ಅಕ್ಕಿ ಮಾರಾಟದ ‘ಹೊಸ ನೀತಿ’ : ಬಿಜೆಪಿ ವಿರುದ್ಧ ಕೆಂಡವಾಗಿರುವ ಕಾಂಗ್ರೆಸ್

ಬೆಂಗಳೂರು:

     ಕರ್ನಾಟಕದ ಜನರಿಗೆ ಅಕ್ಕಿ ವಿತರಿಸಲು ರಾಜ್ಯ ಸರ್ಕಾರ ಕೈಗೊಂಡಿದ್ದ ಅನ್ನ ಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಡ್ಡಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಈ ನಡುವೆ ಬಿಜೆಪಿ ವಿರುದ್ಧ ಕೆಂಡವಾಗಿರುವ ಕಾಂಗ್ರೆಸ್, ಅಕ್ಕಿ ಮಾರಾಟದ ‘ಹೊಸ ನೀತಿ’ಯ ವಿರುದ್ಧ ಗರಂ ಆಗಿದೆ.

     ಹೀಗೆ ‘RSS ಕಚೇರಿಯಲ್ಲಿ ರೂಪಿಸುವ ಹೊಸ ನೀತಿ ಅಧಿಕಾರಿಗಳಿಗೆ ಗೊತ್ತಾಗಲು ಸಾಧ್ಯವಿಲ್ಲ ಅಲ್ಲವೇ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ! ‘ಗ್ಯಾರಂಟಿ ವಾರ್’ ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ಕಾಂಗ್ರೆಸ್ & ಬಿಜೆಪಿ ನಾಯಕರ ಡುವೆ ಮಾತಿನ ಯುದ್ಧ ಮುಂದುವರಿದಿದೆ.

    ಅದರಲ್ಲೂ ರಾಜ್ಯ ಸರ್ಕಾರ ಅಕ್ಕಿ ಖರೀದಿಗೆ ಕೇಂದ್ರದ ಬಳಿ ತೆರಳಿ ಅಕ್ಕಿ ಸಿಗದೆ ವಾಪಸ್ ಬಂದ ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಅತ್ತ ಬಿಜೆಪಿ ಅಕ್ಕಿ ಕೊಡದೆ ಇದ್ದರೆ ನಾವು ಪ್ರತಿಭಟನೆ ಮಾಡುತ್ತೇವೆ, ಸರ್ಕಾರದ ವಿರುದ್ಧ ಬೀದಿಗೆ ಇಳಿದು ಹೋರಾಡುತ್ತೇವೆ ಅಂತಿದೆ. ಇತ್ತ ಕಾಂಗ್ರೆಸ್ ಮಾತ್ರ ಅಕ್ಕಿ ಸಿಗದೇ ಇರಲು ಕಾರಣ ಬಿಜೆಪಿ ಎಂದು ಆರೋಪಿಸಿದೆ. ಕೇಂದ್ರದ ಬಿಜೆಪಿ ಸರ್ಕಾರವೇ ಇದಕ್ಕೆ ಕಾರಣ ಅಂತಿದೆ ಕಾಂಗ್ರೆಸ್, ಹಾಗಾದ್ರೆ ಕಾಂಗ್ರೆಸ್ ಆರೋಪವೇನು? ಸಂಪೂರ್ಣ ಮಾಹಿತಿ ಇಲ್ಲಿದೆ.

     ಇದ್ಯಾವಾಗ “ಹೊಸ ನೀತಿ” ಬಂತು? ಕೇಂದ್ರ ಸರ್ಕಾರದಿಂದ ಅಕ್ಕಿ ಸಿಗದ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ‘ಮೊನ್ನೆಯವರೆಗೆ ರಾಜ್ಯಗಳಿಗೆ ಅಕ್ಕಿ ಮಾರಾಟಕ್ಕೆ ಅವಕಾಶವಿತ್ತು, ಇದ್ಯಾವಾಗ “ಹೊಸ ನೀತಿ” ಬಂತು? ಅಕ್ಕಿ ನೀಡಲು ಒಪ್ಪಿದ ಪ್ರಾದೇಶಿಕ ಅಧಿಕಾರಿಗಳಿಗೆ “ಹೊಸ ನೀತಿ” ಗೊತ್ತಿರಲಿಲ್ಲವಂತೆ, ಹಾಗಾಗಿ ಒಪ್ಪಿದ್ದರಂತೆ! ಇದು FCI ಸ್ಪಷ್ಟನೆ! RSS ಕಚೇರಿಯಲ್ಲಿ ರೂಪಿಸುವ ಹೊಸ ನೀತಿ ಅಧಿಕಾರಿಗಳಿಗೆ ಗೊತ್ತಾಗಲು ಸಾಧ್ಯವಿಲ್ಲ ಅಲ್ಲವೇ @BJP4Karnataka?’ ಎಂದು ಪ್ರಶ್ನಿಸಿದೆ. ಈ ಮೂಲಕ ಬಿಜೆಪಿ ನಾಯಕರ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗ ಮಾಡಿದೆ.

    ಹೀನಾಯ ಸೋಲಿನ ಬಳಿಕ ಬಿಜೆಪಿ ಒಳಗೇ ಬೆಂಕಿ ಹೊತ್ತಿದೆ. ಈ ನಡುವೆ ಇದೇ ವಿಚಾರ ಹಿಡಿದು ಬಿಜೆಪಿ ನಾಯಕರನ್ನು ಕಾಂಗ್ರೆಸ್ ಕೆಣಕುತ್ತಿದೆ. ಅದರಲ್ಲೂ ಕರ್ನಾಟಕದ ವಿಧಾನಸಭೆ ಚುನಾವಣೆ ವೇಳೆ ಮುಂದಾಳತ್ವ ವಹಿಸಿಕೊಂಡಿದ್ದ ಬಿಎಲ್ ಸಂತೋಷ್ & ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಮತ್ತೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದೆ.

    ಈ ವಿಚಾರದಲ್ಲಿ ಮಾಜಿ ಸಿಎಂ ಬೊಮ್ಮಾಯಿ ಅವರ ಹೆಸರನ್ನು ಎಳೆದು ತಂದು, ಸಂತೋಷ್ ಮತ್ತು ಕೇಂದ್ರ ಸಚಿವ ಜೋಶಿ ಅವರ ವಿರುದ್ಧ ವಾಗ್ದಾಳಿ ನಡೆಸಿದೆ. ಹಾಗಾದ್ರೆ ಟ್ವೀಟ್‌ನಲ್ಲಿ ಕಾಂಗ್ರೆಸ್ ಹೇಳಿದ್ದು ಏನು? ಮುಂದೆ ಓದಿ. ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಆರ್‌ಎಸ್ ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧೆ, ಯಾವುದೇ ಮೈತ್ರಿಯಿಲ್ಲ: ಕೆಆರ್‌ಎಸ್ ಕಾಂಗ್ರೆಸ್ “ಟಾರ್ಗೆಟ್ ಲಿಂಗಾಯತ” ಟಾಂಗ್! ಅಂದಹಾಗೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಲಿಂಗಾಯತ ಅಸ್ತ್ರ ಪ್ರಯೋಗ ಮಾಡಿತ್ತು ಕಾಂಗ್ರೆಸ್.

     ಈಗಲೂ ಅದೇ ಅಸ್ತ್ರ ಪ್ರಯೋಗ ಮಾಡಿದ್ದು ‘ಜೋಶಿ, ಸಂತೋಷ್ ಅವರುಗಳು @mepratap ಹೆಗಲ ಮೇಲೆ ಗನ್ನಿಟ್ಟು ಶೂಟ್ ಮಾಡಿದ ಗುಂಡು @BSBommai ಅವರ ಎದೆಗೆ ತಗುಲಿದೆ! ಸಿಎಂ ಆದರೂ ಬಿಜೆಪಿಯ ಗರ್ಭಗುಡಿಯ ಒಳಗೆ ಪ್ರವೇಶ ಪಡೆಯಲಾಗದ ವಲಸಿಗ ಬೊಮ್ಮಾಯಿಯವರೇ ಜೋಶಿ ಸಂತೋಷರ ಮುಂದಿನ ಟಾರ್ಗೆಟ್! ಬೊಮ್ಮಾಯಿಯವರನ್ನು ಮುಗಿಸಿದರೆ “ಟಾರ್ಗೆಟ್ ಲಿಂಗಾಯತ” ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದಂತಾಗುತ್ತದೆ! #BJPvsBJP’ ಎಂದು ಕೇಂದ್ರ ಬಿಜೆಪಿ ನಾಯಕರನ್ನ ಕೆಣಕಿದೆ.

     ಒಟ್ನಲ್ಲಿ ಬಿಜೆಪಿ ಒಳಜಗಳ ಹಾಗೂ ಕೇಂದ್ರ ಸರ್ಕಾರ ಅಕ್ಕಿ ಕೊಡುವ ಮನವಿ ನಿರಾಕರಣೆ ಮಾಡಿರುವುದನ್ನೇ ಕಾಂಗ್ರೆಸ್ ಅಸ್ತ್ರವಾಗಿ ಬಳಸುತ್ತಿದೆ. ಅದರಲ್ಲೂ ಲೋಕಸಭೆ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆಗಳು ಹತ್ತಿರದಲ್ಲಿ ಇರುವಾಗ ಈ ಅಸ್ತ್ರ ಬಿಜೆಪಿಗೆ ಒಳಗೊಳಗೆ ಬೇಸರ ತರಿಸಿದೆ. ಹೀಗಾಗಿ ಮತ್ತೊಂದು ಕಡೆ ಬಿಜೆಪಿ ಕೂಡ ನೀವು ಅಕ್ಕಿ ಕೊಡದೇ ಇದ್ದರೆ ನಾವು ಹೋರಾಟ ಮಾಡ್ತೀವಿ ಅಂತಾ ಕಾಂಗ್ರೆಸ್‌ಗೆ ಸವಾಲು ಹಾಕಿದೆ. ಆದರೆ ಜನ ಮಾತ್ರ ಈ ಎರಡೂ ವಿಚಾರಗಳನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಅನ್ನೋದು ಸುಳ್ಳಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap