ಚಿಕ್ಕನಾಯಕನಹಳ್ಳಿ :

ತಾಲೂಕಿನ ಶೆಟ್ಟಿಕೆರೆಯಲಿರುವ ಹೊಯ್ಸಳರ ಕಾಲದ ಸುಪ್ರಸಿದ್ಧ ಯೋಗಮಾಧವ ದೇವಾಲಯದ ಸುತ್ತಾ ತಂತಿ ಬೇಲಿ ನಿರ್ಮಿಸಲು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ 16 ಲಕ್ಷ ಹಣದ ಅಂದಾಜು ಪಟ್ಟಿ ಸಿದ್ಧ ಪಡಿಸಿದೆ.
ಶೆಟ್ಟಿಕೆರೆ ಗ್ರಾಮದ ಯೋಗಮಾಧವ ದೇವಾಲಯಕ್ಕೆ ಪುರಾತತ್ವ ಸಂರಕ್ಷಣಾ ಸಹಾಯಕರು ಭೇಟಿ ನೀಡಿ ದೇವಾಲಯವನ್ನು ಪರಿಶೀಲಿಸಿ ನಡೆಸಿದ್ದಾರೆ. ದೇವಾಲಯ ಪುರಾತನ ದೇವಾಲಯವಾಗಿದ್ದು ಈ ಭಾಗದಲ್ಲಿ ಇತಿಹಾಸ ಪ್ರಸಿದ್ಧ ಏಕೈಕ ದೇವಾಲಯವಾಗಿದೆ. ದೇವಾಲಯದ ಸುತ್ತ ಕಾಂಪೌಂಡ್ ಗೋಡೆ ಇಲ್ಲದಿರುವುದರಿಂದ ಸಂಜೆಯಾಯಿತೆಂದರೆ ಪುಂಡು-ಪೆಪೋಕರಿಗಳ ಉಪಟಳ ಹೇಳತೀರದಾಗಿದೆ, ಈ ಬಗ್ಗೆ ತಿಳಿ ಹೇಳಲು ಹೋದವರ ಮೇಲೆ ರೇಗುವುದು, ಧಮಕಿಯಾಕುವುದು ಮಾಡುವುದಲ್ಲದೇ ಇಲ್ಲಿ ಅನೈತಿಕ ಚಟುವಟಿಕೆ ತಾಣವಾಗುತಿದೆ ಎಂದು ಅಲ್ಲಿನ ಅರ್ಚಕರು ದೂರಿರುವ ಬಗ್ಗೆ ಪುರಾತತ್ವ ಇಲಾಖೆಯವರು ವರದಿ ಮಾಡಿಕೊಂಡು ಕಛೇರಿಗೆ ತಿಳಿಸಿದ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಲೂ ತಂತಿ ಬೇಲಿ ನಿರ್ಮಿಸಲು 16 ಲಕ್ಷ ಹಣಕ್ಕೆ ಇಲಾಖೆ ಅಂದಾಜು ಪಟ್ಟಿ ಸಿದ್ಧ ಪಡಿಸಿದೆ ಹಾಗಾಗಿ ಈ ಜಾಗಕ್ಕೆ ತಂತಿ ಬೇಲಿ ನಿರ್ಮಿಸಲು ಸಂರಕಕ್ಷಣೆ ಮಾಡಲು ಕ್ರಮ ಜರುಗಿಸುವ ಬಗ್ಗೆ ತಹಶಿಲ್ದಾರರಿಗೆ ಪತ್ರ ಬರೆದಿದ್ದಾರೆ.
ಹಿಂದೂ ದೇವಾಲಯದ ರಕ್ಷಣೆಗೆ ನಿಂತ ಮುಸ್ಲಿಂ ಯುವಕ:

ದೇವಾಲಯದ ಸುತ್ತಾ ರಕ್ಷಣಾ ಗೋಡೆ ನಿರ್ಮಿಸಲು ಒತ್ತಾಯ ಮಾಡಿದ್ದು, ಪುರತತ್ವ ಇಲಾಖೆಯ ಗಮನ ಸೆಳೆಯುವಂತೆ ಮಾಡಿದ್ದು ಬಾಡಿಗೆ ವಾಹನ ಚಾಲಕ, ಸಾಮಾಜಿಕ ಕಾರ್ಯಕರ್ತ ಮಹಮದ್ ಹುಸೇನ್ (ಗುಂಡ), ಈತನ ಈ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ಬಿಂಬಿಸುವ ಐತಿಹಾಸಿಕ ಸ್ಮರಕಗಳನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಬೇಕು ಎನ್ನುತ್ತಾರೆ ಹುಸೇನ್.
ಧರ್ಮ ಸುಹಿಷ್ಣತೆ, ಅರಣ್ಯ ರಕ್ಷಣೆ, ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ಮುಂಜೂಣಿಯಲ್ಲಿ ನಿಲ್ಲುವ ಈ ಯುವಕ, ನೆರಳು ಎಂಬ ಸಂಘಟನೆ ಮೂಲಕ ಪ್ರಾಚೀನ ಕಲ್ಯಾಣಿಗಳ ಸ್ವಚ್ಚತೆಯನ್ನು ಮಾಡುತ್ತಾ ಬಂದಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








