಶೇ.30 ಜನರಿಗೂ ತಲುಪುವುದು ಕಷ್ಟಸಾಧ್ಯ. ಇನ್ನು ಎಲ್ಲಾ ನೇಕಾರರಿಗೆ ದೊರೆಯುತ್ತದೆ ಎಂಬುದು ದೂರದ ಮಾತು.

      ಕೇಂದ್ರ ಸರ್ಕಾರ ನೀಡುವ ಪಿಂಚಣಿ ಶ್ರಮಯೋಗಿ ಮಾನ್ ದಾನ ಯೋಜನೆ ಹಾಗೂ ರಾಜ್ಯ ಸರ್ಕಾರ ನೀಡುವ ನೇಕಾರ್ ಸನ್ಮಾನ್ ಸೌಲಭ್ಯಗಳನ್ನು ನೀಡಲು ಜವಳಿ ಇಲಾಖೆ ನೇಕಾರರ ಸರ್ವೆ ಮಾಡಿಸಿದೆ. ಈ ಸರ್ವೆ ದೋಷ ಪೂರಿತವಾಗಿದೆ ಎಂದು ನೇಕಾರರು ಆರೋಪಿಸಿದ್ದಾರೆ.

      2018ರಲ್ಲಿ ಕೇಂದ್ರ ಸರ್ಕಾರ ನೇಕಾರರಿಗೆ ಸಂಬಂಧ ಪಟ್ಟಂತೆ ಆರ್ವಿ ಡಾಟಾ ಮ್ಯಾನೇಜ್ ಮೆಂಟ್ ಸರ್ವಿಸ್ ವತಿಯಿಂದ ಸರ್ವೆ ನಡೆಸಿತ್ತು, ನೇಕಾರರ ಹೆಸರು, ಭಾವಚಿತ್ರಗಳನ್ನು ತೆಗೆದುಕೊಂಡು ಹೋಗಿದ್ದರು, ಗುರುತಿನ ಚೀಟಿಯನ್ನು ನೀಡಿದ್ದರು, ಸರ್ವೆ ನಡೆಸಿ ಎರಡು ವರ್ಷಗಳಾಗಿದೆ. ಈ ಸರ್ವೆಯನ್ನೇ ಆಧರಿಸಿ ಈಗ ಪಿಂಚಣಿ ನೀಡುವುದಾಗಿ ಜವಳಿ ಮತ್ತು ಕೈಮಗ್ಗ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಪಟ್ಟಿಯಲ್ಲಿ ಸೇರಿರುವ ನೇಕಾರರಿಗಿಂತ ಪಟ್ಟಿಯಿಂದ ಕೈ ಬಿಟ್ಟವರೆ ಹೆಚ್ಚು ಇರುವುದರಿಂದ ಈ ಪಟ್ಟಿ ಪ್ರಸ್ತುತವೆನಿಸದು ಎಂಬುದು ಹಲವು ನೇಕಾರರ ಆರೋಪ.

      ರಾಜ್ಯ ಸರ್ಕಾರ ನೇಕಾರ್ ಸನ್ಮಾನ್ ಯೋಜನೆಯಲ್ಲಿ ವರ್ಷಕ್ಕೆ ಎರಡು ಸಾವಿರ ಹಣ ಬಿಡುಗಡೆ ಮಾಡಿದೆ, ನೇಕಾರಿಕೆಯಲ್ಲಿ ಕಂಬಳಿ ನೇಕಾರಿಕೆ, ರೇಷ್ಮೆ ಕೈಮಗ್ಗ ನೇಕಾರಿಕೆ, ವಿದ್ಯುತ್ ಚಾಲಿತ ನೇಕಾರಿಕೆ, ಕಾಟನ್ ಬಟ್ಟೆ ನೇಕಾರರು ಒಳಗೊಂಡಿದ್ದಾರೆ. ಇವರೆಲ್ಲರಿಗೂ ಸರ್ಕಾರ ಪರಿಹಾರದ ಹಣ ಬಿಡುಗಡೆ ಮಾಡಿದೆ. ಆದರೆ ಇವರೆಲ್ಲರೂ ಸಹ ಕೇಂದ್ರ ಸರ್ಕಾರ ಸರ್ವೆ ಮಾಡಿಸಿದ ಪಟ್ಟಿಯಲ್ಲಿ ಇಲ್ಲ. ಕೇವಲ ಕೆಲವೇ ಮಂದಿ ಮಾತ್ರ ಸರ್ವೆಗೆ ಒಳಪಟ್ಟಿದ್ದಾರೆ. ಸರ್ವೆಯಲ್ಲಿ ಒಳಗೊಂಡ ನೇಕಾರರಿಗೂ ನಾವು ನೇಕಾರರು ಎಂದು ಗುರುತಿಸಿಕೊಳ್ಳಲು ಯಾವುದೇ ದಾಖಲೆಯೂ ಇಲ್ಲ. ಸರ್ವೆಗೆ ಒಳ ಪಟ್ಟಿದ್ದೇ ಎಂದು ತೋರಿಸಲು ಯಾವ ಆಧಾರವೂ ಇಲ್ಲದಂತಾಗಿದೆ. ಇದರಿಂದ ಸರ್ವೆಯಲ್ಲಿನ ನೇಕಾರರಿಗೆ ಸರ್ಕಾರ ನೀಡುವ ಹಣ ದೊರಕುವುದೇ ಎಂಬ ಅನುಮಾನವಿದೆ.

ಶೇ. 30 ರಷ್ಟು ಮಾತ್ರ ನೇಕಾರರ ಗುರುತಿಸುವಿಕೆ :

      ಜಿಲ್ಲೆಯಾದ್ಯಂತ ನೇಕಾರರು ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿ ಸೇರಿದಂತೆ ಹಲವು ತಾಲ್ಲೂಕುಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಲ್ಲಿರುವ ನೇಕಾರರು, ತಾವು 20 ವರ್ಷಗಳಿಂದ ನೇಕಾರಿಕೆಯಲ್ಲಿ ತೊಡಗಿಕೊಂಡಿದ್ದೇವೆ. ಆದರೆ ತÀಮಗೆ ಸರ್ವೆ ಮಾಡಿರುವುದರ ಬಗ್ಗೆ ತಿಳಿದೇ ಇಲ್ಲ, ಅನ್ಯ ಕಾರ್ಯ ನಿಮಿತ್ತ ಹೊರಗಡೆ ಹೋದಾಗ ನೇಕಾರರ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದಾರೆ. ಆದರೆ ತಮಗೆ ಈ ಬಗ್ಗೆ ತಿಳಿದೇ ಇಲ್ಲ, ತಮ್ಮಗಳ ಸರ್ವೆಯೂ ಆಗಿಲ್ಲ ಎನ್ನುತ್ತಾರೆ ಗಿರೀಶ್.

ಎಲ್ಲಾ ನೇಕಾರರನ್ನು ಗುರುತಿಸಿ:

      2018ರ ನಂತರ ಇಲ್ಲಿಯವರೆಗೆ ಸಾವಿರಾರು ನೇಕಾರರು ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಹಾಗೂ ಇತ್ತೀಚೆಗೆ ನೇಕಾರಿಕೆಗೆ ಸರ್ಕಾರ ಉತ್ತೇಜನ ನೀಡಲು ಮುಂದಾದ್ದರಿಂದ ಕೆಲವರು ಸಾಲ ಮಾಡಿ ಕೈ ಮಗ್ಗ, ವಿದ್ಯುತ್ ಚಾಲಿತ ಮಗ್ಗಗಳನ್ನು ಕೊಂಡು ತಂದು ನೇಕಾರಿಕೆಯತ್ತ ಒಲವು ತೋರಿಸಿದ್ದಾರೆ. ಆದರೆ ಇವರ ಗುರುತಿಸುವಿಕೆಯೂ ಆಗಿಲ್ಲ.

      ಸರ್ವೆ ದಾಖಲೆಗಳ ಪ್ರಕಾರ ತಾಲ್ಲೂಕಿನಲ್ಲಿ ಈಗಿರುವುದು 599 ನೇಕಾರರು ಮಾತ್ರ. 2018ರಲ್ಲಿ ತಾಲ್ಲೂಕಿಗೆ ನೇಕಾರರ ಸರ್ವೆಗೆ ಬಂದಿದ್ದ ಅಧಿಕಾರಿಗಳು ಆಗಿನ ಸಮಯದಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ಆ ಕ್ಷಣಕ್ಕೆ ಸಿಕ್ಕವರ ಫೋಟೋ ತೆಗೆದುಕೊಂಡು ಹೋಗಿದ್ದರು. ಸರ್ವೆಯಲ್ಲಿ ಗುರುತಿಸಿದವರಿಗೆ ಸರ್ಕಾರದ ಹಣ ಬರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ತದ ನಂತರ ನೇಕಾರಿಕೆ ವೃತ್ತಿಯಲ್ಲಿ ತೊಡಗಿಕೊಂಡವರ ಬಗ್ಗೆ ಸರ್ಕಾರದ ಆದೇಶ ಬರಬೇಕು ಎನ್ನುತ್ತಿದ್ದಾರೆ.

-ಕೆ.ಆರ್. ಸಿದ್ದಯ್ಯ. ಕಾರ್ಯದರ್ಶಿ, ಶ್ರೀ ಬನಶಂಕರಿ ರೇಷ್ಮೆ ಕೈಮಗ್ಗದವರ ಸಹಕಾರ ಸಂಘ.

      2018ರಲ್ಲಿ ಕೇಂದ್ರ ಸರ್ಕಾರದಿಂದ ನೇಕಾರರ ಸರ್ವೆ ಮಾಡಿಸಲಾಗಿತ್ತು. ಡಾಟಾ ಆರ್ವಿ ಮ್ಯಾನೇಜ್ ಮೆಂಟ್ ಸರ್ವಿಸ್ ಏಜೆನ್ಸಿ ಸರ್ವೆ ಮಾಡಿ ರಾಜ್ಯಾದ್ಯಂತ 54ಸಾವಿರ ನೇಕಾರರನ್ನು ಗುರುತಿಸಲಾಗಿತ್ತು ಅವರ ಮಾಹಿತಿಯನ್ನು ವೆಬ್ ಪೆÇೀರ್ಟಲ್ಗೆ ಹಾಕಲಾಗಿದ್ದು ಅಕೌಂಟ್ ನಂ. ಆಧಾರ್ ನಂ. ಪ್ರಕಾರ ಚೆಕ್ ಮಾಡಿಸಿ ಅಪ್ ಡೇಟ್ ಮಾಡುತ್ತಾರೆ. ಸರ್ವೆ ಮಾಡಿರುವುದನ್ನೇ ಆಧಾರವನ್ನಾಗಿಟ್ಟುಕೊಂಡು ರಾಜ್ಯ ಸರ್ಕಾರ ಪರಿಹಾರದ ಹಣ ಸಂದಾಯ ಮಾಡುತ್ತದೆ.

-ಸಂತೋಷ್, ಸಹಾಯಕ ನಿರ್ದೇಶಕರು, ಕೈಮಗ್ಗ ಜವಳಿ ಇಲಾಖೆ, ತುಮಕೂರು.

 

 ವಿಶೇಷ ವರದಿ :
(ಚಿಗುರು ಕೊಟಿಗೆಮನೆ)