ಸಿಎಂ ಹುದ್ದೆ ದರ್ಪ ತೋರುವ ಹುದ್ದೆಯಲ್ಲ : ಕಾಂಗ್ರೆಸ್

ಬೆಂಗಳೂರು

     ಜನಪ್ರತಿನಿಧಿಗಳು ಹಾಗೂ ಸಚಿವರು, ಮುಖ್ಯಮಂತ್ರಿಗಳು ಅಂತ ರಾಜ್ಯದ ಜನರು ತಮ್ಮ ಸಮಸ್ಯೆಗಳನ್ನ ಹೇಳಿಕೊಂಡು ಬರುತ್ತಾರೆ. ಆದರೆ ಆರ್‌ ಟಿ ನಗರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರ್‌ ಟಿ ನಗರದಲ್ಲಿರುವ ಖಾಸಗಿ ನಿವಾಸದ ಬಳಿ ದೂರದ ಊರಿನಿಂದ ಬಂದ ಮಹಿಳೆ ತಮ್ಮ ಸಮಸ್ಯೆಯನ್ನ ಹೇಳಿಕೊಳ್ಳುತ್ತಾ ಕಣ್ಣಿರಿಟ್ಟಿದ್ದು, ಈ ವಿಡಿಯೋವನ್ನ ಕಾಂಗ್ರೆಸ್‌ ಟ್ವೀಟರ್‌ ನಲ್ಲಿ ಹಂಚಿಕೊಂಡಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದೆ.ಮುಖ್ಯಮಂತ್ರಿ ಹುದ್ದೆ ಎಂದರೆ ದರ್ಪ, ದೌಲತ್ತು, ಅಹಂಕಾರ ಪ್ರದರ್ಶಿಸುವ ಹುದ್ದೆಯಲ್ಲ.

    ಜನರ ನೋವು ಆಲಿಸಿ, ಪರಿಹರಿಸುವ ಜನಸೇವೆಯ ಶ್ರೇಷ್ಠ ಸ್ಥಾನ. ಮಹಿಳೆಯೊಬ್ಬರ ಅಳುವಿನ ಅಳಲು ಕೇಳಿಸಿದರೂ ಕೇಳಿಸದಂತೆ ನಿರ್ಲಕ್ಷಿ ಹೋದ ಬಸವರಾಜ ಬೊಮ್ಮಾಯಿ ಅವರು ಕಾಮನ್ ಮ್ಯಾನ್ ಸಿಎಂ ಎಂದು ಕರೆದುಕೊಳ್ಳುವುದಕ್ಕಿಂತ ಕಾಮನ್ ಸೆನ್ಸ್ ಇಲ್ಲದ ಸಿಎಂ ಎಂದರೆ ಸೂಕ್ತ ಎಂದು ಕಿಡಿಕಾರಿದೆ.

    ಇನ್ನೂ ಇನ್ನೊಂದು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಲಿಂಗಾಯತ ವಿರೋಧಿ ಬಿಜೆಪಿ ಎಂದು ಹ್ಯಾಶ್‌ ಟ್ಯಾಗ್‌ ಬಳಸಿ ಕಿಡಿಕಾರಿದ್ದು, ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಹತ್ತಿಕ್ಕುವ, ಲಿಂಗಾಯತ ಸಮುದಾಯವನ್ನ ನಿರ್ಲಕ್ಷಿಸುವ ಗುಪ್ತ ಅಜೆಂಡಾ ರೂಪುಗೊಂಡಿದೆಯೇ? ಬಿಜೆಪಿ ಶಾಸಕ ಶರಣು ಸಲಾಗರರಿಗೆ ಲಿಂಗಾಯತರಿಗೆ ಸಹಾಯ ಮಾಡುವುದೇ ಸಮಸ್ಯೆಯಂತೆ, ಲಿಂಗಾಯತರಿಗೆ ನೆರವಾಗಬಾರದು ಎಂದು ಬಿಜೆಪಿ ಕಚೇರಿಯಿಂದ ಸೂಚನೆ ಬಂದಿದೆಯೇ? ಹಾಗಾಗಿ ಈ ಅಸಹಾಯಕತೆಯೇ? ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

   ಕಳೆದ ಚುನಾವಣೆಯ ವೇಳೆ ಬಿಜೆಪಿ ನೀಡಿದ್ದ 600 ಕ್ಕೂ ಹೆಚ್ಚಿನ ಭರವಸೆಗಳಲ್ಲಿ ಶೇಕಡಾ 90 ರಷ್ಟು ಭರವಸೆಗಳು ಚರ್ಚೆಗೂ ಬರದೇ ಈಗಾಗಲೇ ಸಮಾಧಿ ಸೇರಿವೆ. ಬಿಜೆಪಿಯ ಸುಳ್ಳಿನ ಭರವಸೆಗಳ ಆತ್ಮಕ್ಕೆ ಎಂದೂ ಶಾಂತಿ ಸಿಗದಿರಲಿ. ಬಿಜೆಪಿಗರ ವಚನ ವಂಚನೆ ಅವರನ್ನು ಕಾಡುತ್ತಲೇ ಇರಲಿ ಎಂದು ಕಾಂಗ್ರೆಸ್‌ ಟ್ವೀಟ್‌ ಮೂಲಕ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap