ಬೆಂಗಳೂರು:

ಕಾಂಗ್ರೆಸ್ನ ಹಗರಣಗಳನ್ನು ಜನರ ಮುಂದಿಡುವ ಕಾಲ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುವ ಮೂಲಕ ವಾಗ್ಧಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆಗುತ್ತಿದೆ. ಎಸ್ಎಫ್ಎಲ್ ವರದಿ ಕೂಡ ಬರಲಿದೆ. ಅದರ ಆಧಾರದ ಮೇಲೆ ಏನು ನಡೆಯಿತು ಎಂಬುದು ತಿಳಿಯಲಿದೆ. ಚಾರ್ಜ್ಶೀಟ್ ಆದಮೇಲೆ ನ್ಯಾಯಾಲಯದಲ್ಲಿ ಸರಿ ತಪ್ಪಿನ ವಿಶ್ಲೇಷಣೆ ಆಗಲಿದೆ. ನಮ್ಮಲಿನ ವ್ಯವಸ್ಥೆ ಪ್ರಕಾರ ಎಲ್ಲವೂ ನಡೆಯಲಿದೆ ಎಂದರು.
ಕಾAಗ್ರೆಸ್ನವರು ಯಾತ್ರೆ ಹೊರಟಿದ್ದಾರೆ. ಹೋಗಲಿ, ಈ ಬಗ್ಗೆ ಯಾವುದೆ ಆಕ್ಷೇಪವಿಲ್ಲ. ಬಹಳ ಶುದ್ಧ, ಪವಿತ್ರ ಹಸ್ತದ ಇವರು, ಯಾತ್ರೆಗೆ ಹೋಗುತ್ತಿದ್ದಾರೆ. ಜನರಿಗೆ ಇವರ ಬಗ್ಗೆ ಗೊತ್ತಿದೆ. ಮೊದಲು ಅವರ ಬೀರುವಿನಲ್ಲಿ ಭ್ರಷ್ಟಾಚಾರದ ಅಸ್ತಿಪಂಜರ ಎಷ್ಟಿದೆ ಎಂಬುದು ಲೆಕ್ಕ ಹಾಕಿಕೊಳ್ಳಲಿ ಎಂದು ತಿಳಿಸಿದರು.
ಕರ್ನಾಟಕದ ಜನತೆ ಕಾಂಗ್ರೆಸ್ಅನ್ನು ಬಹಳ ವರ್ಷದಿಂದ ನೋಡಿದ್ದಾರೆ. ಅವರ ಕಾಲದಲ್ಲಿ ಯಾವ ಹಗರಣ ಆಗಿದೆ ಎಲ್ಲವೂ ಗೊತ್ತಿದೆ. ಅವರು ಮಾಡಿರುವ ಹಗರಣಗಳನ್ನು ಜನರ ಮುಂದಿಡಬೇಕಾಗಲಿದೆ. ಆ ಕಾಲವೂ ಬರಲಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







