ಸಿಗರೇಟ್ ತುಂಡು ಎಲ್ಲೆಂದರಲ್ಲಿ ಎಸೆದರೆ 31,000 ರೂ. ದಂಡ

ಬೆರ್ನ್

     ಬಡತನ ಬಹುತೇಕ ಎಲ್ಲ ದೇಶಗಳನ್ನೂ ಕಾಡುತ್ತದೆ. ಆದರೆ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಅದು ಮೂಲಭೂತವಾಗಿ ನಿಷೇಧಿಸಲ್ಪಟ್ಟ ವಿಷಯ. ಈ ದೇಶದ ಸರ್ಕಾರ ಪ್ರತಿಯೊಬ್ಬರಿಗೂ ವಸತಿ, ವೈದ್ಯಕೀಯ ಆರೈಕೆ ಮತ್ತು ಮೂಲಭೂತ ಸೌಲಭ್ಯ ಸಿಗುವಂತೆ ನೋಡಿಕೊಳ್ಳುತ್ತಿದೆ. ಇದರ ಪರಿಣಾಮವಾಗಿ ನಿರಾಶ್ರಿತರ ಸಂಖ್ಯೆ ಬಹಳ ಕಡಿಮೆ ಇದೆ. ಎಕ್ಸ್‌ನಲ್ಲಿ ಇತ್ತೀಚೆಗೆ ವೈರಲ್ ಆದ ವಿಡಿಯೊ, ಸ್ವಿಟ್ಜರ್‌ಲ್ಯಾಂಡ್‌ ಬಡತನವನ್ನು ವ್ಯವಸ್ಥಿತವಾಗಿ ತಡೆಗಟ್ಟುವ ವ್ಯವಸ್ಥೆಯನ್ನು ಹೇಗೆ ರಚಿಸಿದೆ ಎಂಬುದನ್ನು ಎತ್ತಿ ತೋರಿಸಿದೆ.

     ಯಾರಾದರೂ ತಮ್ಮ ಮನೆಯನ್ನು ಕಳೆದುಕೊಂಡರೆ, ಸರ್ಕಾರವು ಅವರಿಗೆ ವಸತಿ ಒದಗಿಸಬೇಕಾಗುತ್ತದೆ ಎಂದು ವಿಡಿಯೊ ವಿವರಿಸಿದೆ. ಬಡತನವನ್ನು ನಿಷೇಧಿಸಿರುವ ಒಂದು ದೇಶ ಇದೆ. ಇಲ್ಲಿ ಯಾರಾದರೂ ತಮ್ಮ ಮನೆ ಕಳೆದುಕೊಂಡರೆ, ಸರಕಾರವು ಅವರಿಗೆ ಮನೆ ಒದಗಿಸಬೇಕಾಗುತ್ತದೆ. ಯಾರಾದರೂ ಈ ಸಹಾಯವನ್ನು ನಿರಾಕರಿಸಿದರೆ ಅವರನ್ನು ಗಡೀಪಾರು ಮಾಡಬಹುದು ಎಂದು ವಿವರಿಸಲಾಗಿದೆ. 

      ಅಗತ್ಯವಿರುವ ನಿವಾಸಿಗಳಿಗೆ ಸ್ವಿಸ್ ನಗರಗಳು ಬೆಂಬಲ ನಿಧಿಗಳನ್ನು ನಡೆಸುತ್ತವೆ ಎಂದು ವಿಡಿಯೊದಲ್ಲಿ ಉಲ್ಲೇಖಿಸಲಾಗಿದೆ. ಈ ನಿಧಿಗಳು ವಸತಿ, ವೈದ್ಯಕೀಯ ಆರೈಕೆ ಮತ್ತು ಯಾರಾದರೂ ನಿರುದ್ಯೋಗಿಗಳಾಗಿದ್ದರೆ ಅಥವಾ ಕಷ್ಟಪಡುತ್ತಿದ್ದರೆ ಹೊಸ ವೃತ್ತಿಗೆ ಮರು ತರಬೇತಿ ನೀಡುವುದನ್ನು ಸಹ ಒಳಗೊಂಡಿರುತ್ತವೆ. ನಾಗರಿಕರು ಮತ್ತು ನಿವಾಸಿಗಳು ಯಾವುದೇ ಸಮಯದಲ್ಲಿ ಈ ರಚನಾತ್ಮಕ ಬೆಂಬಲ ವ್ಯವಸ್ಥೆಯನ್ನು ಅವಲಂಬಿಸಬಹುದು.

     ಸ್ವಿಟ್ಜರ್‌ಲ್ಯಾಂಡ್‌ ಹೆಚ್ಚಿನ ಸಂಬಳ ಮತ್ತು ಉದಾರ ಸಾಮಾಜಿಕ ಪ್ರಯೋಜನಗಳನ್ನು ನೀಡುತ್ತದೆ. ವಿಡಿಯೊದ ಪ್ರಕಾರ, ಸರಾಸರಿ ವೇತನವು €7,000 ರಿಂದ €8,000 ವರೆಗೆ ಇರುತ್ತದೆ. ಆದರೆ ಜೀವನ ವೆಚ್ಚವು ಈ ಹೆಚ್ಚಿನ ಆದಾಯಕ್ಕೆ ಹೊಂದಿಕೆಯಾಗುತ್ತದೆ ಎಂದು ತಿಳಿಸಲಾಗಿದೆ. ಕನಿಷ್ಠ ವೇತನ €4,000  ಮತ್ತು ನಿರುದ್ಯೋಗ ಭತ್ಯೆಗಳು ವ್ಯಕ್ತಿಯ ಹಿಂದಿನ ವೇತನದ ಶೇ. 80ರವರೆಗೆ ತಲುಪಬಹುದು.

     ಅದೇ ರೀತಿ ಸ್ವಚ್ಛತೆಗೂ ಸಾಕಷ್ಟು ಒತ್ತು ನೀಡಲಾಗಿದೆ. ಕಟ್ಟುನಿಟ್ಟಾದ ನಿಯಮಗಳು ವ್ಯವಸ್ಥಿತ ಪರಿಸರವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎನ್ನುವುದನ್ನು ಸರ್ಕಾರ ಕಂಡುಕೊಂಡಿದೆ. ಸಿಗರೇಟ್ ತುಂಡನ್ನು ಕಸದ ತೊಟ್ಟಿಯಿಂದ ಹೊರಗೆ ಹಾಕಿದರೆ €300 (31,000 ರೂ.)ವರೆಗೆ ದಂಡ ವಿಧಿಸಬಹುದು ಮತ್ತು ಬೀದಿಗಳಲ್ಲಿ ಕಸ ಎಸೆದರೆ €10,000 (10.35 ಲಕ್ಷ ರೂ.) ವರೆಗೆ ದಂಡ ವಿಧಿಸಬಹುದು. ದೇಶವು ಅತ್ಯಂತ ಸುರಕ್ಷಿತವಾಗಿದೆ, ಅಪರಾಧ ಪ್ರಮಾಣವೂ ತುಂಬಾ ಕಡಿಮೆಯಾಗಿದೆ. ಪೊಲೀಸರು ಹೆಚ್ಚಾಗಿ ಶಸ್ತ್ರಾಸ್ತ್ರಗಳನ್ನು ಸಹ ಹೊಂದಿರುವುದಿಲ್ಲ ಎಂದು ತಿಳಿಸಲಾಗಿದೆ.

     ಇನ್ನು ಈ ವಿಡಿಯೊಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಒಬ್ಬ ವ್ಯಕ್ತಿ 10 ವರ್ಷಗಳಿಗೂ ಹೆಚ್ಚು ಕಾಲ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ವಾಸಿಸಿದ ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡರು. ಆ ಸಮಯದಲ್ಲಿ, ಅವರು ಐದಕ್ಕಿಂತ ಕಡಿಮೆ ನಿರಾಶ್ರಿತ ಜನರನ್ನು ನೋಡಿದ್ದಾಗಿ ಉಲ್ಲೇಖಿಸಿದ್ದಾರೆ. ಕಳ್ಳತನ ಪ್ರಕರಣಗಳು ಕೂಡ ಬಹಳ ಕಡಿಮೆ ಎಂದು ಅವರು ಹಂಚಿಕೊಂಡಿದ್ದಾರೆ. ಸ್ವಿಸ್ ಜನರು ಬಹಳ ಶ್ರದ್ಧೆಯುಳ್ಳವರು. ಬಹಳ ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ಅದಕ್ಕಾಗಿ ಎಲ್ಲ ಐಷಾರಾಮಿ ಗಡಿಯಾರ ಬ್ರ್ಯಾಂಡ್‌ಗಳು ಸ್ವಿಟ್ಜರ್‌ಲ್ಯಾಂಡ್‌ನಿಂದ ಬಂದಿವೆ. ವಿಶೇಷವಾಗಿ 100 ವರ್ಷಗಳ ಹಿಂದೆ ಇದನ್ನು ಮಾಡಲು ಬೇರೆ ಯಾರಿಗೂ ಸಾಧ್ಯ ಇಲ್ಲ ಎಂದು ಅವರು ಹೇಳಿದ್ದಾರೆ.

Recent Articles

spot_img

Related Stories

Share via
Copy link