ಮಹಿಳೆಯನ್ನು ಕಿಡ್ನ್ಯಾಪ್‌ ಮಾಡಿ ಚಿತ್ರಹಿಂಸೆ…..!

ಚಿಕ್ಕಬಳ್ಳಾಪುರ:

     ಮಹಿಳೆಯನ್ನು ಕೋಣೆಯಲ್ಲಿ ಕೂಡಿಹಾಕಿ ರಾತ್ರಿಯಿಡೀ ಚಿತ್ರಹಿಂಸೆ ನೀಡಿ, ಕಣ್ಣುಗುಡ್ಡೆ ಕಿತ್ತು ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಜಗನಹಳ್ಳಿಯಲ್ಲಿ ನಡೆದಿದೆ. ಹೌದು, ಮಹಿಳೆಯನ್ನು ಕಿಡ್ನ್ಯಾಪ್ ಮಾಡಿ ತೋಟದ ಮನೆಯಲ್ಲಿ ಕೂಡಿಹಾಕಿ ಬ್ಯಾಟ್, ರಾಡ್‌ಗಳಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮುಖದಲ್ಲಿ ರಕ್ತ ಸುರಿಯುವಂತೆ ದುಷ್ಕರ್ಮಿಗಳು ಮನಬಂದಂತೆ ಥಳಿಸಿದ್ದಾರೆ.

   ವ್ಯಕ್ತಿಯೊಬ್ಬ ಮೊದಲ ಹೆಂಡತಿ ಇದ್ದರೂ, ಮತ್ತೊಂದು ಮದುವೆ ಮಾಡಿಕೊಂಡಿದ್ದ. ಹೀಗಾಗಿ ಮೊದಲ ಹೆಂಡತಿ ಕಡೆಯವರು ಎರಡನೇ ಹೆಂಡತಿಯನ್ನು ಕಿಡ್ನ್ಯಾಪ್‌ ಮಾಡಿಸಿ ಹಲ್ಲೆ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

   ಜಗನಹಳ್ಳಿ ಗ್ರಾಮದ ಗಂಗರಾಜು ಎಂಬುವವರ ಎರಡನೇ ಪತ್ನಿ ಸಂಗೀತ ಮೇಲೆ ಭೀಕರ ಹಲ್ಲೆ ನಡೆಸಲಾಗಿದೆ. ಮೊದಲ ಪತ್ನಿಯ ಕಡೆಯವರೇ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳು ಸಂಗೀತ ಸಹೋದರಿ ಆರೋಪಿಸಿದ್ದಾರೆ.

   ಬೆಂಗಳೂರಿನಲ್ಲಿ ಮೂರು ತಿಂಗಳ ಹಿಂದೆ ಗಂಗರಾಜು, ಸಂಗೀತ ಅವರನ್ನು ಎರಡನೇ ಮದುವೆ ಆಗಿದ್ದರು. ಹೀಗಾಗಿ ಗಂಗರಾಜು ಸಂಬಂಧಿ ರಾಜಮ್ಮ ಕಡೆಯವರಿಂದ ಸಂಗೀತ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ನಿನ್ನೆ ರಾತ್ರಿ ಸಂಗೀತ ತಂದೆ ಹಾಗೂ ಸಹೋದರಿಯರ ಜತೆಯೂ ಗಲಾಟೆ ಮಾಡಿದ್ದು, ಈ ವೇಳೆ ಸಂಗೀತ ಸಹೊದರಿ ಹಂಸ ಮೇಲೆ ಹಲ್ಲೆ ಮಾಡಲಾಗಿದೆ.

   ಸುದ್ದಿ ತಿಳಿದು ಗಂಗರಾಜು ಮತ್ತು ಸಂಗೀತಾ ಗ್ರಾಮಕ್ಕೆ ಬಂದಿದ್ದಾರೆ. ಗ್ರಾಮಕ್ಕೆ ಬಂದಿದ್ದ ಸಂಗೀತ ಮೇಲೆ ದಾಳಿ ನಡೆದಿದೆ. ಹೆಂಡತಿ ಇದ್ದರೂ ಎರಡನೇ ಮದುವೆಯಾಗಿದ್ದ ಗಂಗರಾಜು 9 ವರ್ಷಗಳಿಂದ ಸಂಗೀತ ಜತೆ ಇದ್ದರು. ಹೀಗಾಗಿ ಮೊದಲ ಪತ್ನಿಯ ಕಡೆಯವರು ಸಂಗೀತಾಳನ್ನು ಕಿಡ್ನ್ಯಾಪ್ ಮಾಡಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Recent Articles

spot_img

Related Stories

Share via
Copy link