ಚಿಕ್ಕನಾಯಕನಹಳ್ಳಿ :
ಪಟ್ಟಣದ ಕೆಪಿಟಿಸಿಎಲ್‍ಗೆ ಅಂದಾಜು 1.5 ಕೋಟಿ ರೂ. ವೆಚ್ಚದ ಹೆಚ್ಚುವರಿ ಟ್ರಾನ್ಸ್ ಫಾರಂ ಅನ್ನು ಉತ್ತರಖಾಂಡ ರಾಜ್ಯದ ಸೀತಾಗಂಜ್‍ನಿಂದ ತರಿಸಲಾಗಿದೆ.
ಕಳೆದ 15 ವರ್ಷದ ಹಿಂದೆ ಹಾಕಿದ್ದ 10 ಎಂವಿಎ ಟ್ರಾನ್ಸ್ ಫಾರಂ ಅನ್ನು ಬದಲಿಸಿ ಈಗ ತಂದಿರುವ ಹೊಸ ಹೆಚ್ಚುವರಿ 20ಎಂವಿಎ(ಮೆಗಾ ವೋಲ್ಟ್ ಆಯಮ್ಸ್) ಟ್ರಾನ್ಸ್ ಫಾರಂನ್ನು ಆ ಜಾಗಕ್ಕೆ ಅಳವಡಿಸಲಾಗುವುದು, ಇದರಿಂದ ಇನ್ನಷ್ಟು ಹೆಚ್ಚಿನ ವಿದ್ಯುತ್ ನಿರ್ವಹಣೆಯನ್ನು ಮಾಡಬಹುದು ಎಂದು ಕೆಪಿಟಿಸಿಎಲ್ ಎಇಇ ವಿಶ್ವನಾಥ್ ತಿಳಿಸಿದರು.
ಹಳೆಯ ಟ್ರಾನ್ಸ್ ಫಾರಂ ಚಿ.ನಾ.ಹಳ್ಳಿ ಪಟ್ಟಣ, ಬಾವನಹಳ್ಳಿ, ಬುಳ್ಳೇನಹಳ್ಳಿ, ಜೆ.ಸಿ.ಪುರ, ಗೋಡೆಕೆರೆ, ಮುದ್ದೇನಹಳ್ಳಿ, ಹೊನ್ನೇಬಾಗಿ ಗಳಿಗೆ ವಿದ್ಯುತ್ ಪ್ರಸರಣವನ್ನು ನೀಡುತ್ತಿತ್ತು. ಈಗ ತಂದಿರುವ 20ಎಂವಿಎ ಪ್ರಸರಣದಿಂದ ಈಗಿನ ಗ್ರಾಮಗಳ ಜೊತೆಗೆ ಬೆಸ್ಕಾಂ ಸೂಚಿಸುವ ಹಳ್ಳಿಗಳಿಗೆ ವಿದ್ಯುತ್ ನ್ನು ನೀಡಲು ಸಹಾಯವಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
