ಸಿಎಂ ಅಭಿವೃದ್ಧಿ ಮಂತ್ರ: ಖರ್ಗೆ ಭ್ರಷ್ಟಾಚಾರದ ತಿರುಮಂತ್ರ

ತುಮಕೂರಲ್ಲಿ ಬಿಜೆಪಿ ಸರ್ಕಾರದ ಸಾಧನೆಯ ಪ್ರಜ್ವಲನ | ಕೊರಟಗೆರೆಯಲ್ಲಿ ಕಾಂಗ್ರೆಸ್ ಚುನಾವಣಾ ಕಹಳೆ

ತುಮಕೂರು

      ಭಾನುವಾರ ತುಮಕೂರು ಜಿಲ್ಲೆ ಕಾಂಗ್ರೆಸ್ ಮತ್ತು ಬಿಜೆಪಿ ಅತಿರಥ ನಾಯಕರ ಸಮಾಗಮಕ್ಕೆ ಸಾಕ್ಷಿಯಾಯಿತಲ್ಲದೆ, ಸರ್ಕಾರದ ಸಾಧನೆ ವರ್ಸ್ಸ್ ಭ್ರಷ್ಟಾಚಾರದ ಆರೋಪಗಳಿಗೆ ವೇದಿಕೆಯಾಯಿತು.

    ಕೊರಟಗೆರೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ನೇತೃತ್ವದಲ್ಲಿ ನಿರ್ಮಿಸಿರುವ ರಾಜೀವಭವನ ಉದ್ಘಾಟನೆಗೆ ಆಗಮಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ತಮ್ಮ ಭಾಷಣದುದ್ದಕ್ಕೂ ಪ್ರಧಾನಿ ಮೋದಿ ಅವರ ಕಾರ್ಯವೈಖರಿ ವಿರುದ್ಧ ಹರಿಹಾಯದ್ದರಲ್ಲದೆ, ಕಾಂಗ್ರೆಸ್ ಪಕ್ಷದ ಸಮಾನತೆ ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವಂತೆ ಕರೆ ಕೊಟ್ಟರು.

    ಇತ್ತ ತುಮಕೂರು ನಗರದಲ್ಲಿ ಸ್ಮಾರ್ಟ್ಸಿಟಿ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆಗೊಳಿಸಿ ಫಲಾನುಭವಿಗಳ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಸಿಎಂ ಬಸವರಾಜಬೊಮ್ಮಾಯಿ ಕಾಂಗ್ರೆಸ್ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ಕೈ ನಾಯಕರದ್ದು ಪೊಳ್ಳು ಭರವಸೆಗಳು ಎಂದು ಟಾಂಗ್ ಕೊಟ್ಟರು.

   ಖರ್ಗೆಕುಟುಕು:

       ಹಿಂದೂ, ಕ್ರೈಸ್ತ, ಮುಸ್ಲಿಂ ಎಲ್ಲರನ್ನು ಸರಿಸಮಾನವಾಗಿ ನೋಡೋದು ಕಾಂಗ್ರೆಸ್ ಪಕ್ಷ. ಬಿಜೆಪಿ ಅವರು ಯಾವ ರೀತಿ ಪ್ರಜಾಪ್ರಭುತ್ವ ನಡೆಸ್ತಿದ್ದಾರೆ.ಸಂವಿಧಾನವನ್ನ ಯಾವ ರೀತಿ ದುರುಪಯೋಗ ಮಾಡ್ತಿದ್ದಾರೆ. ಎಲ್ಲವನ್ನೂ ನೀವು ಯೋಚನೆ ಮಾಡಬೇಕಿದೆ. ನಮ್ಮ ಹೋರಾಟಗಳು ಬಹಳ ಇದೆ, ಆ ಕಡೆ ಲಕ್ಷ್ಯ ಕೊಡಬೇಕಿದೆ ಎಂದು ಕಾರ್ಯಕರ್ತರಿಗೆ ಎಐಸಿಸಿ ಅಧ್ಯಕ್ಷ ಖರ್ಗೆ ಕರೆ ಕೊಟ್ಟರು.

    ಮೋದಿ ಅವರು ನನ್ನ ಕ್ಷೇತ್ರಕ್ಕೆ ಬಂದು ಹೋಗಿದ್ದಾರೆ. ನಮ್ಮನ್ನ ಟೀಕೆ ಟಿಪ್ಪಣಿ ಮಾಡೋಕೆ ಅವರಿಗೆ ಅಧಿಕಾರ ಇದ್ಯಾ. ಸರ್ಕಾರಿ ಕಾರು, ಸರ್ಕಾರಿ ವಿಮಾನ ಬಳಸಿಕೊಂಡು ನಮ್ಮನ್ನ ಟೀಕೆ ಮಾಡ್ತಾರೆ. 40% ಕರೆಪ್ಷನ್ ಬಗ್ಗೆ ಮೋದಿ, ಅಮಿತ್ ಶಾ ಏನ್ ಹೇಳ್ತಾರೆ. ಅವರ ಕೆಳಗಡೆ ಕರೆಪ್ಷನ್ ಇದೆ. ಅದನ್ನೇ ನೀವು ನೋಡ್ತಾ ಇಲ್ಲಾ. 40% ನೀವು ಹೊಡೆಯಿರಿ, ಮಿಕ್ಕಿದ್ದು ಪಾರ್ಟಿಗೆ ಕಳಿಸಿ ಅಂತಾರೆ. ಅಲ್ಲಿಗೆ 100% ಅವರಿಗೆ ಸರಿಹೋಯಿತು. ನನ್ನ ರಾಜಕೀಯ ಇತಿಹಾಸದಲ್ಲಿ ಇಂತಹ ಪ್ರಧಾನಿಯನ್ನ ನೋಡಿಲ್ಲ ಎಂದು ವ್ಯಂಗ್ಯವಾಡಿದರು.

    ತುಮಕೂರಲ್ಲಿ ಹೆಚ್‌ಎಎಲ್ ಹೆಲಿಕಾಪ್ಟರ್ ಡಿವಿಷನ್ ಉದ್ಘಾಟಿಸಿದರು.ಆದರೆ ಅದನ್ನು ಜಿಲ್ಲೆಗೆ ಕೊಟ್ಟವÀರು ಯಾರು. ಆಂಟನಿಯವರು ಅಪ್ರೂವ್ ಮಾಡಿಕೊಟ್ಟದನ್ನು ತಂದು ನಾನ್ ಮಾಡ್ದೆ ಅಂತಾರೆ. ಮೋದಿ ಅವರು ಒಂದಾದರೂ ಡ್ಯಾಂ ಕಟ್ಟಿದ್ದಾರಾ, ನೀರಾವರಿ ಯೋಜನೆ ಮಾಡಿದ್ದಾರಾ. ಹೇಮಾವತಿ ನೀರು ಬಂತು, ಅದು ಏನ್ ಮೋದಿ ಅವರು ತಂದು ಕೊಟ್ರಾ? ಪ್ರತಿಯೊಂದು ಕಡೆ ಮೋದಿ, ಶಾ ಹೋಗಿ ನಾನ್ ಮಾಡ್ದೆ ಅಂತಾರೆ. ದೇಶಕ್ಕೆ ಸ್ವಾತಂತ್ರ್ಯ  2014 ರಲ್ಲಿ ಬಂದಿದೆ ಅಂತಾ ತಿಳಿದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಿಎಂ ಟಾಂಗ್:

     ಎಸ್‌ಸಿ-ಎಸ್ಟಿ ಸಮುದಾಯಕ್ಕೆ ಮೀಸಲು ಹೆಚ್ಚ¼ ಸಾಧ್ಯವಿಲ್ಲ ಅಂತ ಹೇಳುತ್ತಿದ್ದರು. ಆದರೆ ನಾವು ಮಾಡಿ ತೋರಿಸಿದ್ದೇವೆ.ಯುವಕರಿಗೆ ಸ್ವಾವಲಂಬನೆ ಉದ್ಯೋಗ ಮಾಡಲು ಯೋಜನೆ ತಂದಿದ್ದೇವೆ. ದುಡಿಯುವವರನ್ನು ಗುರುತಿಸಿ ಸಹಾಯ ಮಾಡಲಾಗುತ್ತಿದೆ.ಕೇವಲ ಎಲ್ಲಾ ಮಹಿಳೆಯರಿಗೂ 2 ಸಾವಿರ ಕೊಡುವಂತಹದಲ್ಲ. ಇಂದು ದುಡ್ಡೇ ದೊಡ್ಡಪ್ಪ ಅಲ್ಲ ದುಡಿಮೆಯೇ ದೊಡ್ಡಪ್ಪ ಅನ್ನುವಂತಾಗಿದೆ. ದುಡಿಮೆಗೆ ಸಹಾಯ ಮಾಡುವುದು ನಮ್ಮ ಕೆಲಸ. ಸರ್ವ ವ್ಯಾಪಿ ಸರ್ವಸ್ಪರ್ಶಿ ಆಡಳಿತ ನೀಡುತ್ತಿದ್ದೇವೆ.

   ಶಾಲೆಗೆ ಮಕ್ಕಳನ್ನು ಕರೆತರಲು 2 ಸಾವಿರ ಬಸ್‌ಗಳನ್ನು ಬಿಡುತ್ತೇವೆ. ಇವತ್ತು ಸರ್ಕಾರ ಶ್ರೀಮಂತವಾಗಿರಬಾರದು, ಜನರು ಶ್ರೀಮಂತವಾಗಿರಬೇಕು. ನಾನು ನಂಬಿಕೆ ಇಟ್ಟಿರುವುದು ಜನರು ಶ್ರೀಮಂತರಾಗಬೇಕು.ಈ ಉದ್ದೇಶ ಇಟ್ಟುಕೊಂಡು ಆಡಳಿತ ಮಾಡುತ್ತಿದ್ದೇನೆ.

    970 ಕೋಟಿ ಅನುದಾನ ತುಮಕೂರಿಗೆ ಸಿಕ್ಕಿದೆ. ಎಂದಾದರೂ ಇಷ್ಟೊಂದು ಅನುದಾನ ಯೋಜನೆ ಸಿಕ್ಕಿತ್ತಾ. ಮೋದಿ ದೂರದೃಷ್ಟಿ ಹೊಂದಿರುವ ನಾಯಕ. ಸ್ಮಾರ್ಟ್ ಸಿಟಿಗಳನ್ನು ಮಾಡಿದ್ದರು. ತುಮಕೂರು ಆಧುನಿಕವಾಗಿ ಬೆಳೆಯುತ್ತಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap