ಸೋಮೇಶ್ವರ ದೇವಾಲಯದ ಜಾಗ ಒತ್ತುವರಿ ತೆರವು

ತುಮಕೂರು:

ನಗರದ ಭದ್ರಮ್ಮ ಸರ್ಕಲ್ ಹತ್ತಿರವಿರುವ ಸೋಮೇಶ್ವರ ದೇವಸ್ಥಾನ ಆವರಣದಲ್ಲಿ ಒಂದು ಎಕರೆ ಸರ್ಕಾರಿ ಜಮೀನಿದ್ದು ಅದರಲ್ಲಿ ಸ್ಥಳೀಯರು ಸರ್ಕಾರದ ಆದೇಶವಿಲ್ಲದೆ ಕಟ್ಟಡ ನಿರ್ಮಿಸಿದ್ಧಾರೆ ಎಂದು ಗುರುವಾರ ಬೆಳಗ್ಗೆ ತಹಸೀಲ್ದಾರ್ ಮೋಹನ್ ಕುಮಾರ್ ಅವರು ಸ್ಥಳಕ್ಕೆ ಆಗಮಿಸಿ ಜಾಗವನ್ನು ತೆರವುಗೊಳಿಸಿದರು.

ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಸರ್ಕಾರ ಹೂವಿನ ತೋಟ ಮಾಡುವುದಾಗಿ ಆ ಜಾಗವನ್ನು ಹಾಗೆ ಉಳಿಸಿದ್ದು, ಇದೀಗ ಸ್ಥಳೀಯರು ಕಟ್ಟಡಗಳನ್ನು ಯಾವುದೇ ಖಾತೆಗಳಿಲ್ಲದೆ ನಿರ್ಮಿಸಿಕೊಡುತ್ತಾರೆ ಎಂದು ತಿಳಿದು ಮಾಲೀಕರಿಗೆ ಮನವಿ ಮಾಡಿದರೂ ಸಹ ಕಾನೂನು ಮೀರಿ ಸ್ಥಳವನ್ನು ಅಕ್ರಮಣ ಮಾಡಿಕೊಂಡಿದ್ದಾರೆ. ಆದ್ದರಿಂದ ದೇವಸ್ಥಾನದ ಆವರಣದಲ್ಲಿ ಇರುವಂತಹ ಶೆಡ್‍ಗಳನ್ನು ನೆಲಸಮಗೊಳಿಸಿ ಮತ್ತೆ ಹೂವಿನ ತೋಟವನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ.

ದೇವಸ್ಥಾನದ ಜಾಗದಲ್ಲಿ ಇರುವಂತಹ ಅನಧಿಕೃತ ಕಟ್ಟಡಗಳ ಬಗ್ಗೆ ನಮಗೆ ಕಂಪ್ಲೇಂಟ್ ಬಂದಿದೆ. ಆದ್ದರಿಂದ ನಾವು ಸುಮಾರು ಬಾರಿ ಮನವಿ ಮಾಡಿದರೂ ಕಿವಿಕೊಡದೆ ಕಟ್ಟಡವನ್ನು ನಿರ್ಮಿಸಿಕೊಂಡಿದ್ದರು. ಈಗ ಹೊಸದಾಗಿ ಕಟ್ಟಡ ನಿರ್ಮಿಸುವುದಕ್ಕೆ ಏರ್ಪಾಡು ಮಾಡಿದ್ದರು. ಅದನ್ನು ತೆರವುಗೊಳಿಸಿದ್ದಲ್ಲದೆ, ಚಹ ಅಂಗಡಿ ಹಾಗೂ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಶಾಪ್ ಕಟ್ಟಡಗಳನ್ನು ತೆರವುಗೊಳಿಸಿದ್ದೇವೆ.

 – ಮೋಹನ್ ಕುಮಾರ್ ತುಮಕೂರು ತಹಸೀಲ್ದಾರ್

       ಹಿಂದೆ ಈ ದೇವಸ್ಥಾನದ ಜಾಗವನ್ನು ಹೂವು ಬೆಳೆಸುವುದಕ್ಕಾಗಿ ದಾನವಾಗಿ ನೀಡಿದ್ದರು. ಆದರೆ ಈಗ ಕಟ್ಟಡವನ್ನು ನಿರ್ಮಿಸಿಕೊಂಡಿದ್ದರು, ಆದ್ದರಿಂದ ನಾವು ಇದನ್ನೆಲ್ಲ ತೆರವುಗೊಳಿಸಿದ್ದೇವೆ ಎಂದರು.

ಇಲ್ಲಿನ ಮನೆಗಳ ಬಗ್ಗೆ ಕೋರ್ಟ್‍ನಲ್ಲಿ ಚರ್ಚೆ ನಡೆಯುತ್ತಿದೆ. ಈ ಚರ್ಚೆ ಮುಗಿದ ನಂತರ ಆದಷ್ಟು ಬೇಗನೆ ಇದರತ್ತ ಗಮನ ಹರಿಸುತ್ತೇವೆ. ಈ ದೇವಸ್ಥಾನದ ಜಾಗ ಸುಮಾರು ಒಂದು ಎಕರೆ ಜಮೀನಿದ್ದು, 20 ಕುಂಟೆ ಆವರಣವನ್ನು ಹೊಂದಿದೆ. ಇಲ್ಲಿ ಈ ಹಿಂದೆ ನಿರ್ಧರಿಸಿದ ಹಾಗೆ ಹೂವಿನ ತೋಟ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮತ್ತು ಕಾಪೆರ್Çರೇಟರ್‍ಗೆ ಮನವಿ ಮಾಡಿದ್ದೇವೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link