ತುಮಕೂರು:
5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ನಿರ್ಧಾರ ಸರಿಯಿರಲಿ ಅಥವಾ ತಪ್ಪಿರಲಿ, ಆದರೆ ಆ ವಿಷಯವನ್ನು ರಾಜ್ಯ ಸರ್ಕಾರ ನಿರ್ವಹಿಸಿದ ರೀತಿ ಅತ್ಯಂತ ಖಂಡನಾರ್ಹವಾಗಿದೆ.
ಈಗಿನ ರಾಜ್ಯ ಸರ್ಕಾರವು ಶೈಕ್ಷಣಿಕ ನೀತಿಗಳನ್ನು ಯಾವುದೇ ಚರ್ಚೆಗಳಿಲ್ಲದೆ ಅತ್ಯಂತ ಅಪ್ರಜಾತಾಂತ್ರಿಕ ರೀತಿಯಲ್ಲಿ ಅನುಷ್ಠಾನಕ್ಕೆ ತರುತ್ತಿದೆ. ಪ್ರಸ್ತುತ ಪಬ್ಲಿಕ್ ಪರೀಕ್ಷೆಯ ಕುರಿತು ಸಹ ಸಂಬAಧಪಟ್ಟವರ ಜೊತೆಗೆ ಯಾವುದೇ ಚರ್ಚೆ ನಡೆದಿಲ್ಲ. ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳೊಂದಿಗೆ ಯಾವುದೇ ಚರ್ಚೆ ಸರ್ಕಾರ ನಡೆಸಿಲ್ಲ.
ಶೈಕ್ಷಣಿಕ ವರ್ಷದ ಮಧ್ಯದಲ್ಲಿ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಬೇಕು ಎಂದು ಸರ್ಕಾರ ನಿರ್ಧರಿಸಿತ್ತು. ಯಾವುದೇ ಸಮಾಲೋಚನೆ ನಡೆಸದೆ ಅಪ್ರಜಾತಾಂತ್ರಿಕವಾಗಿ ಈ ನಿರ್ಧಾರವನ್ನು ಹೇರಲಾಗಿತ್ತು. ಈಗ ಉಚ್ಚ ನ್ಯಾಯಾಲಯವು ಪಬ್ಲಿಕ್ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಆದೇಶ ನೀಡಿದೆ.
ಅಂದರೆ, ಮೊದಲು ಪರೀಕ್ಷೆ ಬರೆಯಲು ಸಿದ್ಧರಿದ್ದ ವಿದ್ಯಾರ್ಥಿಗಳು ಈಗ, ಇನ್ನೇನು ಪರೀಕ್ಷೆಗೆ ಕೆಲವೇ ದಿನಗಳು ಬಾಕಿಯಿದೆ ಎನ್ನುವಾಗ ಪರೀಕ್ಷೆಯೇ ಇಲ್ಲದಿರುವ ಸಂದರ್ಭವನ್ನು ಎದುರಿಸಬೇಕಾಗಿ ಬಂದಿದೆ! ಪರೀಕ್ಷೆಯ ವಿಷಯದಲ್ಲಿ ಹಠಾತ್ತಾಗಿ ಇಷ್ಟೊಂದು ಗಂಭೀರ ಸ್ವರೂಪದ ಬದಲಾವಣೆಗಳನ್ನು ಮಾಡಿದರೆ, ಅದರಿಂದ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಆಗುವ ಪರಿಣಾಮದ ಕುರಿತು ಯಾರು ಆಲೋಚಿಸಿದ್ದಾರೆ?
ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಲ್ಲಿ ಪಬ್ಲಿಕ್ ಪರೀಕ್ಷೆಯ ಕುರಿತು ಉಂಟಾಗಿರುವ ಗೊಂದಲಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ. ಪ್ರಜಾತಾಂತ್ರಿಕ ಪ್ರಕ್ರಿಯೆಯನ್ನು ಅನುಸರಿಸಿದ್ದರೆ ಈ ಗೊಂದಲವನ್ನು ತಪ್ಪಿಸಬಹುದಿತ್ತು ಎಂದು ಂIಆSಔ ಬಲವಾಗಿ ನಂಬುತ್ತದೆ.
ಯಾವುದೇ ಶೈಕ್ಷಣಿಕ ನೀತಿಯನ್ನು ರೂಪಿಸುವ ಮೊದಲು ರಾಜ್ಯ ಸರ್ಕಾರವು ಅದಕ್ಕೆ ಸಂಬಂಧಪಟ್ಟ ಎಲ್ಲರೊಂದಿಗೆ ಮುಖ್ಯವಾಗಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಚರ್ಚಿಸಿ ನಂತರವೇ ನೀತಿಯ ಅನುಷ್ಠಾನದ ಮಾಡಬೇಕು ಎಂದು ಎಐಡಿಎಸ್‌ಒ ಆಗ್ರಹಿಸುತ್ತದೆ ಮತ್ತು ಈ ರೀತಿಯ ಪ್ರಜಾತಾಂತ್ರಿಕ ಪ್ರಕ್ರಿಯೆಯಿಂದ ಹಲವು ಬಿಕ್ಕಟ್ಟುಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಆಗ್ರಹಿಸುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
