ಭೀಕರ ಪ್ರವಾಹ- ಮಳೆಗೆ ಬೆದರಿದ ಚೀನಾ

ಚೀನಾ :

   ಚೀನಾದಲ್ಲಿ ಎಡಬಿಡದ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ದಕ್ಷಿಣ ಚೀನಾದಲ್ಲಿ ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ 4 ಜನರು ಸಾವನ್ನಪ್ಪಿದ್ದಾರೆ. 10 ಜನರು ನಾಪತ್ತೆಯಾಗಿದ್ದಾರೆಂದು ವರದಿಯಾಗಿದೆ.

   ಚಂಡಮಾರುತ, ಮಳೆ ಮತ್ತು ಪ್ರವಾಹ ಚೀನಾದಲ್ಲಿ ದೊಡ್ಡ ವಿನಾಶವನ್ನು ಉಂಟುಮಾಡಿದೆ. ಏಪ್ರಿಲ್ 16 ರಿಂದ ದಕ್ಷಿಣ ಚೀನಾದಲ್ಲಿ ದಾರಾಕಾರವಾಗಿ ಮಳೆಯಾಗುತ್ತಿದೆ. ಇದರಿಂದಾಗಿ 44 ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಮನೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ವಾಹನ ಸೇರಿದಂತೆ ಇನ್ನಿತರ ಭಾರವಾದ ವಸ್ತುಗಳು ಪ್ರವಾಸದ ರಬಸಕ್ಕೆ ಆಟಿಕೆಯಂತೆ ಕೊಚ್ಚಿ ಹೋಗುತ್ತಿರುವ ದೃಶ್ಯಗಳು ಕಂಡು ಬಂದಿವೆ.

   ಜನರನ್ನು ಪ್ರವಾಹದಿಂದ ರಕ್ಷಿಸಲು ಪ್ರಾದೇಶಿಕ ಆಡಳಿತ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಇಲ್ಲಿಯವರೆಗೆ 1,10,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಎಲ್ಲಾ ತುರ್ತು ಸೇವೆಗಳನ್ನು ಅಲರ್ಟ್ ಮೋಡ್‌ನಲ್ಲಿ ಇರಿಸಲಾಗಿದೆ. ಇದುವರೆಗೆ ಚೀನಾದಲ್ಲಿ ಪ್ರವಾಹದಿಂದಾಗಿ 165 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

   ಚೀನಾದ ಗುವಾಂಗ್‌ಡಾಂಗ್‌ನಲ್ಲಿ ಈ ವಿನಾಶದ ಕೆಟ್ಟ ಪರಿಣಾಮ ಕಂಡುಬಂದಿದೆ. ಅಲ್ಲಿ 4 ಜನರ ಶವಗಳನ್ನು ಪತ್ತೆಯಾಗಿವೆ. ಸಿಂಗಾಪುರದ ಸುದ್ದಿ ಸಂಸ್ಥೆ CNA ಪ್ರಕಾರ, ಪ್ರವಾಹದಿಂದಾಗಿ 11ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆಯಾಗಿದ್ದಾರೆ. ದಾರಾಕಾರ ಮಳೆಯಿಂದಾಗಿ ಭೂಕುಸಿತವೂ ಸಂಭವಿಸುತ್ತಿದ್ದು 6 ಮಂದಿ ಗಾಯಗೊಂಡಿದ್ದಾರೆ. ಆದರೆ ಭೂಕುಸಿತದ ಸ್ಥಳಗಳಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಭಾರೀ ಮಳೆಯಿಂದಾಗಿ, ಗುವಾಂಗ್‌ಡಾಂಗ್‌ನಲ್ಲಿನ ನದಿಗಳ ಮೇಲೆ ನಿರ್ಮಿಸಲಾದ ಅನೇಕ ಸೇತುವೆಗಳು ಸಂಪೂರ್ಣವಾಗಿ ಕುಸಿದಿವೆ. ನದಿಗಳಲ್ಲಿ ನೀರಿನ ಒತ್ತಡ ತುಂಬಾ ಹೆಚ್ಚಾಗಿದ್ದು ಜನ ಪ್ರಾಣವನ್ನು ಅಂಗೈಯಲ್ಲಿ ಹಿಡಿದುಕೊಂಡು ವಾಸಿಸುವಂತ ಸ್ಥಿರಿ ಇದೆ. 

    ಏಪ್ರಿಲ್ 21ರ ಸಂಜೆ ದಕ್ಷಿಣ ಚೀನಾದ ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತ ಅಪ್ಪಳಿಸಿದೆ. ಇದರಿಂದಾಗಿ ಚೀನಾ ಈ ಶತಮಾನದ ಅತಿದೊಡ್ಡ ಪ್ರವಾಹವನ್ನು ಎದುರಿಸುವ ಸಾಧ್ಯತೆ ಇದೆ ಎಂದು ಚೀನಾದ ರಾಷ್ಟ್ರೀಯ ಹವಾಮಾನ ಇಲಾಖೆ ಹೇಳಿದೆ. ಈ ಚಂಡಮಾರುತದ ಬಗ್ಗೆ ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ.

    ಈ ಚಂಡಮಾರುತದಿಂದ 12 ಕೋಟಿ ಜನರು ತೊಂದರೆಗೊಳಗಾಗಬಹುದು ಎಂದು ಅಂದಾಜಿಸಲಾಗಿದೆ. ಪರಿಸ್ಥಿತಿ ಸುಧಾರಿಸುವವರೆಗೆ ಸಮುದ್ರ ಪ್ರದೇಶಗಳಿಗೆ ಭೇಟಿ ನೀಡುವುದನ್ನು ಸರ್ಕಾರ ನಿಷೇಧಿಸಿದೆ. ದಕ್ಷಿಣ ಚೀನಾದ ಪ್ರಮುಖ ಬೀ ನದಿಯು ಉಕ್ಕಿ ಹರಿಯುತ್ತಿದ್ದು, ಸೋಮವಾರ ವಸತಿ ಪ್ರದೇಶಗಳು 19 ಅಡಿಗಳಷ್ಟು ನೀರಿನಿಂದ ತುಂಬಿವೆ. 

   ಚಂಡಮಾರುತದ ಪ್ರಭಾವ ಈಗ ಝೌಕಿಂಗ್, ಶಾವೊಗುವಾನ್, ಕಿಂಗ್ಯುವಾನ್ ಮತ್ತು ಜಿಯಾಂಗ್‌ಮೆನ್ ನಗರಗಳಲ್ಲಿ ಗೋಚರಿಸುತ್ತಿದೆ. ಕಳೆದ 12 ಗಂಟೆಗಳಿಂದ ಈ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಇದರಿಂದಾಗಿ ಝೋಕಿಂಗ್ ನಗರ ಸೇರಿದಂತೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಮುಂದಿನ ಆದೇಶದವರೆಗೆ ಮೂರು ಪ್ರಾಂತ್ಯಗಳಲ್ಲಿ 1 ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲಾಗಿದೆ. ಪ್ರವಾಹ ಪೀಡಿತ ಗುವಾಂಗ್‌ಡಾಂಗ್, ಕಿಂಗ್ಯುವಾನ್ ಮತ್ತು ಶಾವೊಗುವಾನ್‌ನಲ್ಲಿ ಸಹಾಯ ಮಾಡಲು ಚೀನಾದ ಸೇನೆಯನ್ನು ನಿಯೋಜಿಸಲಾಗಿದೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap