ಈ ಹಿಂದೆ ಸರ್ಕಾರ ಬಜೆಟ್ ನಲ್ಲಿ ನೀಡಿದ್ದ ಅನುದಾನದಲ್ಲಿ 535 BS6 ಡೀಸೆಲ್ ಬಸ್ ಖರೀದಿ ಮಾಡಲಾಗಿದೆ. ಈಗಾಗಲೇ 40 ಎಲೆಕ್ಟ್ರಿಕ್, 150 BS6 ಡೀಸೆಲ್ ಬಸ್ಸುಗಳು ಬಿಎಂಟಿಸಿ ಸಂಸ್ಥೆ ಸೇರಿವೆ. ಫೆಬ್ರವರಿ ವೇಳೆಗೆ ಉಳಿದ ಎಲ್ಲಾ ಹೊಸ ಬಸ್ಸುಗಳು ತನ್ನ ಸಂಚಾರ ಆರಂಭಿಸಲಿವೆ.
ಇಂದಿನಿಂದ 90 ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆ
90 ಎಲೆಕ್ಟ್ರಿಕ್ ಹಾಗೂ 265 ಬಿಎಸ್ 6 ಬಸ್ ಇಂದಿನಿಂದ ಕಾರ್ಯಾರಂಭ ಮಾಡಲಿವೆ. ಒಂದೂವರೆ ಗಂಟೆ ಜಾರ್ಜ್ ಮಾಡಿದರೆ 180 ಕಿ.ಮೀ. ಓಡಾಟ ನಡೆಸಲಿವೆ. ಧ್ವನಿವರ್ದಕ, ಸಿಸಿಟಿವಿ ಬಸ್ ವ್ಯವಸ್ಥೆ ಇದೆ. ಸಂಚಾರ ಸಮಸ್ಯೆಗೆ ಕಡಿವಾಣ ಹಾಕಲು ಮಿನಿ ಬಸ್ ವ್ಯವಸ್ಥೆ ಮಾಡಲಾಗಿದೆ. ಮೆಟ್ರೋ ಫೀಡರ್ ಸೇರಿದಂತೆ ಬೇರೆಡೆಯೂ ಬಸ್ ಸಂಚಾರ ಮಾಡಲಿದೆ. ಕೆಂಗೇರಿ, ಯಶವಂತಪುರ, ಕೆ ಆರ್ ಪುರಂ ಘಟಕದಲ್ಲಿ ಬಸ್ ಕಾರ್ಯಾಚರಣೆ ಇರುತ್ತದೆ. ಪರಿಸರ ಮಾಲಿನ್ಯ ರಹಿತ ಎಲೆಕ್ಟ್ರಿಕ್ ಬಸ್ ಇದಾಗಿದೆ.
ದೇಶದಲ್ಲಿ ಸಬ್ಸಿಡಿಗಳ ಆಧಾರದ ಮೇಲೆ ಸಾರಿಗೆ ಸಂಸ್ಥೆ ನಡೆಸಲು ಕಷ್ಟ
ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿ, ಇಂದು ವಿದ್ಯುತ್ ಚಾಲಿತ & BS 6 ಬಸ್ಸುಗಳಿಗೆ ಚಾಲನೆ ನೀಡಲಾಗಿದೆ. ಟ್ರಾನ್ಸ್ ಪೋರ್ಟ್ ಇಲಾಖೆ ಸರ್ಕಾರ ಜೀವನಾಡಿ ಇದ್ದ ಹಾಗೆ. ದೇಶಗಳಲ್ಲಿ ಜನಸಾಮಾನ್ಯರು ಸಂಚಾರ ಮಾಡಲು ಇರುವ ದೊಡ್ದ ವ್ಯವಸ್ಥೆ ಸಾರಿಗೆ ವ್ಯವಸ್ಥೆ.
ಉತ್ತಮ ಟೆಕ್ನಾಲಜಿ ಒಳಗೊಂಡ ಬಸ್ಗಳು
ಸಾರಿಗೆ ಇಲಾಖೆ ಸರ್ಕಾರದ ಜೀವನಾಡಿ. ಹಲವಾರು ಬದಲಾವಣೆಯೊಂದಿಗೆ ಸಾರಿಗೆ ಸಂಸ್ಥೆ ಮುಂದುವರೆಯುತ್ತಿದೆ. ನಮ್ಮ ಸಾರಿಗೆ ಸಂಸ್ಥೆ ಮುಂದೆ ಬರಬೇಕು ಎಂಬುದು ನಮ್ಮ ಆಶಯ. ಸಬ್ಸಿಡಿ ಆಧಾರದಲ್ಲಿ ಸಾರಿಗೆ ಸಂಸ್ಥೆ ನಡೆಸಲು ಸಾಧ್ಯವಿಲ್ಲ.
ರಾಮುಲು ಡೈನಾಮಿಕ್ ಸಚಿವರು
ವಿದ್ಯುತ್ ಚಾಲಿತ ಬಸ್ಗಳು ವಾಯು ಮಾಲಿನ್ಯವನ್ನು ತಡೆಗಟ್ಟುವ ಕೆಲಸ ಮಾಡುತ್ತದೆ. ಇವುಗಳಿಂದ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಕಡಿಮೆಯಾಗುತ್ತದೆ. ನಾವು ತಂತ್ರಜ್ಞಾನವನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ಮಾಡಬಹುದು. ಸರ್ಕಾರದಿಂದ ಅನುದಾನ ಕೇಳುವುದು ಬಹಳ ಸುಲಭ. ಆದ್ರೆ ಹೆಚ್ಚಿನ ಸೋರಿಕೆ ಸಾರಿಗೆ ಸಂಸ್ಥೆಯಲ್ಲಿ ನಡೆಯುತ್ತಿದೆ.
ವಿಶ್ವದಲ್ಲಿ ಸಂಚಾರ ವ್ಯವಸ್ಥೆ ನಿಯಮ ಪಾಲನೆ ಮಾಡಬೇಕು. ಪರಿಸರ ವ್ಯವಸ್ಥೆ ನಾಶವಾಗದಂತೆ ಸಂಚಾರ ವ್ಯವಸ್ಥೆ ಇರಬೇಕು. ಸರ್ಕಾರ & ಖಾಸಗಿಯಾಗಿ ಇಬ್ಬರು ರೂಲ್ಸ್ ಪಾಲನೆ ಮಾಡಬೇಕು ಎಂದರು.
ಸಿಎಂಗೆ ಅಭಿನಂದನೆ ಸಲ್ಲಿಸಿದ ಶ್ರೀರಾಮುಲು
ಇದೇ ವೇಳೆ, ಸಾರಿಗೆ ಸಚಿವ ಶ್ರೀರಾಮುಲು ಮಾತನಾಡಿ, ಇಂದು ಇಡೀ ರಾಜ್ಯದ ಮಟ್ಟಕ್ಕೆ ಬಹಳ ವಿಶೇಷವಾದ ದಿನ. ರಾಜ್ಯದಲ್ಲಿ ಇತಿಹಾಸ ಸೃಷ್ಟಿ ಮಾಡುವ ದಿನ. ದೇಶದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಪರಿಸರವನ್ನು ಉಳಿಸುವ ಕೆಲಸವನ್ನು ಅನೇಕ ಸಂಘ ಸಂಸ್ಥೆಗಳು ಮಾಡುತ್ತಿದೆ.
ಮುಷ್ಕರ ಮಾಡಬೇಡಿ
ಉತ್ತರ ಕರ್ನಾಟಕದ ಹಳೆ ಬಸ್ ಗಳನ್ನು ಬದಲಾವಣೆ ಮಾಡುತ್ತೇವೆ. ಇನ್ನು ಮುಂದೆ ಯಾವುದೇ ಸರ್ಕಾರ ಬಂದ್ರು ಮುಷ್ಕರ ಮಾಡಬೇಡಿ. ರಾಜಕಾರಣಿಗಳು ಇದನ್ನು ತಮ್ಮ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಮುಷ್ಕರ ಅಸ್ತ್ರ ಬಳಸಬೇಡಿ. ಆನಂತರ ನೀವು ಕೆಲಸ ಕಳೆದುಕೊಂಡು ಅತಂತ್ರರಾಗುತ್ತೀರಿ ಎಂದರು.