ಪಿಯೂ ವಿದ್ಯಾರ್ಥಿಗಳಿಗೂ ಬಿಸಿಯೂಟ : ಸರ್ಕಾರಕ್ಕೆ ಮನವಿ

ಚಿಕ್ಕನಾಯಕನಹಳ್ಳಿ  : 

      ಮುಂದಿನ ದಿನಗಳಲ್ಲಿ ಬಿಸಿಯೂಟವನ್ನು ಪಿಯುಸಿ ಕಾಲೇಜ್‍ಗೂ ವಿಸ್ತರಿಬೇಕೆಂಬ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ ಎಂದು ವಿಧಾನಸಭಾ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು.

     ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹಳ ಕ್ಲಿಷ್ಠಕರವಾದ ಪರಿಸ್ಥಿತಿಯಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆ ಹಾಗೂ ತರಗತಿ ಪ್ರಾರಂಭಿಸುವ ಬಗ್ಗೆ, ಮಕ್ಕಳು, ಶಿಕ್ಷಕರು, ಪೆÇೀಷಕರಲ್ಲಿ ಜಾಗೃತಿ ಮೂಡಿಸಿರುವ ಶಿಕ್ಷಣ ಇಲಾಖೆ, ಪ್ರತಿ ಸಂದರ್ಭದಲ್ಲೂ ಬಹಳಷ್ಟು ಎಚ್ಚರಿಕೆಗಳನ್ನು ತೆಗೆದುಕೊಂಡ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ರವರ ಪಾತ್ರ ಹಿರಿಯದು ಎಂದರು.

      ಇನ್ನೂ ಎರಡು, ಮೂರು ತಿಂಗಳಲ್ಲಿ ಖಾಸಗಿ ಶಿಕ್ಷಕರಿಗೆ ಒಂದು ಪ್ಯಾಕೇಜ್ ನೀಡುವ ಸಂಭವವಿದೆ, ಶಿಕ್ಷಕರ ಸಮುದಾಯವನ್ನು ಮತ್ತು ಉಪನ್ಯಾಸಕರನ್ನು ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ, ಕಾಲ್ಪನಿಕ ವೇತನವನ್ನು ಕೊಡಲೇಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಸರ್ಕಾರವೂ ಒಪ್ಪಿದೆ ಎಂದರು.

      ಸರ್ಕಾರ ಎನ್.ಪಿ.ಎಸ್ ಪದ್ದತಿ ತೆಗೆದು, ಓಪಿಎಸ್ ಪದ್ದತಿ ತರುತ್ತಿದೆ, ಶಿಕ್ಷಕರಿಗೂ ಆಯುಷ್ಮಾನ್ ಭಾರತ್, ಆರೋಗ್ಯ ವಿಮೆ ಕೊಡಬೇಕು ಎಂದು ಚಿಂತಿಸಿದೆ ಎಂದರು.

     ವಿಧಾನ ಪರಿಷತ್ ಸದಸ್ಯ ಎಂ.ಚಿದಾನಂದ ಗೌಡ ಮಾತನಾಡಿ, ತಾಲ್ಲೂಕಿನ ವಕೀಲರು, ಉಪನ್ಯಾಸಕರು, ಶಿಕ್ಷಕರು, ವೈದ್ಯರು, ಇಂಜನಿಯರ್, ನಿರುದ್ಯೋಗಿ ಯುವಕ ಮಿತ್ರರು, ಮಾಧ್ಯಮ ಮಿತ್ರರೆಲ್ಲರೂ ಸಹಕಾರ ನೀಡಿದ್ದರಿಂದ ಚಿ.ನಾ.ಹಳ್ಳಿ ತಾಲ್ಲೂಕಿನಿಂದ ನನಗೆ ಅತಿ ಹೆಚ್ಚು ಮತಗಳು ದೊರಕಿ ಗೆಲುವು ಪಡೆಯಲು ಸಾಧ್ಯವಾಯಿತು, ಸುಮಾರು 7184ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲವು ಪಡೆದಿದ್ದೇನೆ ಎಂದರು.

      ರಾಜ್ಯ ಸರ್ಕಾರ ಪದವೀಧರ ನಿರುದ್ಯೋಗಿಗಳ ಪರವಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ, ಮುಂದಿನ ಬಜೆಟ್ ನಲ್ಲಿ ಸುಮಾರು 10ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ 2ಸಾವಿರ ಪ್ರೌಢಶಾಲಾ ಶಿಕ್ಷಕರನ್ನು ನೇಮಿಸಿಕೊಳ್ಳಲು ಸರ್ಕಾರ ಯೋಚಿಸುತ್ತಿದೆ, ಬಿಜೆಪಿಯಲ್ಲಿ 13ಮಂದಿ ಎಂಎಲ್ ಸಿಗಳ ತಂಡ ಹಾಗೂ ಬೇರೆ ಪಕ್ಷದ 24 ಎಂಎಲ್‍ಸಿಗಳು ಸಹ ಒಂದೇ ದಿಕ್ಕಿನಲ್ಲಿ ಯೋಚಿಸುತ್ತಿದ್ದೇವೆ ಮುಂದಿನ ದಿನಗಳಲ್ಲಿ ಹೊಸ ಕ್ರಾಂತಿಯಾಗುತ್ತದೆ ಎಂದರು.

       ನನ್ನ ವ್ಯಾಪ್ತಿಗೆ ಬರುವ 5 ಜಿಲ್ಲೆಗಳಲ್ಲಿ ಜಿಲ್ಲೆಗೊಂದರಂತೆ ಪದವೀಧರರಿಗಾಗಿ ಸ್ಪರ್ಧಾ ಭವನ, ಸ್ಪರ್ಧಾ ಕೇಂದ್ರ ತೆರೆದು ಅದರಲ್ಲಿ 3 ಅಂತಸ್ಥಿನ ಕಟ್ಟಡ ಕಟ್ಟಿ ಸೆಮಿನಾರ್ ಹಾಲ್, ರೀಡಿಂಗ್ ರೂಮ್, ಗ್ರಂಥಾಲಯದ ವ್ಯವಸ್ಥೆ ಮಾಡಿ ಇಡೀ ಜಿಲ್ಲೆಯ 150 ರಿಂದ 200 ಮಂದಿ ಕೂತು ಯಾವುದೇ ತೊಂದರೆ ಇಲ್ಲದಂತೆ ಸ್ಪಾರ್ಧಾತ್ಮ ಪರೀಕ್ಷೆಗಳಲ್ಲಿ ತೊಡಗಿಸಿಕೊಳ್ಳುವುದು ಹಾಗೂ ನಿವೃತ್ತ ಐಎಎಸ್, ಕೆಎಎಸ್ ಅಧಿಕಾರಿಗಳನ್ನು ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳವ ತೀರ್ಮಾನವಿದೆ ಎಂದರು.

      ಪ್ರತಿ ತಾಲ್ಲೂಕಿನಲ್ಲೂ ಒಂದೊಂದು ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಅದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಆಸೆ ಇದೆ, ಶಿರಾ ತಾಲ್ಲೂಕಿನ ಬರಗೂರು ಗ್ರಾಮದಲ್ಲಿ ದತ್ತು ತೆಗೆದುಕೊಂಡಿದ್ದೇನೆ, ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಳ್ಳಲು ಮಾನದಂಡ ಮಕ್ಕಳು ಹೆಚ್ಚಾಗಿರಬೇಕು, ಶಾಲೆಯು 4 ರಿಂದ 5 ಎಕರೆ ಜಾಗವಿರಬೇಕು, 6 ರಿಂದ 12ನೇ ತರಗತಿಯ ಮಕ್ಕಳಿಗೆ ಒಂದೇ ಸೂರಿನಡಿ ಎಲ್ಲಾ ಸೌಲಭ್ಯ ಸಿಗುವಂತೆ ಮಾಡುತ್ತೇವೆ, ಇದಕ್ಕೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಮತ್ತು ದಾನಿಗಳಿಂದ ಸಂಗ್ರಹಿಸಿ ಮಾಡುವುದಾಗಿ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap