ಕುಣಿಗಲ್:

ಪಿಎಸ್ಐ ಎಕ್ಸಾಂ ಅಕ್ರಮ ಪ್ರಕರಣದ ಮೂಲ ಕಿಂಗ್ಪಿನ್ನ ಹೆಸರೇಳಿದ್ರೆ ಇಡೀ ಸರ್ಕಾರವೇ ಉರುಳುತ್ತೆ. ಆ ಕಿಂಗ್ಪಿನ್ ಭವಿಷ್ಯದ ನಾಯಕ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದರು. ಈ ಮಾತು ಕೇಳಿ ಆ ಕಿಂಗ್ಪಿನ್ ಯಾರಿರಬಹುದು?
ಎಂಬ ತರೇಹವಾರಿ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ. ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಅವರೇ ಪಿಎಸ್ಐ ಹಗಣದ ಪಿತಾಮಹ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಪಿಎಸ್ಐ ಹಗರಣದಲ್ಲಿ ಕಾಂಗ್ರೆಸ್ನ ಶೇ.70 ನಾಯಕರು ಜೈಲಿಗೆ ಹೊಗಲಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷರ ಆರೋಪಕ್ಕೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದಲ್ಲಿ ಪ್ರತಿಕ್ರಿಯಿಸಿದ ಡಿಕೆಶಿ, ರಾಜ್ಯಾಧ್ಯಕ್ಷರು ನಮ್ಮನ್ನು ಜೈಲಿಗೆ ಕಳಿಸುವುದು ಇರಲಿ, ಅವರ ಪಕ್ಷದ ಮುಖಂಡರನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ.
ಅಮ್ಮನನ್ನು ನೆನೆದು ವೇದಿಕೆ ಮೇಲೆ ಕಣ್ಣೀರು ಹಾಕಿದ ಶಿವಣ್ಣ ; ಕ್ಷಮೆ ಕೇಳಿದ ಅನುಶ್ರೀ
ಯಾರನ್ನು ಬೇಕಾದರೂ ಜೈಲಿಗೆ ಕಳಿಸಲಿ, ನಮ್ಮ ಅಭ್ಯಂತರವಿಲ್ಲ, ಇದನ್ನು ಏನಾದರೂ ಮಾಡಿ ಕಾಂಗ್ರೆಸ್ ಕಡೆ ತಿರುಗಿಸಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ. ಸಚಿವ ಅಶ್ವತ್ಥನಾರಾಯಣ್ ಹೆಸರು ಹೊರಗಡೆ ಬಂದಿದೆ, ಗೃಹ ಸಚಿವರ ಕಚೇರಿಯಲ್ಲಿ ಹಗರಣ ನಡೆದಿದೆ, ಅನೇಕ ಸಚಿವರು ಇದರಲ್ಲಿ ಭಾಗಿಯಾಗಿದ್ದಾರೆ. ಇದನ್ನು ಯಾರೂ ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದರು.
ಬೆಂಗಳೂರಲ್ಲಿ ತಡರಾತ್ರಿ ಅಪಘಾತ: ಮೆಟ್ರೋ ಪಿಲ್ಲರ್ ಗೆ KSRTC ಬಸ್ ಡಿಕ್ಕಿ, ನಾಲ್ವರು ಗಂಭೀರ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








