ಸಿಜೆಐ ಚಂದ್ರಚೂಡ್ ಹೆಸರಲ್ಲಿ​ ಸೈಬರ್ ವಂಚನೆ….!

ನವದೆಹಲಿ :

  ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್​ ಅವರನ್ನೂ ಕೂಡ ಇದು ಬಿಟ್ಟಿಲ್ಲ. ವ್ಯಕ್ತಿಯೊಬ್ಬ ತಾನು ಸಿಜೆಐ ಚಂದ್ರಚೂಡ್​ ಎಂದು ಹೇಳಿಕೊಂಡು ವಂಚನೆ ಮಾಡಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ನಾನು ಸಿಜೆಐ ಚಂದ್ರಚೂಡ್ ಇಂದು ಪ್ರಮುಖ ಮೀಟಿಂಗ್​ವೊಂದಕ್ಕೆ ಅರ್ಜೆಂಟ್​ ಆಗಿ ಹೋಗಬೇಕಿದೆ, ಕ್ಯಾಬ್​ಗಾಗಿ 500 ರೂ. ಕೊಡುವಿರಾ, ನಾನು ನ್ಯಾಯಾಲಯಕ್ಕೆ ಹೋದ ತಕ್ಷಣ ಹಿಂದಿರುಗಿಸುತ್ತೇನೆ ಎಂದು ಕೇಳಿರುವಂತೆ ಸಂದೇಶ ಬಂದಿತ್ತು.
   ವೈರಲ್​ ಆಗುತ್ತಿರುವ ಸ್ಕ್ರೀನ್​ಶಾಟ್​ ಪ್ರಕಾರ, ವಂಚಕ ತನ್ನನ್ನು ತಾನು ಸಿಜೆಐ ಚಂದ್ರಚೂಡ್ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬನಿಗೆ  500 ರೂ. ಬೇಕೆಂದು ಸಂದೇಶ ಕಳುಹಿಸಿದ್ದಾನೆ.  ಈ ಸಂಬಂಧ ಸಿಜೆಐ ಚಂದ್ರಚೂಡ್ ಅವರ ಸೂಚನೆ ಮೇರೆಗೆ ಆಗಸ್ಟ್​ 27ರಂದು ಸೈಬರ್ ಕ್ರೈಂ ಸೆಲ್​ನಲ್ಲಿ ಸೂರು ದಾಖಲಿಸಲಾಗಿದೆ.
ಆನ್​ಲೈನ್ ವಂಚನೆಯನ್ನು ತಪ್ಪಿಸುವುದು ಹೇಗೆ? ವಾಟ್ಸಾಪ್​ಗೆ ಬರುವ ಲಿಂಕ್​ಗಳನ್ನೆಲ್ಲಾ ಕ್ಲಿಕ್ ಮಾಡಬೇಡಿ, ವಾಟ್ಸಾಪ್​ನಲ್ಲಿ ಅಪರಿಚಿತ ಅಥವಾ ಅನುಮಾನಾಸ್ಪದ ಲಿಂಕ್​ಗಳನ್ನು ಕ್ಲಿಕ್ ಮಾಡುವುದನ್ನು ತಪ್ಪಿಸಿ. ಈ ಲಿಂಕ್​ಗಳು ನಿಮ್ಮ ಮೊಬೈಲ್​ಗೆ ವೈರಸ್​ಗಳು ಅಥವಾ ಮಾಲ್​ವೇರ್​ಗಳನ್ನು ತಗುಲಿಸಬಹುದು.

 

ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ: ನಿಮ್ಮ ಬ್ಯಾಂಕ್ ಖಾತೆ, ಒಟಿಪಿ ಪಾಸ್​ವರ್ಡ್​ ಅಥೌಆ ಯಾವುದೇ ಅಪರಿಚಿತ ವ್ಯಕ್ತಿ ಅಥವಾ ಪರಿಶೀಲಿಸದ ಮೂಲಗಳಿಂದ ಬಂದ ಸಂದೇಶಗಳಲ್ಲಿ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ.

ಪರಿಶೀಲಿಸಿ: ಯಾವುದೇ ಅಪರಿಚಿತ ಸಂಖ್ಯೆಯಿಂದ ಬರುವ ಸಂದೇಶಗಳ ದೃಢೀಕರಣವನ್ನು ಪರಿಶೀಲಿಸಿ, ವಂಚಕರು ಸಾಮಾನ್ಯವಾಗಿ ಅಧಿಕೃತ ಬ್ರ್ಯಾಂಡ್​ಗಳು ಅಥವಾ ವ್ಯಕ್ತಿಗಳ ಹೆಸರನ್ನು ಬಳಸುತ್ತಾರೆ, ಈ ಪ್ರಕರಣದಲ್ಲಿ ಅವರು ಸಿಜೆಐ ಚಂದ್ರಚೂಡ್ ಅವರ ಹೆಸರನ್ನು ಬಳಕೆ ಮಾಡಿದ್ದಾರೆ.

ವಂಚನೆ ಬಗ್ಗೆ ರಿಪೋರ್ಟ್​ ಮಾಡಿ: ನೀವು ಅನುಮಾನಾಸ್ಪರ ಸಂದೇಶ ಅಥವಾ ಕರೆಯನ್ನು ಸ್ವೀಕರಿಸಿದರೆ ತಕ್ಷಣವೇ ಅದನ್ನು ವಾಟ್ಸಾಪ್​ಗೆ ರಿಪೋರ್ಟ್ ಮಾಡಿ.

ಎಚ್ಚರಿಕೆಯಿಂದ ಓದಿ ಅರ್ಥಮಾಡಿಕೊಳ್ಳಿ: ಯಾವುದೇ ಆಫರ್​ ಅಥವಾ ಮನವಿ ಸಂದೇಶಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅರ್ಥಮಾಡಿಕೊಳ್ಳಿ.

ಅಪರಿಚಿತ ಕರೆಗಳು ಹಾಗೂ ಸಂದೇಶಗಳನ್ನು ಬ್ಲಾಕ್ ಮಾಡಿ: ಯಾರಾದರೂ ನಿಮಗೆ ಅಪರಿಚಿತ ಸಂಖ್ಯೆಯಿಂದ ನಿರಂತರ ಕರೆ ಅಥವಾ ಸಂದೇಶ ಮಾಡಿ ತೊಂದರೆ ಕೊಡುತ್ತಿದ್ದರೆ ಆ ನಂಬರ್ ಬ್ಲಾಕ್ ಮಾಡಿ, ವಾಟ್ಸಾಪ್​ನಲ್ಲಿ ರಿಪೋರ್ಟ್​ ಮಾಡಿ.

 

Recent Articles

spot_img

Related Stories

Share via
Copy link
Powered by Social Snap