ಬೆಂಗಳೂರು : ಇಂದು ಸಿಎಂ ಸಿಟಿ ರೌಂಡ್ಸ್‌

ಬೆಂಗಳೂರು :

    ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಇಂದು ಮಳೆ ಹಾನಿ ಪ್ರದೇಗಳಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.ಇಂದು ಬೆಳಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರು ಸಿಟಿ ರೌಂಡ್ಸ್‌ ಕೈಗೊಂಡಿದ್ದು, ಬೆಂಗಳೂರಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ ಪರಿಶೀಲನೆ ನಡೆಸಲಿದ್ದಾರೆ.

    ಸಿಎಂ ಸಿದ್ದರಾಮಯ್ಯಗೆ ಬಿಬಿಎಂಪಿ, ಬಿಡಬ್ಲುಎಸ್‌ ಎಸ್‌ ಬಿ ಹಾಗೂ ಬಿಡಿಎ ಅಧಿಕಾರಿಗಳು ಸಾಥ್‌ ನೀಡಲಿದ್ದಾರೆ.ಸಿಎಂ ಸಿದ್ದರಾಮಯ್ಯ ಅವರು ಮೊದಲಿಗೆ ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಇರುವ ರಾಜಕಾಲುವೆ ಪರಿಶೀಲನೆ ನಡೆಸಲಿದ್ದಾರೆ.

    ನಂತರ ನಾಯಂಡಹಳ್ಳಿ ಜಂಕ್ಷನ್‌ ಬಳಿಕ ರಾಜಕಾಲುವೆ ಹೂಳು ತೆರವು ಪರಿಶೀಲನೆ, ಜೆ.ಪಿ.ನಗರದ ರಾಗಿಗುಡ್ಡ ಜಂಕ್ಷನ್‌ ವೀಕ್ಷಣೆ, ಅನುಗ್ರಹ ಲೇಔಟ್‌ ನ ರಾಜಕಾಲುವೆ ಕಾಮಗಾರಿ, ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ನ ರಾಜ ಕಾಲುವೆ ಕಾಮಗಾರಿ, ಯೆಮಲೂರು ಬಳಿಕ ರಾಜಕಾಲುವೆ ಕಾಮಗಾರಿ ವೀಕ್ಷಣೆ ಮಾಡಿದ ಬಳಿಕ ಗೃಹ ಕಚೇರಿಗೆ ಸಿಎಂ ಸಿದ್ದರಾಮಯ್ಯ ವಾಪಸ್‌ ಆಗಲಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ